Janataa24 NEWS DESK
Gubbi: ಕೊಳೆತು ನಾರುತ್ತಿರುವ ಚರಂಡಿಗಳು- ಶ್ರೀಸಾಮಾನ್ಯರನ್ನು ಕಡೆಗಣಿಸಿದ ಅಧಿಕಾರಿಗಳು.
ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಬ್ಯಾಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಡೇನ್ ಸಾಬ್ ಪಾಳ್ಯವು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಗ್ರಾಮವಾಗಿದೆ.
ಕಳೆದ ಹತ್ತು ವರ್ಷದ ಹಿಂದೆ ಚರಂಡಿ ನಿರ್ಮಾಣವಾಗಿದ್ದು ಅಂದಿನಿಂದ ಇಂದಿವನವರೆಗೂ ಚರಂಡಿಯನ್ನು ಸ್ವಚ್ಛಗೊಳಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳೀಯ ನಿವಾಸಿ ರಿಜ್ವಾನ್ ಪಾಷಾ ಮಾತನಾಡಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಿದರೂ ಪಂಚಾಯಿತಿ ಮೂಲಭೂತ ಚರಂಡಿ ಸ್ವಚ್ಛಗೊಳಿಸುವಲ್ಲಿ ವಿಫಲವಾಗಿದೆ, ಹಾಗೂ ಚರಂಡಿ ಸಂಪೂರ್ಣವಾಗಿ ತ್ಯಾಜ್ಯ, ಕಲುಷತ ಕೊಳಚೆ ನೀರಿನಿಂದ ಆವೃತವಾಗಿದ್ದು ಚರಂಡಿಯಲ್ಲಿ ನೀರು ಹರಿದು ಮುಂದಕ್ಕೆ ಹೋಗದೆ ಚರಂಡಿಯಲ್ಲಿ ನಿಂತು ಚರಂಡಿಯ ಅಕ್ಕ ಪಕ್ಕದ ಮನೆಗಳು ಶಿಥಿಲವಾಗಿವೆ. ಇನ್ನು ಎರಡು ಮೂರು ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳು ಚರಂಡಿಯನ್ನು ಸ್ವಚ್ಛಗೊಳಿಸದೆ ಹೋದರೆ ಗ್ರಾಮ ಪಂಚಾಯಿತಿಗೆ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕಿಡಿ ಕಾರಿದರು.
ಗ್ರಾಮದ ಮಹಿಳೆ ಫಮೀದಾ ಮಾತನಾಡಿ ಮನೆ ಮುಂದಿನ ಚರಂಡಿಗಳು ಕೊಳಚೆ ನೀರಿನಿಂದ ಸಂಪೂರ್ಣ ಆವೃತವಾಗಿ ದುರ್ವಾಸನೆ ಬರುತ್ತಿದ್ದು, ಹಲವು ಸಾಂಕ್ರಾಮಿಕ ಮತ್ತು ಮಾರಕ ರೋಗಗಳಿಗೆ ಕಾರಣವಾಗುತ್ತದೆ.
ಇತ್ತೀಚಿಗೆ ರಾಜ್ಯದಲ್ಲಿ ಡೆಂಗ್ಯೂ ನಂತಹ ಸಾಂಕ್ರಾಮಿಕ ರೋಗ ಹರಡುತ್ತಿದ್ದು ನಮ್ಮ ಗ್ರಾಮದ ಜನರು ಭಯ ಬೀತರಾಗಿದ್ದಾರೆ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ.
ರಾತ್ರಿ ವೇಳೆಯಲ್ಲಿ ವಿಷಪೂರಿತ ವಿಷ ಜಂತುಗಳ ಕಾಟದಿಂದ ಮಕ್ಕಳು ಮತ್ತು ವೃದ್ದರೂ ಆಚೆ ಬರಲು ಭಯದ ವಾತಾವರಣ ಸೃಷ್ಟಿಯಾಗಿದೆ.ಪ್ರತಿನಿತ್ಯ ಹಗಲಿನಲ್ಲಿಯೂ ಸಹ ಬಾಗಿಲನ್ನು ಹಾಕಿಕೊಂಡು ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಸ್ಥಳೀಯ ನಿವಾಸಿ ಸುಭಾನ್ ಮಾತನಾಡಿ ಕಳೆದ ನಾಲ್ಕು ಐದು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಚರಂಡಿಯ ಸ್ವಚ್ಛತೆಗೊಳಿಸಲು ಮನವಿ ಸಲ್ಲಿಸಿದರು. ಅಧಿಕಾರಿಗಳಾಗಲೇ ಜನಪ್ರತಿನಿಧಿಗಳಾಗಲಿ ತಾಲೂಕು ಅಧಿಕಾರಿಗಳಾಗಲಿ ಈ ಗ್ರಾಮದ ಕಡೆಗೆ ತಿರುಗಿಯು ಸಹ ನೋಡುತ್ತಿಲ್ಲ. ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಕಣ್ಮರೆಯಾಗಿದ್ದು ಗ್ರಾಮ ಪಂಚಾಯತಿ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಈ ಸಮಸ್ಯೆಯನ್ನು ಬಗೆ ಹರಿಸದೆ ಹೋದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪಂಚಾಯತಿ ಮುಂಭಾಗದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಸೀರ್ ಅಹಮದ್, ರೆಹಮಾನ್ ನಝೀಮಾ ಗೌಸ್, ಮದಿನ, ಮಹಮದ್ ಇಕ್ಬಾಲ್, ಶಾಹಿದಾಬಿ, ಇರ್ಫಾನ್, ಬಷಿರ್,ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/bengaluru-action-to-solve-parking-parameshwar/