Janataa24 NEWS DESK
Gubbi: ಸದೃಢ ರಾಷ್ಟ್ರ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆಶಿಕ್ಷಣದಿಂದ ಮಾತ್ರ ಸಾಧ್ಯ –ಷಡಕ್ಷರಿ ಶ್ರೀ.

ಗುಬ್ಬಿ: ಯಾವುದೇ ಒಂದು ರಾಷ್ಟ್ರವು ಸದೃಢ ರಾಷ್ಟ್ರವಾಗಬೇಕಾದರೆ ಹಾಗೂ ಒಂದು ಸಮುದಾಯವು ಸಮಾಜದ ಮುನ್ನೆಲೆಗೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ . ಈಗಿನ ಯುವ ಪೀಳಿಗೆಯು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕೆಂದು ಶ್ರೀ ಷಡಕ್ಷರಿ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಕಡಬ ಹೋಬಳಿ ವ್ಯಾಪ್ತಿಯ ಮೆಳೇಕಲ್ಲಹಳ್ಳಿ ಗ್ರಾಮದಲ್ಲಿ ಚಿಕ್ಕಪುರದಮ್ಮ ದೇವಿ ಯವರ ನೂತನ ದೇವಸ್ಥಾನ ಕಳಸ ಮತ್ತು ವಿಗ್ರಹ ಪ್ರತಿಷ್ಠಾಪನ ಮಹೋತ್ಸವವನ್ನು ನೆರವೇರಿಸಿ ಮಾತನಾಡಿದವರು ದೇವಾಲಯಗಳನ್ನು ಮನುಷ್ಯನ ಮನ ಸಂತೃಪ್ತಿಗಾಗಿ ನಿರ್ಮಿಸಬೇಕೆ ಹೊರತು ಆಡಂಬರಕ್ಕಾಗಲ್ಲ. ಯಾವುದೇ ಒಂದು ಸಮಾಜವು ಸದೃಢ ಸಮಾಜವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ ನಮ್ಮ ಸಮಾಜವು ಸಹ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಪ್ರಜ್ಞಾವಂತರಾಗಬೇಕು ಶಿಕ್ಷಣವಂತರಾದರೆ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗುತ್ತೇವೆ ಈಗಿನ ಯುವಕರು ವಿಚಾರವಂತರಾಗಬೇಕು, ಪ್ರಜ್ಞಾವಂತರಾಗಬೇಕು ಹಾಗೂ ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡಬೇಕು ಮೇ 5 ರಿಂದ ಜಾತಿ ಗಣತಿಯು ಪ್ರಾರಂಭವಾಗಲಿದ್ದು ಗಣತಿ ದಾರರು ಮನೆ ಬಾಗಿಲಿಗೆ ಬಂದಾಗ ಆದಿ ಕರ್ನಾಟಕ, ಆದಿ ಆಂಧ್ರ, ಹರಿಜನ, ಮಾದರ, ಎಂಬ ಪದ ಬಳಸದೆ ಮಾದಿಗ ಎಂದು ನಮೂದಿಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಶಿವನಂಜಯ್ಯ ಮಾತನಾಡಿ ಒಂದು ಕಾಲದಲ್ಲಿ ದೇವಾಲಯಕ್ಕೆ ಪ್ರವೇಶವಿಲ್ಲದೆ ತಾವಾಗಿಯೇ ತಮ್ಮ ಇಷ್ಟ ದೇವತೆಗಳನ್ನು ಪ್ರತಿಷ್ಠಾಪನೆ ಮಾಡಿ ತಮ್ಮದೇ ಆಚಾರ ವಿಚಾರಗಳಲ್ಲಿ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಿದ್ದೇವು .
ಅದೇ ರೀತಿಯಾಗಿ ಉಳ್ಳವರು ಶೈಕ್ಷಣಿಕವಾಗಿ,ಆರ್ಥಿಕವಾಗಿ, ರಾಜಕೀಯವಾಗಿ ಪ್ರಾಬಲ್ಯ ಹೊಂದುತ್ತಿದ್ದು ನಮ್ಮ ತಳ ಸಮುದಾಯಗಳು ಸಹ ವಿಚಾರವಂತರು ಶಿಕ್ಷಣವಂತರಾಗಬೇಕಾಗಿದೆ ಎಂದು ತಿಳಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಡಾ, ಬಿ ಆರ್ ಅಂಬೇಡ್ಕರ್ ಅವರ ಅನುಯಾಯಿಯಾದ ನಾವುಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದಾಗ ನಾವು ನಮ್ಮ ಸಮುದಾಯ ಪ್ರಗತಿಯತ್ತ ಸಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ್, ಚನ್ನಿಗಪ್ಪ, ಕೊಪ್ಪ ದೇವರಾಜು,ಯತೀಶ್, ದಿವಾಕರಯ್ಯ, ದಲಿತ ಮುಖಂಡರಾದ ಕಡಬ ಶಂಕರ್, ನಟರಾಜು, ಈಶ್ವರಯ್ಯ, ಮಹೇಶ್, ಅಂಜಿನಪ್ಪ ಸೇರಿದಂತೆ ಇತರರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.