Janataa24 NEWS DESK

ಬಾಗಲಕೋಟೆ: ಬಾಗಲಕೋಟೆಯ ಪ್ರವಾಸಿ ಮಂದಿರದಲ್ಲಿ ಇಂದು ಎಸ್ ಸಿ ಎಸ್ ಟಿ ಅಲೆಮಾರಿ ಸಮುದಾಯಗಳ ಕುಂದುಕೊರತೆ ಸಭೆ ನಡೆಸಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ವ್ಯವಸ್ಥಾಪಕರಾದ ಸುರೇಶ್ ನಾಯಕ ಅವರ ನೇತೃತ್ವದಲ್ಲಿ ನಡೆಯಿತು.
ಜಿಲ್ಲೆಯಲ್ಲಿರುವ ಎಸ್ ಸಿ ಎಸ್ ಟಿ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಮುಖಂಡರುಗಳು ತಮ್ಮ ಸಮುದಾಯಗಳ ಮೂಲಭೂತ ಸಮಸ್ಯೆಗಳಾದ ಆರೋಗ್ಯ, ಶಿಕ್ಷಣ,ವಸತಿ, ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸಿದರು.
ಆಲಿಸಿದ ಅಲೆಮಾರಿ ಅಭಿವೃದ್ಧಿ ವ್ಯವಸ್ಥಾಪಕರಾದ ಸುರೇಶ್ ನಾಯಕ ಅವರು ಕುಂದುಕೊರತೆಗಳನ್ನು ಆಲಿಸಿ ಸರಕಾರದಿಂದ ಸಿಗುವ ಅನುದಾನಗಳು ಹಾಗೂ ಇತ್ತೀಚಿಗೆ ಆದೇಶ ಗೊಂಡಿರುವ ಯೋಜನೆಗಳ ಬಗ್ಗೆ ಮಾದ್ಯಮಗಳ ಎದುರು ಸವಿಸ್ತಾರವಾಗಿ ಮಾತನಾಡಿದರು.
ಕುಂದು ಕೊರತೆ ಸಭೆಯ ನಂತರ ಸುರೇಶ್ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಚನ್ನ ಹೊಲೆಯದಾಸರ ಹಾಗೂ ಮಾಲದಾಸರ ಜನಸೇವಾ ಸಮಿತಿಯ ರಾಜ್ಯಾಧ್ಯಕ್ಷರು ಬಸವರಾಜ ನಾರಾಯಣಕರ್… ಹಾವೇರಿ ಜಿಲ್ಲಾ ಮಹಿಳಾ ಅಧ್ಯಕ್ಷರು ಸಾವಿತ್ರಿ ರತ್ನಾಕರ, ರಾಜ್ಯ ಉಪಾಧ್ಯಕ್ಷರು ಸಂದೀಪಕುಮಾರ್ ದಾಸರ,,.. ಸಿಳ್ಳೆಕ್ಯಾತರ ಜಿಲ್ಲಾ ಅಧ್ಯಕ್ಷರು ಮದ್ದಾನಪ್ಪ ಸಿಳ್ಳೆಕ್ಯಾತರ,, ಹನಮಂತ ಭಜಂತ್ರಿ,, ಶಂಕರ್ ಭಜಂತ್ರಿ. ಚಂದ್ರು ಹಿಮ್ಮಡಿ, ಮಂಗಳಪ್ಪ ಸಿಳ್ಳಿಕೇತರ, ಸಂತೋಷ್ ಹಕ್ಕೆನ್ನವರ ಸೇರಿದಂತೆ ಇನ್ನೂ ಅನೇಕ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟ