Janataa24 NEWS DESK

ಪಾವಗಡ: ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವಿಗೀಡಾಗಿದ್ದ ಘಟನೆ ಮಾಸುವ ಮುನ್ನವೇ ಪಾವಗಡದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ನಕಲಿ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್‌ನಿಂದ ರೋಗಿಯೊಬ್ಬರು (Fake Doctor) ಮೃತಪಟ್ಟಿದ್ದಾರೆ. ಪಾವಗಡ ತಾಲೂಕಿನ ಕೊತ್ತೂರು ಮೂಲದ ಕೋಟೆ ಚಿತ್ತಯ್ಯ (58) ಮೃತ ದುರ್ದೈವಿ.
ಅಮಾಯಕ ವೃದ್ಧನನ್ನು ನಕಲಿ ವೈದ್ಯ ಮಾರುತಿ ಎಂಬಾತ ಬಲಿ ತೆಗೆದುಕೊಂಡಿದ್ದಾನೆ. ತುಮಕೂರಿನ ಪಾವಗಡ ತಾಲೂಕು ಕಿಲಾರ್ಲಹಳ್ಳಿ ಗ್ರಾಮದಲ್ಲಿ ಮಾರುತಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಇದರ ಅರಿವು ಇರದ ಕೋಟೆ ಚಿತ್ತಯ್ಯ, ಅನಾರೋಗ್ಯವೆಂದು ಮಾರುತಿ ಬಳಿ ಹೋಗಿದ್ದಾರೆ. ಆದರೆ ಎಡವಟ್ಟು ಡಾಕ್ಟರ್ ಕೊಟ್ಟ ಇಂಜೆಕ್ಷನ್‌ಗೆ ಕ್ಷಣ ಮಾತ್ರದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಕುಟುಂಬಸ್ಥರು ವೈದ್ಯನ ವಿರುದ್ಧ ದೂರು ನೀಡಿದ್ದಾರೆ.
ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದೆ. ಅಸಲಿ ಯಾರು ನಕಲಿ ವೈದ್ಯರು ಯಾರು ಎಂಬುದು ತಿಳಿಯದೇ ಅಮಾಯಕರು ದಿನೇದಿನೆ ನಕಲಿ ವೈದ್ಯರಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ನಕಲಿ ವೈದ್ಯರ ರಕ್ಷಣೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಿಂತಿದ್ದರಾ ಎಂಬ ಅನುಮಾನ ಮೂಡಿಸುತ್ತಿದೆ. ನಕಲಿ ವೈದ್ಯರು ರಾಜಾರೋಷವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರೂ ಕ್ರಮವಹಿಸಿದೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ನಕಲಿ ವೈದ್ಯರ ಹಾವಳಿಗೆ ಅಧಿಕಾರಿಗಳ ಕುಮ್ಮಕ್ಕು.?
ಇದರ ಮಧ್ಯದಲ್ಲಿ ನಕಲಿ ವೈದ್ಯರಿಂದ ಅದೆಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೊ?
ಇವಕ್ಕೆಲ್ಲ ಕುಮ್ಮಕ್ಕು ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳೇ ಮೂಲ ಕಾರಣ .
ಈಗಾಗಲೇ ತಾಲೂಕಿನಲ್ಲಿ ಹಲವು ವರ್ಷಗಳಿಂದ ತಲೆ ಎತ್ತಿರುವ ನಕಲಿ ವೈದ್ಯರುಗಳ ತಂಡ.
ಇವರ ರಕ್ಷಣೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿಗಳು ಈ ಭಾಗದ ಜನ ಪ್ರತಿನಿಧಿಗಳು ಮೂಲ ಕಾರಣ.
ಅದೆಷ್ಟು ಅಮಾಯಕ ಜನರು ಬಲಿಯಾಗಿದ್ದಾರೆ ಈ ನಕಲಿ ವೈದ್ಯರ ಕೈಯಿಂದ.
ಹೈಟೆಕ್ ಆಸ್ಪತ್ರೆಗಳಾಗಿ ಮಾಡಿಕೊಂಡು ರಾಜಾರೋಷವಾಗಿ ಧಂದೆ ನಡೆಸುತ್ತಿದ್ದಾರೆ.
ಯಾರು ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲವೆಂದು ಸವಾಲು ಹಾಕಿ ಗಟ್ಟಿಯಾಗಿ ಬೇರು ಬಿಟ್ಟುಕೊಂಡು ಇದ್ದಾರೆ.
ಪಾವಗಡ ತಾಲೂಕಿನ ಲಿಂಗದಳ್ಳಿ. ಹೊಸಕೋಟೆ ಕಿಲಾರದಹಳ್ಳಿ. ದೊಮ್ಮತ್ಮರಿ ನಾಗಲಮಡಿಕೆ .ಹೀಗೆ ತಾಲೂಕಿನ ಮೂಲಮಲೆಯಲ್ಲಿ ಬೇಡಿ ಬಿಟ್ಟಿರುವ ನಕಲಿ ವೈದ್ಯರ ತಂಡ.
ಈಗಾಗಲೇ ಈ ಹಿಂದೆ ಹಲವು ನಕಲಿ ವೈದ್ಯರ ಮೇಲೆ ಪ್ರಕರಣ ಸಹ ದಾಖಲಾಗಿದೆ ಆದರೂ ಸಹ ಕ್ಯಾರೆ ಅನ್ನದ ನಕಲಿ ವೈದ್ಯರು.
ತಾಲೂಕಿನಲ್ಲಿರುವ ಐ.ಎಂ.ಎ. ಸಂಘಟನೆ ಏನು ಮಾಡುತ್ತಿದೆ.
ಜಿಲ್ಲಾ ವೈದ್ಯಧಿಕಾರಿ ಮಂಜುನಾಥ್ ನಿದ್ದೆಗೆ ಜಾರಿದ್ದಾರೆಯೇ?
ವರದಿ: ಇಮ್ರಾನ್ ಉಲ್ಲಾ ಪಾವಗಡ.
https://www.janataa24.com/acid-attack-on-three-female-students-of-kadaba-college-mangaluru/