ED Raid: ಗೃಹ ಸಚಿವ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ.!

Janataa24 NEWS DESK 

 

ED Raid: ಗೃಹ ಸಚಿವ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ.!

 

ED Raid: ಗೃಹ ಸಚಿವ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ.!

ತುಮಕೂರು: ಗೃಹ ಸಚಿವ ಜಿ ಪರಮೇಶ್ವರ್ ಅವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾಲೇಜುಗಳಾದ ತುಮಕೂರಿನ ಎಸ್ಎಸ್ಐಟಿ(SSIT) ಹಾಗೂ ಸಿದ್ದಾರ್ಥ ಮೆಡಿಕಲ್ ಸೈನ್ಸ್ ಕಾಲೇಜಿನ ಮೇಲೆ ಹಾಗೂ ನೆಲಮಂಗಲದ ಟಿ.ಬೇಗೂರು ಬಳಿಯ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಮೇಲೆ ಮೇ 21ರಂದು ಜಾರಿ ನಿರ್ದೇಶನಾಲಯದ(ENFORCEMENT DIRECTORATE) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ಕಡೆ ಪ್ರತ್ಯೇಕವಾಗಿ ಏಕಕಾಲದಲ್ಲಿ ದಾಳಿಯಾಗಿದೆ.

 

2019ರಲ್ಲಿಯೂ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಮೇಲೆ ಆದಾಯ ತೆರಿಗೆ ಇಲಾಖೆ(Income Tax) ಅಧಿಕಾರಿಗಳಿಂದ ದಾಳಿಯಾಗಿತ್ತು.

 

ತುಮಕೂರಿನ ಹೆಗ್ಗೆರೆ ಬಳಿ ಇರುವ ಮೆಡಿಕಲ್ ಕಾಲೇಜಿಗೆ 5 ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳು, ನೇರವಾಗಿ ಕಾಲೇಜಿನ ಆಡಳಿತ ಕಚೇರಿಗೆ ಹೋಗಿ ಅಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು. ಇತ್ತ, ತುಮಕೂರು ನಗರ ವ್ಯಾಪ್ತಿಯ ಮರಳೂರು ದಿಣ್ಣೆ ಪ್ರಾಂತ್ಯದಲ್ಲಿರುವ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(SSIT)ಯಲ್ಲಿಯೂ ಅಧಿಕಾರಿಗಳು ತಲಾಷ್ ನಡೆಸಿದ್ದಾರೆ.

 

ಪ್ರತ್ಯೇಕ ಅಧಿಕಾರಿಗಳ ತಂಡವು ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು. 30 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ED Raid: ಸ್ಫೋಟಕ ಹೇಳಿಕೆ ಕೊಟ್ಟ ವಿಪಕ್ಷ ನಾಯಕ ಆರ್.ಅಶೋಕ್.!

ಇನ್ನು ರನ್ಯಾ ರಾವ್‌(Ranya Rao) ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ ಬೆಳಕಿಗೆ ಬಂದ ನಂತರ ಈ ಪ್ರಕರಣದಲ್ಲಿ ಹಲವಾರು ಪ್ರಭಾವಿ ನಾಯಕರ ಕೈವಾಡ ಇದೆ ಎಂದು ಕೇಳಿ ಬಂದಿತ್ತು. ಇದೀಗ ರನ್ಯಾ ರಾವ್ (Ranya Rao) ಹಾಗೂ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಮಧ್ಯೆ ಹಣ ವರ್ಗಾವಣೆ ನಡೆದಿದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ ಎನ್ನಲಾಗ್ತಿದೆ. ಈ ಮಧ್ಯೆ ವಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರನ್ಯಾ ರಾವ್‌ ವಿದೇಶದಿಂದ ಚಿನ್ನ ತಂದು ಇಲ್ಲಿ ಹಲವು ಪ್ರಮುಖರಿಗೆ ಕೊಟ್ಟಿರುವ ಮಾಹಿತಿ ಇದೆ ಎಂದು ಆರೋಪಿಸಿದ್ದಾರೆ.

ರನ್ಯಾ ಹಾಗೂ ಸಿದ್ದಾರ್ಥ ಕಾಲೇಜಿನ ನಡುವೆ ಹಣ ವರ್ಗಾವಣೆ ನಡೆದಿದೆ ಎನ್ನುವ ವಿಚಾರಕ್ಕೆ ಇಡಿ ದಾಳಿ ನಡೆಸಿ ಪರಿಶೀಲನೆ ಮುಂದಾಗಿದೆ ಎಂದು ತಿಳಿದು ಬಂದಿದೆ. ಬ್ಯುಸಿನೆಸ್ ವಿಚಾರಕ್ಕೆ ಇಬ್ಬರ ನಡುವೆ ಹಣ ವರ್ಗಾವಣೆ ನಡೆದಿದೆ ಎನ್ನಲಾಗ್ತಿದೆ. ರನ್ಯಾ ಹೂಡಿಕೆಗಳ ಬಗ್ಗೆ ಅನುಮಾನ ಮೂಡಿದೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದು, ಹೆಚ್ಚಿನ ತನಿಖೆಯ ನಂತರ ಮಾಹಿತಿ ತಿಳಿದು ಬರಬೇಕಿದೆ.

 

 

 

 

&nbsp

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

;

Leave a Reply

Your email address will not be published. Required fields are marked *