Janataa24 NEWS DESK
Dengue: ಡೆಂಗ್ಯೂ ಜ್ವರಕ್ಕೆ ಆವ್ಹಾನಿಸುವಂತಿರುವ ಪುರಸಭೆ.
Dengue: ದಿನೇ ದಿನೇ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.
ಪಾವಗಡ ಕೆಲವೊಂದು ವಾರ್ಡ್ ಗಳಲ್ಲಿ ಸ್ವಚ್ಛತೆ ಮರೀಚಿಕೆ.
ಕಚೇರಿಗೆ ಮಾತ್ರ ಸೀಮಿತವಾದ ಕೆಲವು ಅಧಿಕಾರಿಗಳು.
ಪಟ್ಟಣದ ಶಾಂತಿನಗರದ ವಾಸಿಗಳಿಗೆ ಶಾಂತಿ ಕೆದಗಿಸಿದ ಅಧಿಕಾರಿಗಳು ಈ ಭಾಗದಲ್ಲಿ ಮೊದಲೇ ದಿನನಿತ್ಯ ಕೂಲಿ ಕೆಲಸ ಮಾಡುವಂತ ಜನರೇ ಹೆಚ್ಚು, ಈ ವಾರ್ಡಿನಲ್ಲಿ ಚರಂಡಿ ಗಳು ನಿರ್ಮಾಣ ಮಾಡಿರೋದು ನೋಡಿದರೆ ಅವರಿಗೆ ಇಂಜಿನಿಯರಿಗೆ ಮತ್ತು ಗುತ್ತಿಗೆದಾರನಿಗೆ ಪ್ರಶಸ್ತಿ ಲಭಿಸಲೇಬೇಕು.
ಏಕೆಂದರೆ ಮೊದಲೇ ಸ್ಲಂ ಎಂಬುದಾಗಿ ಗುರುತಿಸುವಂತಹ ವಾರ್ಡಿನಲ್ಲಿ ಹೆಚ್ಚು ಕಾಮಗಾರಿಗಳು ಹಾಕಿಸಿಕೊಂಡು ಕಳಪೆ ಕಾಮಗಾರಿಗಳು ಮಾಡಿರುವಂತಹ ಒಂದು ದೊಡ್ಡ ದಂಧೆ ಈ ವಾರ್ಡಿನಲ್ಲಿ ನೋಡಬಹುದು.
ಈ ವಾರ್ಡಿನಲ್ಲಿ ಬಹುತೇಕ ಚರಂಡಿಗಳು ಯಾವ ಕಡೆ ನೀರು ಹರಿದು ಹೋಗಬೇಕು ಎಂಬುದು ಆ ನೀರಿಗೂ ಸಹ ತಿಳಿಯದಂತಾಗಿದೆ.
ಇಂತಹ ಕಳಪೆ ಕಾಮಗಾರಿಗಳು ಮಾಡಿದಂತಹ ಹಾಗೂ ಅವರಿಗೆ ಬಿಲ್ಲು ನೀಡಲು ಸಹಕರಿಸಿದ ಅಧಿಕಾರಿಗಳ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು.
ಪುರಸಭೆಯ ಕೆಲ ಸದಸ್ಯರು ವಾರ್ಡ್ ಗೆ ಹೋಗಲು ಹೆದರಿಕೆ.
ಪುರಸಭೆಗೆ ಬಹಳಷ್ಟು ದಿನಗಳಿಂದ ಅಧ್ಯಕ್ಷತೆ ಇಲ್ಲದೆ ಪುರಸಭೆ ಆಡಳಿತ ಅಧಿಕಾರಿಯಾಗಿ ಮಧುಗಿರಿ ಉಪವಿಭಾಗಧಿಕಾರಿಗಳ ಅಧಿಕಾರ ಇದ್ದು ಮೂಲ ಮುಖ್ಯ ಅಧಿಕಾರಿ ಸಹ ಇಲ್ಲ.
ಅತಂತ್ರ ಸ್ಥಿತಿಯಲ್ಲಿ ಪಾವಗಡ ಪುರಸಭೆ.
ಬಹಳಷ್ಟು ಪುರಸಭೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂಬುದಾಗಿ ಸಾರ್ವಜನಿಕರ ಆರೋಪಗಳು ಒಂದು ಕಡೆಯಾದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಹಳಷ್ಟು ವಾರ್ಡ್ಗಳಲ್ಲಿ ಸ್ವಚ್ಛತೆ ಕೊರತೆ ನೈರ್ಮಲ್ಯದಿಂದ ಕೂಡಿದ ಚರಂಡಿಗಳು ತುಂಬಿ ತುಳುಕುತ್ತಿವೆ.
ಸ್ವಚ್ಛತೆ ಮರೀಚಿಕೆ ವಾರ್ಡ್ಗಗಳಲ್ಲಿನ ಸಮಸ್ಯೆಗಳು ಇದ್ದರೂ ಹೇಳಲು ಆಗದ ಸಾರ್ವಜನಿಕರು ಒಂದು ಕಡೆ ಆದರೆ.
ಇನ್ನು ವಾರ್ಡುಗಳ ಸಮಸ್ಯೆ ಗಮನ ಗಮನಿಸಬೇಕಾದ ಸದಸ್ಯರು ಇತ್ತ ಗಮನಹರಿಸುತ್ತಿಲ್ಲ.
ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿರುವಂತಹ ಚರಂಡಿಗಳಿಂದ ಚರಂಡಿ ನೀರು ಯಾವ ಕಡೆ ಹೋಗಬೇಕು ಎಂಬುವ ಗೊಂದಲದಲ್ಲಿ ಚರಂಡಿ ನೀರು.
ಮೊದಲೇ ಪಾವಗಡ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಗಳು ವೈದ್ಯರ ಕೊರತೆ ಒಂದು ಕಡೆ ಕಾಡುತ್ತಿದ್ದರೆ ಇನ್ನೊಂದು ಕಡೆ ವಾರ್ಡ್ಗಳಲ್ಲಿ ಸಮಸ್ಯೆಗಳು ತಾಣ ಹೆಚ್ಚಾಗಿದೆ.
ಪಟ್ಟಣದಲ್ಲಿ ಇತ್ತೀಚೆಗೆ ಸೊಳ್ಳೆ ಹಂದಿ ನಾಯಿ ಇತರೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೊದಲು ಇದರ ಬಗ್ಗೆ ನಿಯಂತ್ರಿಸುವ ಕೆಲಸ ಅಗಬೇಕು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.