JANATAA24 NEWS DESK
CM Vijay: ಅಮ್ಮ ಕ್ಯಾಂಟೀನ್‌ಗಳಿಗೆ ಮರುಜೀವ ನೀಡಲು ಮುಂದಾದ ಸಿಎಂ ವಿಜಯ್.

ಚೆನ್ನೈ: ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ವಹಿಸಿಕೊಂಡ ಬಳಿಕ ವಿಜಯ್ ಹೊಸ ಹೊಸ ಆದೇಶ ನೀಡುತ್ತಿದ್ದಾರೆ. ಮಾಜಿ ಸಿಎಂ ಜಯಲಲಿತಾ ಆರಂಭಿಸಿದ್ದ ಅಮ್ಮ ಕ್ಯಾಂಟೀನ್ ನವೀಕರಣಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶಿಸಿದ್ದಾರೆ.
2013ರಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಅಮ್ಮ ಕ್ಯಾಂಟೀನ್ ಆರಂಭಿಸಿದ್ದರು. ಇದೀಗ ಅದೇ ಅಮ್ಮ ಕ್ಯಾಂಟೀನ್‌ಗಳಿಗೆ ಮರುಜೀವ ನೀಡಲು ಸಿಎಂ ವಿಜಯ್(CM Vijay) ಮುಂದಾಗಿದ್ದು, 620 ಅಮ್ಮ ಕ್ಯಾಂಟೀನ್‌ಗಳನ್ನು ನವೀಕರಣ ಮಾಡಲು ಆದೇಶ ನೀಡಿದ್ದಾರೆ.
ಇನ್ನು, ತಮಿಳುನಾಡು ಸಿಎಂ ವಿಜಯ್‌ಗೆ 6 ತಿಂಗಳು ಕಾಲ ತೊಂದರೆ ಕೊಡಲ್ಲ ಅಂತ ಸ್ಟಾಲಿನ್ ಹೇಳಿದ್ರೆ, ಅವರ ಪಕ್ಷದ ಶಾಸಕ ಅನಿತಾ ರಾಧಾಕೃಷ್ಣನ್ 6 ತಿಂಗಳು ಕೂಡ ಟವಿಕೆ ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಈ ಸರ್ಕಾರ 4 ತಿಂಗಳು ಮಾತ್ರ ಉಳಿಯಲಿದೆ. ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದಿದ್ದಾರೆ.
ಇನ್ನು ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್ ಸಿನಿಮಾ ರಿಲೀಸ್‌ಗೆ ಈ ವಾರಾಂತ್ಯದಲ್ಲಿ ಒಪ್ಪಿಗೆ ಸಿಗೋ ಸಾಧ್ಯತೆಗಳಿವೆ. ಈ ಮಧ್ಯೆ, ಅಣ್ಣಾಡಿಎಂಕೆ ಪಕ್ಷದಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗುತ್ತಿದೆ. ಹಿರಿಯ ನಾಯಕ ಎಸ್ ಸೆಮ್ಮಲೈ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.