Sunil Bose :ನಾಮಪತ್ರ ಅಸಿಂಧುಗೊಳಿಸುವಂತೆ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಬಾಲರಾಜು ದೂರು.

Janataa24 NEWS DESK

Sunil Bose :ನಾಮಪತ್ರ ಅಸಿಂಧುಗೊಳಿಸುವಂತೆ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಬಾಲರಾಜು ದೂರು.

Chamarajanagar,

ಚಾಮರಾಜನಗರ: ಎಸ್ಸಿ(SC) ಮೀಸಲು ಕ್ಷೇತ್ರವಾಗಿರುವ ಚಾಮರಾಜನಗರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತಂತ್ರ ಕುತಂತ್ರಗಳ ಲೋಕ ಸಮರದ ಆಟ. ಇಲ್ಲಿ ಗೆದ್ದು ಪಾರ್ಲಿಮೆಂಟ್ ಮೆಟ್ಟಿಲು ತುಳಿಯುವುದು ಯಾರು ಜನತಾ ಜನಾರ್ಧನ ಆಶೀರ್ವಾದ ಯಾರ ಮೇಲಿದೆ ಕಾದು ನೋಡಬೇಕಿದೆ.

ಲೋಕ-ಸಮರ ದಿನದಿಂದ ದಿನಕ್ಕೆ ಜೋರಾಗುತ್ತಿದ್ದರು ಅಬ್ಬರದ ಭರ್ಜರಿ ಪ್ರಚಾರ, ರೋಡ್ ಶೋ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದೇ ರೀತಿ ಅದ್ದೂರಿ ನಾಮಪತ್ರ ಸಲ್ಲಿಸಿದ್ದ ಸಚಿವ ಮಹಾದೇವಪ್ಪ ಪುತ್ರ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರಿಗೆ ಆತಂಕ ಶುರು ಆಗಿದೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್.

ನಾಮಪತ್ರದಲ್ಲಿ ಸುನೀಲ್ ಬೋಸ್ ಅವರು ತಮ್ಮ ಮುಖ್ಯವಾದ ವಿಷಯಗಳನ್ನು ಅವರು ಹೇಳದೇ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.ಸುನೀಲ್ ಬೋಸ್ ಅವರು ತಮ್ಮ ವೈವಾಹಿಕ ಜೀವನದ ಮಾಹಿತಿ ಕುರಿತು ನಾಮಪತ್ರದಲ್ಲಿ ಉಲ್ಲೇಖಿಸಿಲ್ಲ ಅದಲ್ಲಿ ಮಾಹಿತಿ ಹೇಳದೇ ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ನಾಯಕರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ನಾಮಪತ್ರ ಸಲ್ಲಿಸುವ ವೇಳೆ ದೊಡ್ಡ ನಾಯಕರುಗಳಾದ ಸಿಎಂ ಸಿದ್ದರಾಮಯ್ಯ ಮಾಜಿ ಡಿಸಿಎಂ ಪರಮೇಶ್ವರ್ ಸಚಿವ ಮಹಾದೇವಪ್ಪ ಸಚಿವ ಸತೀಶ್ ಜಾರಕಿಹೊಳಿ(Sathish Jarakiholi) ಭಾಗವಹಿಸಿದ್ದರು ಈ ದೂರಿನ ಅನ್ವಯ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮನೆಮಾಡಿದೆ.

ಚುನಾವಣಾಧಿಕಾರಿ ನಾಮಪತ್ರ ಪರಿಶೀಲಿಸಿ ತಪ್ಪು ಸರಿಗಳನ್ನು ನೋಡಿ ಮುಂದಿನ ಕ್ರಮ ಏನು ತೆಗೆದುಕೊಳ್ಳುತ್ತರೋ ಕಾದು ನೋಡಬೇಕು.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Tumakur Police : ಚುನಾವಣೆ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಹಾಳು ಮಾಡಿದವರು ಗಡಿಪಾರು.

Leave a Reply

Your email address will not be published. Required fields are marked *