janataa24 NEWS DESK
Badami: ಜಾಲಿಹಾಳ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 5.5 ಲಕ್ಷ ಹಣ ಪೋಲಿಸರ ವಶಕ್ಕೆ
ಬಾದಾಮಿ : ಲೋಕಸಭಾ ಚುನಾವಣೆ ಶುರುವಾಗುತ್ತಿದ್ದಂತೆ ದಾಖಲೆರಹಿತ ಹಣ (Money)ಸೀರೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಸಾಗಟ ಮಾಡಿ ಮತದಾರಿಗೆ ಹಂಚಲು ಪ್ರಯತ್ನಿಸುತ್ತಾರೆ.ಇಂತಹ ಸಮಯದಲ್ಲಿ ಪೋಲಿಸರು ತಮ್ಮ ಕಾರ್ಯ ವೈಖರಿ ತೋರಿಸಿ ಎಡಮುರಿ ಕಟ್ಟಬೇಕು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ (Jalihala) ಚೆಕ್ ಪೋಸ್ಟ್ ನಲ್ಲಿ ಇಂದು ದಾಖಲೆ ಇಲ್ಲದ 5,55,000/ ಐದು ಲಕ್ಷ ಐವತೈದು ಸಾವಿರ ರೂಪಾಯಿ ಹಣವನ್ನು ಬಾದಾಮಿ ಪೊಲೀಸ್ ಠಾಣೆಯ ಪಿ.ಎಸ್.ಐ. ವಿಠ್ಠಲ.ಈ.ನಾಯಕ ವಶಪಡಿಸಿಕೊಂಡಿರುತ್ತಾರೆ.
ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಾಂತೇಶ ಹರದೊಳ್ಳಿ,, ಮುದಕಪ್ಪ ಖಾನಾಪುರೆ, ಮುದಕಪ್ಪ ಕಬಾಡದ, ಅರ್ಜುನ್ ಪವಾರ ಮತ್ತು ಮಂಜು ಉಪ್ಪಾರ,, ಸೇರಿ ಕಾರ್ಯಚರಣೆ ನಡೆಸಿ ಪರಿಶೀಲಿಸಿ ಅಕ್ರಮ ಹಣ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿ ಎಸ್ ಐ ವಿಠ್ಠಲ.ಈ.ನಾಯಕ ಅವರ ಪಾದರಸದಂತ ಕಾರ್ಯಕ್ಷಮತೆಗೆ ಶ್ಲಾಘನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ವರದಿ :- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
HighCourt: ಹೈ ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರ ಮುಂದೆ ಓರ್ವ ವ್ಯಕ್ತಿ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ