JANATAA24 NEWS DESK
ATM ROBBERY: ಗ್ಯಾಸ್ ಕಟರ್ ಬಳಸಿ ಎ ಟಿ ಎಂ ದರೋಡೆ–ATMನಲ್ಲಿದ್ದ 13ಲಕ್ಷ…

ಗುಬ್ಬಿ : ಗ್ಯಾಸ್ ಕಟರ್ ಬಳಸಿ ಎಸ್ ಬಿ ಐ ಬ್ಯಾಂಕ್ ಎಟಿಎಂ ಕಳ್ಳತನ ಮಾಡಿರುವ ಘಟನೆ ಕಡಬಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮೈಸೂರು ರಸ್ತೆಯಲ್ಲಿರುವ ಕಡಬ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಪೊಲೀಸ್ ಠಾಣೆಯ ಹತ್ತಿರ ಇರುವ ಎಸ್ ಬಿ ಐ ಬ್ಯಾಂಕಿನ ಎಟಿಎಂ ಸೆಂಟರ್ ಗೆ ಗ್ಯಾಸ್ ಕಟರ್ ಬಳಸುವ ಮೂಲಕ ಕಳ್ಳರು ಸುಮಾರು 13 ರಿಂದ 14 ಲಕ್ಷ ರೂಪಾಯಿ ಹಣ ದೋಚಿರುವ ಬಗ್ಗೆ ತಿಳಿದು ಬಂದಿದೆ.
ಸ್ಥಳಕ್ಕೆ ಗುಬ್ಬಿ ಪೊಲೀಸರು ಅಗಮಿಸಿ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇನ್ನಿತರ ಸಾಕ್ಷಾಧಾರಕ್ಕೆ ಮುಂದಾಗಿದ್ದು ತುಮಕೂರು ಎ ಎಸ್ಪಿ ಪುರುಷೋತ್ತಮ್, ತಿಪಟೂರು ಡಿವೈಎಸ್ಪಿ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಜಾಡು ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗುಬ್ಬಿ ತಾಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಒಂದರ ಮೇಲೊಂದು ನಡೆದಿದೆ. ಇದರಿಂದ ಸಾರ್ವಜನಿಕರು ಭಯವಭಿತರಾಗಿದ್ದಾರೆ.
ವರದಿ : ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.