Janataa24 NEWS DESK
ಪತ್ರಕರ್ತರು ಹಾಗೂ ಸರ್ಕಾರಿ ನೌಕರರ ಒತ್ತಡದ ನಡುವೆ ಕ್ರೀಡಾಕೂಟ ಆಯೋಜನೆ ಒಂದು ಆರೋಗ್ಯಕರ: ಗ್ರೇಡ್2 ತಹಸಿಲ್ದಾರ್ ನರಸಿಂಹಮೂರ್ತಿ.

ಪಾವಗಡ: ಜಿಲ್ಲಾ ಮತ್ತು ತಾಲೂಕು ಆಡಳಿತ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಪತ್ರಕರ್ತರಿಗೂ ಹಾಗೂ ಸರ್ಕಾರಿ ನೌಕರರಿಗೆ ತಾಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಶುಕ್ರವಾರ ಜೂನಿಯರ್ ಕಾಲೇಜು ಆವರಣದ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಸೀಲ್ದಾರ್ ನರಸಿಂಹಮೂರ್ತಿ ಉದ್ಘಾಟಿಸಿ ಮಾತನಾಡುತ್ತಾ, ಸಂವಿಧಾನ ಜಾಥಾ ಸಂಜೆ ಪಾವಗಡಕ್ಕೆ ಆಗಮಿಸಲಿದ್ದು ತಾಲ್ಲೂಕು ಆಡಳಿತ ಭರ್ಜರಿ ಸ್ವಾಗತ ದೊಂದಿಗೆ
ಬರಮಾಡಿಕೊಳ್ಳಲಾಗುವುದು, ಅದರ ಪ್ರಯುಕ್ತ ಪತ್ರಕರ್ತರಿಗೆ ಮತ್ತು ಸರ್ಕಾರಿ ನೌಕರರಿಗೆ ತಾಲೂಕು ಆಡಳಿತದಿಂದ ಕ್ರೀಡಾಕೂಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು , ಎಲ್ಲರೂ ಭಾಗವಹಿಸಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರಿಗೂ ಶುಭವಾಗಲಿ ಎಂದು ತಿಳಿಸಿದರು.
ನಂತರ ಪತ್ರಕರ್ತರ ಸಂಘದ ಅಧ್ಯಕ್ಷರು ಹನುಮಂತರಾಯಪ್ಪ ಮಾತನಾಡಿ ಕ್ರೀಡಾಕೂಟವನ್ನು ಏರ್ಪಡಿಸಿರುವ ತಾಲೂಕು ಆಡಳಿತಕ್ಕೆ ಧನ್ಯವಾದಗಳು ಅರ್ಪಿಸಿ,ಪತ್ರಕರ್ತರ ಭವನ ನಿರ್ಮಾಣ ಮಾಡಲು ಪಾವಗಡ ಗ್ರಾಮಾಂತರ ರೊಪ್ಪ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಖಾಲಿ ನಿವೇಶನ ಕಲ್ಪಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಅದರೆ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆಂದು ಬೇಸರವನ್ನು ವ್ಯಕ್ತಪಡಿಸಿದರು, ಅದರಿಂದ ತಕ್ಷಣವೇ ಸೂಕ್ತ ಜಾಗವನ್ನು ಗುರ್ತಿಸಿ ಮನೆಗಳಿಲ್ಲದ ಪತ್ರಕರ್ತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಹಾಗೂ ಪತ್ರಕರ್ತರ ಭವನಕ್ಕೆ ಖಾಲಿ ನಿವೇಶನವನ್ನು ಕಲ್ಪಿಸಬೇಕೆಂದು ತಹಶೀಲ್ದಾರ್ ರವರಿಗೆ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ವೇಳೆ ಮನವಿ ಮಾಡಿದರು.
ನಡೆದ ಕ್ರೀಡಾಕೂಟದಲ್ಲಿ ಪತ್ರಕರ್ತರ ತಂಡ ಹಾಗೂ ಸರ್ಕಾರಿ ನೌಕರರ ತಂಡ ಮಧ್ಯೆ ವಾಲಿಬಾಲ್ ಮತ್ತು ತ್ರೋಬಾಲ್ ಹಾಗೂ ಕಬ್ಬಡಿ ಪಂದ್ಯಾಟಗಳು ನಡೆದಿದ್ದು,ಇದರಲ್ಲಿ ಕಬ್ಬಡಿ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಸರ್ಕಾರಿ ನೌಕರರು ಸಂಘ ಜಯಗಳಿಸಿದ್ದು, ತ್ರೋಬಾಲ್ ಪಂದ್ಯಾವಳಿಯಲ್ಲಿ ಪತ್ರಕರ್ತರ ಸಂಘದವರು ವಿಜೇತರಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್ ಜಾನಕಿ ರಾಮ್, ಶಿಕ್ಷಣಾಧಿಕಾರಿಗಳಾದ ಇಂದ್ರಣಮ್ಮ,ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನಯ್ಯ, ತಾಲೂಕು ವೈದ್ಯಾಧಿಕಾರಿಗಳು ತಿರುಪತಯ್ಯ,ಸರ್ಕಾರಿ ನೌಕರರ ಪದಾಧಿಕಾರಿಗಳು ಮತ್ತು ಪತ್ರಕರ್ತರು ಭಾಗವಹಿಸಿದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ