Pavagada: ಬರದ ನಾಡಿನಲ್ಲಿ ಪ್ರಕೃತಿಯನ್ನು ಕಾಪಾಡಲು ಯುವಕರಿಂದ ಅಚ್ಚರಿಯ ಪ್ರಯತ್ನ.

Janataa24 NEWS DESK

Pavagada: ಬರದ ನಾಡಿನಲ್ಲಿ ಪ್ರಕೃತಿಯನ್ನು ಕಾಪಾಡಲು ಯುವಕರಿಂದ ಅಚ್ಚರಿಯ ಪ್ರಯತ್ನ.

” ನಮ್ಮ ಶಾಲೆ ನಮ್ಮ ಹೆಮ್ಮೆ ನಮ್ಮ ವಿದ್ಯಾರ್ಥಿಗಳು ನಮಗೆ ಹೆಮ್ಮೆ “ಎಂಬ ಕಾರ್ಯಕ್ರಮದ ಅಡಿಯಲ್ಲಿ.
” ಬೀಜದುಂಡೆ ಪ್ರಸರಣ ಕಾರ್ಯಕ್ರಮ ”

Pavagada,

ಪಾವಗಡ: ಭಾನುವಾರದಂದು
” ಪರಿಸರ ಯುವ ಮಿತ್ರ ಬಳಗ ” ಗುಜ್ಜಾರಹಳ್ಳಿ ರವರ ವತಿಯಿಂದ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಸಿದ್ದಿ ಪಡೆದಿರುವ ಬೀಜದುಂಡೆ ಪ್ರಸರಣ ಕಾರ್ಯಕ್ರಮವನ್ನು ನಿಡಗಲ್ಲು ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಳ್ಳಲಾ ಯಿತು.ಕಾರ್ಯಕ್ರಮದ ನೇತೃತ್ವವನ್ನು ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯ ವಿಜ್ಞಾನ ಶಿಕ್ಷಕರಾದ ರೇಣುಕರಾಜ್. ಜಿ. ಹೆಚ್.ರವರು ವಹಿಸಿದ್ದರು.

 

 

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಪ್ರಸ್ತುತ ಸನ್ನಿವೇಶದಲ್ಲಿ ಮನುಷ್ಯ ತನ್ನ ಅತಿಯಾಸೆಯಿಂದ ಗಿಡಮರ ಗಳನ್ನು ಕಡಿದು ನಾಶ ಮಾಡುತಿದ್ದಾನೆ.ಇದು ಹೀಗೆಯೆ ಮುಂದುವರೆದರೆ ಮುಂದೊಂದು ದಿನ ಇತ್ತೀಚಿನ ವರದಿಯ ಪ್ರಕಾರ ದೇಶದಲ್ಲಿ ಅತಿ ಕೆಟ್ಟ ಬರಗಾಲ ಅನುಭವಿಸುವ ರಾಜ್ಯಗಳಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದ್ದು ನಂತರದ ದ ಸ್ಥಾನದಲ್ಲಿ ಕರ್ನಾಟಕ ರಾಜ್ಯವು ಬರುವ ಸಂಭವವಿದೆ.

ಅದಕ್ಕಾಗಿ ಪ್ರಜ್ಞಾವಂತಿಕೆಯಿಂದ ನಾವುಗಳು ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದಕ್ಕಾಗಿ ಇಂತಹ ಬೀಜದುಂಡೆ ಪ್ರಸರಣ ಕಾರ್ಯಕ್ರಮ ವನ್ನು ಹಮ್ಮಿಕೊಂಡ ಪರಿಸರ ಯುವಮಿತ್ರ ಬಳಗದ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿದರು. ನಂತರ ಈ ರೀತಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಯುವ ಮಿತ್ರರು ಹಮ್ಮಿಕೊಂಡರೆ ದೇಶದ ಅರಣ್ಯ ಸಂಪತ್ತು ಹೆಚ್ಚಿ ಪರಿಸರ ಉಳಿಯುತ್ತದೆ.

 

 

ನಾವಿಲ್ಲದಿದ್ದರು ಪರಿಸರ ಇರುತ್ತದೆ ಆದರೆ ಪರಿಸರವಿಲ್ಲದಿದ್ದರೆ ನಾವು ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ತಿಳಿಸುತ್ತಾ ನಂತರ ಬೀಜದುಂಡೆಗಳನ್ನು ನಿಡಗಲ್ಲು ಅರಣ್ಯ ಪ್ರದೇಶದ ಖಾಲಿ ಸ್ಥಳಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಚಿಕ್ಕ ಗುಂಡಿಗಳನ್ನು ಮಾಡಿ ಅದರಲ್ಲಿ ಬೀಜದುಂಡೆ ಗಳನ್ನು ಇಟ್ಟು ಮಣ್ಣು ಮುಚ್ಚಲಾಯಿತು.

ಮುಂದೆ ಅವು ಮಳೆ ಬಂದು ಹಸಿಯಾದಾಗ ಮೊಳಕೆಯೊಡದು ಸಸಿಗಳಾಗಿ ಮರಗಳಾಗಿ ಬೆಳೆಯುತ್ತವೆ.ಈ ಕಾರ್ಯಕ್ಕೆ ಸಹಕರಿಸಿದ ಪರಿಸರ ಯುವ ಮಿತ್ರ ಬಳಗದ ಸದಸ್ಯರುಗಳಾದ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಾದ ವಿನಯ್ ಕುಮಾರ್, ಭೂತೇ ಗೌಡ,ವಿದ್ಯಾಶಂಕರ್ ಗೌಡ ತ್ರಿಶೂಲ್ ಗೌಡ, ಮಹೇಶ್, ಶ್ರೀನಿವಾಸ,ಗುಜ್ಜಾರಿ, ದಿನೇಶ್, R.T.ಗೌಡ, ರೂಪಿತ್, ಹೇಮಂತ್.ರವರುಗಳು ಸುಮಾರು ಒಂದು ವಾರದಿಂದ ಕಷ್ಟಪಟ್ಟು ಬೀಜದುಂಡೆ ತಯಾರು ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

 

 

ವರದಿ: ಇಮ್ರಾನ್ ಉಲ್ಲಾ. ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

Leave a Reply

Your email address will not be published. Required fields are marked *