JANATAA24 NEWS DESK
ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ” ನಮಗೇಕಿಲ್ಲ ಕ್ಯಾಂಪಸ್ ಇಂಟರವ್ಯೂವ್” ವಿನೂತನ ಅಭಿಯಾನಕ್ಕೆ ಚಾಲನೆ.

ಬಾಗಲಕೋಟೆ: ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ” ಬಾಗಲಕೋಟೆ ಜಿಲ್ಲೆಗಳ ಸರಕಾರಿ ಪದವಿ ಕಾಲೇಜುಗಳಲ್ಲಿ “ನಮಗೇಕಿಲ್ಲ ಕ್ಯಾ0ಪಸ್ ಇಂಟರವ್ಯೂವ್” ವಿನೂತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಬಾಗಲಕೋಟೆಯಲ್ಲಿ ಇಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷರಾದ ಲೋಹಿತ್ ಹನುಮಾಪುರ ಹಾಗೂ ರಾಜ್ಯ ಉಪಾಧ್ಯಕ್ಷರಾದ ಆನಂದ್ ದೇವಾಡಿಗ ಪತ್ರಿಕಾಗೋಷ್ಠಿ ನಡೆಸಿ ಯಾವುದೇ ರಾಜಕೀಯ ಪಕ್ಷ ಮಾಡದ ಈ ವಿನೂತನ ಅಭಿಯಾನವನ್ನು ಪ್ರತಿ ಜಿಲ್ಲೆಗಳಲ್ಲಿಯೂ ಹಮ್ಮಿಕೊಳ್ಳಲಾಗುವುದು. ಇದರಿಂದ ಬಡ ವಿದ್ಯಾರ್ಥಿಗಳ ಭವಿಷ್ಟಕ್ಕೂ ಇದು ಸಹಾಯ ಆಗುವುದು.
ನಾವು ಹೋದ ಕಡೆಯಲ್ಲೆಲ್ಲ ಸಾಕಷ್ಟು ವಿದ್ಯಾರ್ಥಿಗಳು ನಮ್ಮ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಿಸ್ ಕಾಲ್ ಕೊಡುವುದರ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಅಭಿಯಾನದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷ ಲೋಹಿತ ಹನುಮಾಪುರ, ರಾಜ್ಯ ಉಪಾಧ್ಯಕ್ಷರು ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ, ರಾಜ್ಯ ಮಾಧ್ಯಮ ವಕ್ತಾರರದ ಜಗದೀಶ್ ಸದಾಮ್, ಜಿಲ್ಲಾ ಮಾಧ್ಯಮ ವಕ್ತಾರರಾದ ಅರವಿಂದ್ ಮುಚಖಂಡಿ, ವೀರಭಧ್ರಯ್ಯ ಕಟಗಿ ಹಳ್ಳಿ ಮಠ ವಿಧಾನಸಭಾ ಅಧ್ಯಕ್ಷರು ಬಾದಾಮಿ ಮತಕ್ಷೇತ್ರ ಯುವ ಘಟಕ ಬಾದಾಮಿ, ಹಾಗೂ ತಾಲೂಕಾ ಅಧ್ಯಕ್ಷ ಮಂಜುನಾಥ್ ಬಂಡಿವಡ್ಡರ ಉಪಸ್ಥಿರಿದ್ದರು.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ