Document

Belagavi: ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಸಾವು

Belagavi: ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಸಾವು

ಬೆಳಗಾವಿ:- ರವಿ ಬಿ ಕಾಂಬಳೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕುಲಗೋಡ ಆಸ್ಪತ್ರೆ ಹತ್ತಿರ ಬೆಳಗಾವಿ ಬಾದಾಮಿ ಮುಖ್ಯ ರಸ್ತೆಯಲ್ಲಿ ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.
ಬೈಕ್ ಸವಾರ ಹುಕ್ಕೇರಿ ತಾಲೂಕಿನ ಅರ್ಜುನವಾಡ ಮೂಲದ ಕರಿಯಪ್ಪ ಕೆಂಚಪ್ಪ ಕಾತರಗಿ (18) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭೀಮಪ್ಪ ರಾಯಣ್ಣವರ (78) ಎಂಬುವವರಿಗೆ ಬೈಕ್ ಗುದ್ದಿದ್ದು, ಆತನ ಕೈ ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾನೆ.

WhatsApp Image 2022 10 30 at 8.46.23 AM


ಕೆಎಸ್‌ಆರ್‌ಟಿಸಿ ಬಸ್ ಓವರ್ ಟೆಕ್ ಮಾಡಲು ಹೋದಾಗ ಎದುರಿಗೆ ಬರುತ್ತಿದ್ದ ಪಾದಚಾರಿ ವ್ಯಕ್ತಿಗೆ ಡಿಕ್ಕಿ ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿದೆ ಈ ವೇಳೆ ಚಲಿಸುತ್ತಿದ್ದ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Document

Leave a Reply

Your email address will not be published. Required fields are marked *