Janataa24 NEWS DESK
154 ನೆ ಗಾಂಧಿ ಜಯಂತಿ ಆಚರಣೆ ಹಿನ್ನೆಲೆ, ಮನಸೆಳೆದ ಪುಟ್ಟ ವಿದ್ಯಾರ್ಥಿಗಳ ಗಾಂಧೀಜಿ ಕುರಿತ ಭಾಷಣ.

ತುರುವೇಕೆರೆ: ತಾಲೂಕಿನ ಕೋಡಿ ನಾಗಸಂದ್ರ ಟಿ ಬಿ ಕ್ರಾಸ್ ನ ಸರ್ಕಾರಿ ಶಾಲೆಯಲ್ಲಿ ಇಂದು 154ನೇ ಗಾಂಧಿ ಜಯಂತಿ ಆಚರಣೆ ಆಚರಿಸಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಇಂದಿರಾ ಕೃಷ್ಣ ಸ್ವಾಮಿ, ಉಪಾಧ್ಯಕ್ಷರಾದ ಮಂಜುನಾಥ್, ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವರಾಜ್ ಸೇರಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಗಾಂಧಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.

ಇದೇ ವೇಳೆ ವಿದ್ಯಾರ್ಥಿಗಳ ವಿವಿಧ ಮನೋರಂಜನ ಕಾರ್ಯಕ್ರಮ ಎಲ್ಲರ ಕಣ್ತುಂಬಿಸಿತು, ಜೊತೆಗೆ ಪುಟ್ಟ ವಿದ್ಯಾರ್ಥಿಗಳು ಗಾಂಧೀಜಿ ಕುರಿತು ಮಾಡಿದ ಭಾಷಣವಂತು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿತು.
ಹಾಗೂ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕರಪ್ಪ ಮಾತನಾಡಿ ,ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿ ಅಹಿಂಸಾತ್ಮಕ ಸತ್ಯಾಗ್ರಹದ ಮೂಲಕ ಭಾರತವನ್ನು ಬ್ರಿಟಿಷರಿಂದ ದಾಸ್ಯ ಮುಕ್ತಗೊಳಿಸಿದ, ಸರ್ವ ಧರ್ಮ ,ಸಮನ್ವಯದ, ಜಾತ್ಯತೀತ ,ಭಾರತಕ್ಕೆ ಮುನ್ನುಡಿ ಬರೆದ ಮಹಾನ್ ಚೇತನ.
“ನನ್ನ ಜೀವನವೇ ನನ್ನ ಸಂದೇಶ” ಎಂದು ಸಾರಿದ ಮಹಾನ್ ಸುಧಾರಕರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಯಶೋಧ ,ಹಾಗೂ ಶಾಲಾ ವಿದ್ಯಾರ್ಥಿಗಳು, ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಜಿತೇಂದ್ರ ಕುಮಾರ್, ಗೋವಿಂದರಾಜ್, ಸುರೇಶ್, ಮಹೇಶ್, ಶ್ರೀಮತಿ ಜಯಲಕ್ಷ್ಮಮ್ಮ, ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕಿ ಶ್ರೀಮತಿ ಸಾವಿತ್ರಮ್ಮ, ಹಾಗೂ ಗ್ರಂಥಾಲಯ ಮೇಲ್ವಿಚಾರಕರಾದ ಪ್ರೇಮ್ ಕುಮಾರ್, ಜೊತೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್