Janataa24 NEWS DESK
ರಾಜ್ಯಮಟ್ಟದ 2023 ಪ್ರೈಡ್ ಕರ್ನಾಟಕ ಪ್ರಶಸ್ತಿ ಆಯ್ಕೆಯಾದ ಕೆ. ಪಿ. ಸಿ. ಸಿ.ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಮಹೇಶ್. ಎಸ್. ಹೊಸಗೌಡ್ರ

ಬಾದಾಮಿ: ಬೆಂಗಳೂರಿನ ರಾಜಾಜಿನಗರದ ಆರ್‌ಜಿ ರಾಯಲ್ ಹೋಟಲ್‌ನಲ್ಲಿ ಜರುಗಿದ ಯನಿಎಲ್ಪ್ ತಂತ್ರಜ್ಞಾನ, ಚಲನಚಿತ್ರ ನಿರ್ಮಾಣ, ಪ್ರಸಿದ್ಧ ಪ್ರದರ್ಶನಗಳ ಸಮೂಹ ಸಂಸ್ಥೆ ಕೊಡ ಮಾಡುವ 2023ರ ಫ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿ ಯುವ ಮುಖಂಡ,, ಕೆ. ಪಿ. ಸಿ. ಸಿ. ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಮಹೇಶ್. ಎಸ್. ಹೊಸಗೌಡ್ರ ಅವರ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ 2023 ರ ಪ್ರೈಡ್ ಕರ್ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ರಾಜಾಜಿನಗರದ ಆರ್.ಜಿ ರಾಯಲ್ ಹೋಟಲ್‌ನಲ್ಲಿ ಜರುಗಿದ ಕಾರ್ಯಕ್ರದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಚಲನಚಿತ್ರ ನಿರ್ದೇಶಕ ಸುನಿಲಕುಮಾರ ದೇಸಾಯಿ ಶ್ರೀ ಮಹೇಶ್ ಹೊಸಗೌಡರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

2023 ಪ್ರೈಡ್ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ಮಹೇಶ್ ಹೊಸಗೌಡ್ರ ಗೆಳೆಯರ ಬಳಗ ಹಾಗೂ ಎಸ್. ಎಫ್. ಹೊಸಗೌಡ್ರ್ ವರ್ಲ್ಡ್ ಸ್ಕೂಲ್ ನ ಸರ್ವ ಸಿಬ್ಬಂದಿ ಮಹೇಶ್ ಹೊಸಗೌಡ್ರ ಅವರ ಸಾಮಾಜಿಕ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ.

ವರದಿ
ಬಾದಾಮಿ:- ರಾಜೇಶ್ ಎಸ್ ದೇಸಾಯಿ