Document

ಪರಿಸರವನ್ನು ನಾವು ರಕ್ಷಿಸಿದರೆ ನಮ್ಮ ಜೀವನವನ್ನು ಪರಿಸರ ರಕ್ಷಿಸುತ್ತದೆ

Janataa24 NEWS DESK

IMG 20230617 WA0013


ಪಾವಗಡ: ಪರಿಸರವನ್ನು ನಾವು ರಕ್ಷಿಸಿದರೆ ನಮ್ಮ ಜೀವನವನ್ನು ಪರಿಸರ ರಕ್ಷಿಸುತ್ತದೆ ಎಂದು ಕೊಡಿಗೆಹಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಎನ್ ಎ ಈರಣ್ಣ ತಿಳಿಸಿದರು. ತಾಲೂಕಿನ ನಿಡಗಲ್ ಹೋಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಿಸಿ) ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಹಸಿರೆ ಉಸಿರು ಎಂಬಂತೆ ಗಿಡ ಬೆಳೆಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಯಾವುದೇ ಕಾಯಿಲೆಗಳಿಂದ ದೂರವಿದ್ದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

IMG 20230617 WA0008

ವಲಯ ಮೇಲ್ವಿಚಾರಕ ಬೋರಣ್ಣ ಮಾತನಾಡಿ ಪರಿಸರದ ಅಳಿವು ಉಳಿವು ನಮ್ಮ ಕೈಯಲ್ಲಿದೆ ಓಝೋನ್ ಪದರವನ್ನು ಕಾಪಾಡಬೇಕಾದರೆ ಸೂರ್ಯನ ಕಿರಣಗಳು ಭೂಮಿಗೆ ನೇರವಾಗಿ ಬೀಳುವುದನ್ನು ತಪ್ಪಿಸುವುದಕ್ಕಾಗಿ ಮರ ಗಿಡಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.

IMG 20230617 WA0012

ಶಿಕ್ಷಕ ಜಿ ನಾಗೇಂದ್ರಯ್ಯ ಮಾತನಾಡಿ ಹಿಂದಿನ ಮಕ್ಕಳೇ ನಾಳಿನ ಪ್ರಜೆಗಳು ಆದ ನೀವು ನಿಮ್ಮ ಪ್ರತಿ ಹುಟ್ಟುಹಬ್ಬಕ್ಕೆ ಯಾವುದೇ ಜಾಗದಲ್ಲಿ ಯಾವುದೇ ಒಂದು ಗಿಡವನ್ನು ನೆಟ್ಟು ಪೋಷಿಸಬೇಕು ಆಗ ಅದು ನಿಮ್ಮನ್ನು ಸದಾ ಕಾಪಾಡುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ಶಿಕ್ಷಕ ಕೇಶವಮೂರ್ತಿ ಬಿ, ಶಿಕ್ಷಕರಾದ ನರಸಿಂಹಮೂರ್ತಿ, ಸುಬ್ರಮಣಿ, ಕವಿತಾ, ಕಾವ್ಯ, ಜನಜಾಗೃತಿ ವೇದಿಕೆ ಅಧ್ಯಕ್ಷಿಣಿ ರತ್ನಮ್ಮ, ಒಕ್ಕೂಟದ ಅಧ್ಯಕ್ಷ ಹರೀಶ್, ನಿಡಗಲ್ ಹೋಬಳಿಯ ಮೇಲ್ವಿಚಾರಕ ಮಹಮ್ಮದ್, ಸುಮಾ, ಇಂದುಶ್ರೀ, ರಕ್ಷಿತಾ ಮತ್ತಿತರರು ಹಾಜರಿದ್ದರು.

IMG 20230617 WA0009



ವರದಿ:ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *