ಸತತ 5ಬಾರಿ ಗೆದ್ದು ಜಿಲ್ಲೆಯಲ್ಲಿ ದಾಖಲೆಯ ಇತಿಹಾಸ ಸೃಷ್ಟಿಸಿದ ಎಸ್. ಆರ್ ಶ್ರೀನಿವಾಸ್

Janataa24 NEWS DESK

IMG 20230514 WA0002
ಎಸ್. ಆರ್ ಶ್ರೀನಿವಾಸ್/ SR Srinivas

60520 ಮತಗಳನ್ನು ಪಡೆದು ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಎಸ್ . ಆರ್ ಶ್ರೀನಿವಾಸ್ (ವಾಸು).

ಗುಬ್ಬಿ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್. ಆರ್ ಶ್ರೀನಿವಾಸ್ (ವಾಸು ) ಸತತವಾಗಿ ಐದನೇ ಬಾರಿ ಗೆಲುವು ಪಡೆದು ಜಿಲ್ಲೆಯಲ್ಲಿ ದಾಖಲೆಯ ಇತಿಹಾಸವನ್ನು ಸೃಷ್ಟಿಸಿದ್ದಾರೆ.



ಇದೆ ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ಮತದಾರರು ಒಟ್ಟು 1,60,166 ಮತಗಳನ್ನು ಚಲಾಯಿಸಿದ್ದು, ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಆರ್ ಶ್ರೀನಿವಾಸ್ (ವಾಸು) 60,520 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್‌.ಡಿ ದಿಲೀಪ್ ಕುಮಾರ್ ವಿರುದ್ಧ 8,541 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.



ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಿದ್ದು ಎಸ್ ಆರ್ ಶ್ರೀನಿವಾಸ್ (ಕಾಂಗ್ರೆಸ್ 60,520), ಎಸ್ ಡಿ ದಿಲೀಪ್ ಕುಮಾರ್ (ಬಿಜೆಪಿ 51979), ನಾಗರಾಜು ಬಿ.ಎಸ್ (ಜೆಡಿಎಸ್ 43046), ಪ್ರಭುಸ್ವಾಮಿ ಬಿ.ಎಸ್ (ಆಮ್ ಆದ್ಮಿ 1834), ಸೇರಿದಂತೆ ಪಕ್ಷೇತರರಾದ ಶಿವಣ್ಣ 341 ಮತಗಳು, ಪ್ರವೀಣ್ ಗೌಡ ಚೇಳೂರು 674, ಗಿರಿಯಪ್ಪ 221, ಡಾ.ಭಾವನಾ ಆರ್ ಗಿರಿಧರ್ 340, ವೀರೇಶ್ ಪ್ರಸಾದ್ 160, ಶ್ರೀನಿವಾಸ್ ಟಿ.ವಿ 295 ಮತಗಳು, ರಿಜೆಕ್ಟಡ್ 30 ಮತಗಳು, ನೋಟಾ 726 ಮತಗಳು ಸೇರಿದಂತೆ 1,60,166 ಮತಗಳ ಮತದಾನ ನಡೆದಿದೆ.
ಕಾರ್ಯಕರ್ತರು ಪಟ್ಟಣದ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಪಟಾಕಿಯನ್ನು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ವರದಿ

ಗುಬ್ಬಿ: ಶ್ರೀಕಾಂತ್

Leave a Reply

Your email address will not be published. Required fields are marked *