Janataa24 NEWS DESK

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಾಸಕ ಮಸಾಲ ಜಯರಾಮ್ ರವರಿಂದ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ.
ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ , ಚುನಾವಣಾ ಅಧಿಕಾರಿ ಕೆ ಎಸ್ ಮಂಜುನಾಥ್ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ವೈ ಎಂ ರೇಣು ಕುಮಾರ್ ರವರಿಗೆ, ಇಂದು ಅಧಿಕೃತವಾಗಿ ಶಾಸಕ ಮಸಾಲ ಜಯರಾಮ್ ನಾಮಪತ್ರ ಸಲ್ಲಿಸಿದರು. ಸೋಮವಾರದಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ್ದರಿಂದ ,ಇಂದು ನಾಮಪತ್ರ ಸಲ್ಲಿಸಿದ್ದೇನೆ ಚುನಾವಣೆಯ ಪ್ರಕಟವಾದ ದಿನದಿಂದಲೂ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದೇನೆ ,ಹೆಚ್ಚಿನ ಕಾರ್ಯಕರ್ತರುಗಳು ಮುಖಂಡರುಗಳು ಬಿಜೆಪಿ ಪಕ್ಷದ ಒಲವನ್ನು ತೋರಿಸಿದ್ದಾರೆ, ಮತ್ತು ಅನ್ಯ ಪಕ್ಷಗಳನ್ನು ತೊರೆದು ನಮ್ಮ ಪಕ್ಷದ ಮುಖ ಮಾಡಿದ್ದಾರೆ ,ಅವರೆಲ್ಲರಿಗೂ ಸ್ವಾಗತವನ್ನು ಕೋರುತ್ತೇನೆ, ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂದಾಗಿನಿದಲೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತುಕೊಟ್ಟು ಕೆಲಸ ಮಾಡಿದ್ದೇನೆ .
ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮತದಾರ ಪ್ರಭುಗಳು ಈ ಬಾರಿ ಚುನಾವಣೆಯಲ್ಲಿ 20,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಮತದಾರರು ಆಶೀರ್ವದಿಸಲಿದ್ದಾರೆ ,
ಪಕ್ಷದ ಬಲ ಪ್ರದರ್ಶನ ಮಾಡಲು ರಾಜ್ಯಮಟ್ಟದ ಮತ್ತು ಕೇಂದ್ರ ನಾಯಕರು ಬರುವ ದಿನಾಂಕವನ್ನು ನಿಗದಿಪಡಿಸಿಕೊಂಡು, ರ್ಯಾಲಿಯನ್ನು ನಡೆಸಲಿದ್ದೇವೆ. ಎಂದರು.
ಈ ಸಮಯದಲ್ಲಿ ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ದುಂಡ ರೇಣುಕಪ್ಪ ,ಅರಳಿಕೆರೆ ಸ್ವಾಮಿ ,ವಿ ಟಿ ವೆಂಕಟರಾಮ, ಪ್ರಭಾಕರ್ ,ವೆಂಕಟೇಶ್ ಕೋಳಿ ( ಅಮಿತ್ ಶಾ ) ಮುಂತಾದವರು ಇದ್ದರು.
ವರದಿ
ತುರುವೇಕೆರೆ: ಮಂಜುನಾಥ್