Janataa24 NEWS DESK

ಸುಮಾರು 30 ರಿಂದ 35000 ಜನರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಸಾಗಿ ಎಂ. ವಿ. ವೀರಭದ್ರಯ್ಯ ರವರು ನಾಮಪತ್ರ ಸಲ್ಲಿಸಿದರು.
ಮಧುಗಿರಿ : ಮಾನ್ಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದಾಗ ಮಾಡಿದ ಅಭಿವೃದ್ಧಿ ಹಾಗೂ ಪ್ರಸ್ತುತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಜನತೆಯ ಅನುಕೂಲಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಯೇ ಜೆ.ಡಿ.ಎಸ್.ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆಯೆಂದು ಮಧುಗಿರಿ ವಿಧಾನ ಸಭಾಕ್ಷೇತ್ರದ
ಜೆ.ಡಿ.ಎಸ್.ಅಭ್ಯರ್ಥಿ ಎಂ. ವಿ ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮೂಲಕ ಸಾಗಿ ಈ ದಿನ ನಾಮಪತ್ರ ಸಲ್ಲಿಸಿದ್ದು, ಈ ಕಾರ್ಯಕ್ರಮಕ್ಕೆ 30 ರಿಂದ 35 ಸಾವಿರ ಜನರು ಭಾಗವಹಿಸಿದ್ದಕ್ಕೆ ನಾನು ಯಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿ ಮಾತನಾಡಿ,
2018ರಲ್ಲಿ ಪ್ರಕೃತಿ ಕೈ ಕೊಡ್ತು ಭೀಕರವಾದ ಬರಗಾಲ ಕುಡಿಯೋ ನೀರಿಗೂ ಆಹಾಕಾರ ಧನ ಕರಗಳ ಮೇವಿಗೂ ಸಹ ಆಹಾಕಾರ ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರಿಂದ ವಿಶೇಷ ಅನುದಾನದಲ್ಲಿ 6 ಕೋಟಿ 80 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ ಆಂಧ್ರಪ್ರದೇಶದಿಂದ ದನ ಕರುಗಳಿಗೆ ಮೇವುತರಿಸಿ ದನ ಕರುಗಳಿಗೆ ಹಂಚಿರ್ತಕ್ಕಂತದ್ದು, ಯಾವುದಾದರೂ ಕ್ಷೇತ್ರದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 300 ಬೋರ್ವೆಲ್ ಕೊರೆಸಿ ನೀರಿಗೆ ಅನುಕೂಲ ಮಾಡಿದ್ದು ಅಂದರೆ ಅದು ಮದುಗಿರಿ ಕ್ಷೇತ್ರ ಇದು ಒಂದು ಇತಿಹಾಸ ಎಂದು ಹೇಳಬಹುದು, ಈಗಿರುವ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅನುದಾನ ಕೊಡಲು ತಾರತಮ್ಯ ಮಾಡಿದರು ಆದರೂ ಸಹ ಹಿಂಜರಿಯದೆ ನಾನು ಕ್ಷೇತ್ರಕ್ಕೆ 1,147 ಕೋಟಿ ಅನುದಾನವನ್ನು ತಂದು ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ನೀವು ನೋಡಬಹುದಾಗಿದೆ, ಮಧುಗಿರಿಯ ಬೆಂಗಳೂರಿಗೆ ಕೇವಲ 100 ಕಿಲೋಮೀಟರ್ ದೂರದಲ್ಲಿದ್ದರೂ ಸಹ ಪದೇ ಪದೇ ಬರಗಾಲಕ್ಕೆ ತುತ್ತಾಗಿದ್ದು ಈ ಕಾರಣದಿಂದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ, ಬ್ರಿಟಿಷರ , ಮಹಾರಾಜರ ಕಾಲದಲ್ಲಿಯೇ ಮಧುಗಿರಿ ಉಪ ವಿಭಾಗ ಆಗಿತ್ತು ಈಗ ಕ್ಷೇತ್ರವು ಅಭಿವೃದ್ಧಿಯಾಗಬೇಕಾದರೆ ಕಂದಾಯ ಜಿಲ್ಲೆ ಯಾಗ ಬೇಗು ಆಗ ತಾನಾಗಿ ತಾನೇ ಅಭಿವೃದ್ಧಿ ಕಾಣುತ್ತದೆ, ಆಗ ಜಿಲ್ಲೆಗೊಂದು ಆರೋಗ್ಯ ಮತ್ತು ತಾಂತ್ರಿಕ ಕಾಲೇಜ್ ಕೇಂದ್ರ ಸರ್ಕಾರದ ಯೋಜನೆಗಳು, ರಾಜ್ಯ ಸರ್ಕಾರದ ಯೋಜನೆಗಳು ಪ್ರತಿಯೊಂದು ಹಂತದ ಅಭಿವೃದ್ಧಿ ಸಹಕಾರಗಳು ಈ ಕ್ಷೇತ್ರಕ್ಕೆ ಸಿಗುತ್ತದೆ ಆದ್ದರಿಂದ ನಾವು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗಿದೆ ಇದಕ್ಕೆ ಈ ಕ್ಷೇತ್ರದ ಪ್ರತಿಯೊಬ್ಬರು ಸಹಕಾರ ಕೊಡಿ, ಮತ್ತೆ ಈ 2023 ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದು ಕ್ಷೇತ್ರದ ಎಲ್ಲಾ ಮತಬಾಂಧವರು ತಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಕಾರಣಕರ್ತರಾಗಿ ಎಂದು ಮತಬಾಂಧವರಲ್ಲಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ತುಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಪುರಸಭಾ ಅಧ್ಯಕ್ಷರಾದ ತಿಮ್ಮರಾಜು, ಸದಸ್ಯರಾದ ಎಮ್ ಆರ್ ಜಗನ್ನಾಥ್, ಗಂಗರಾಜು,ನಾಣಿ, ಮಾಜಿ ಸದಸ್ಯರಾದ ಶಫೀಕ್, ಸಲೀಂ ಉನ್ನಿಸಾ, ಆಸಿಯ ಶಾಜು, ಮುಖಂಡರಾದ ಸುಮು ಚಂದ್ರಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್. ಡಿ. ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ಹಿರಿಯ ಅಲ್ಪಸಂಖ್ಯಾತರ ಮುಖಂಡರಾದ ಅಲ್ಲೂ ಮಾಮು, ಸಲ್ಮಾನ್ ಬೈಗ್, ಗೋವಿಂದರಾಜು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದರು.
ವರದಿ
ಅಬಿದ್: ಮಧುಗಿರಿ