Tumkur: ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಸ್ಥೆಯ ಆಗರ.

Janataa24 NEWS DESK 

 

Tumkur: ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಸ್ಥೆಯ ಆಗರ.
Tumkur: The situation at the Tumkur Government Hospital is dire.

Tumkur: ವೈದ್ಯರು & ಅಧಿಕಾರಿಗಳ ನಿರ್ಲಕ್ಷ್ಯ , ಶೌಚಾಲಯ ದುರ್ವ್ಯವಸ್ಥೆ , ಲಂಚ ಬೇಡಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

 

ತುಮಕೂರು: ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ(District Hospital)ಯಲ್ಲಿ ಮೂಲಭೂತ ಆರೋಗ್ಯಸೇವೆ ಕುಸಿದು ಹೋಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಗಳು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ. ಜಿಲ್ಲಾಡಳಿತ ಕೇವಲ ಕೂಗಳತೆ ದೂರದಲ್ಲಿದ್ದರೂ, ಆಸ್ಪತ್ರೆಯ ಸ್ಥಿತಿಗತಿ ಪರಿಶೀಲನೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಶೌಚಾಲಯಗಳು ಅಸಹ್ಯ ಸ್ಥಿತಿಯಲ್ಲಿ ಮುಳುಗಿದ್ದು, ಪುರುಷರ ಶೌಚಾಲಯಗಳಲ್ಲಿ ಮದ್ಯದ ಬಾಟಲಿಗಳು, ತಂಬಾಕು ಪ್ಯಾಕೆಟ್‌ಗಳು, ಪಾನ್-ಗುಟ್ಕಾ ಉಗುಳಿನ ಗುರುತುಗಳು ಗೋಡೆಗಳೆಲ್ಲ ಕೆಂಪಾಗಿರುವಂತೆ ಕಂಡುಬರುತ್ತಿವೆ. ರೋಗಿಗಳು ಮತ್ತು ಅವರ ಸಂಬಂಧಿಕರು ದುರ್ವಾಸನೆಯ ನಡುವೆ ಕಷ್ಟ ಅನುಭವಿಸುತ್ತಿದ್ದಾರೆ.

 

“ಸರ್ಕಾರಿ ಕೆಲಸ ದೇವರ ಕೆಲಸ”, “ವೈದ್ಯನಾರಾಯಣೋ ಹರಿ” ಎಂಬ ಮಾತುಗಳು ಕೇವಲ ಶಬ್ದಗಳಲ್ಲಿ ಉಳಿದುಬಿಟ್ಟಿವೆ. ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ “ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ” ಎಂದು ಧಮ್ಕಿ ನೀಡುವ ಘಟನೆಗಳೂ ವರದಿಯಾಗಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

 

ಬಡಜನರ ರಕ್ಷಕವಚ ವಾಗಬೇಕಾದ ಸರ್ಕಾರಿ ಆಸ್ಪತ್ರೆ ಇಂದು ನಿರ್ಲಕ್ಷ್ಯ, ಅವ್ಯವಸ್ಥೆಯ ಆಗರ ಮತ್ತು ಲಂಚದ ಕಾಟದ ಕೇಂದ್ರವಾಗಿ ಮಾರ್ಪಟ್ಟಿದೆ. ತುರ್ತು ಪರಿಸ್ಥಿತಿಯ ರೋಗಿಗಳಿಗೆ ಗೋಲ್ಡನ್ ಅವರ್ ಚಿಕಿತ್ಸೆ ನೀಡುತ್ತೇವೆ ಎಂಬ ಸರ್ಕಾರದ ಭರವಸೆ ಕೇವಲ ಕಾಗದದಲ್ಲೇ ಉಳಿದುಬಿಟ್ಟಿದೆ. ರಕ್ತಪರೀಕ್ಷೆಗೆ ಎರಡು ದಿನ ಕಾಯಬೇಕಾದ ಪರಿಸ್ಥಿತಿಯಲ್ಲಿ ರೋಗಿಗಳ ಜೀವ ಭದ್ರತೆ ಪ್ರಶ್ನೆಯಾಗಿದೆ.

 

ಆಂಬುಲೆನ್ಸ್ ಸಮಯಕ್ಕೆ ಬರದಿರುವುದು, ವೈದ್ಯರು ಮತ್ತು ಸಿಬ್ಬಂದಿಯ ಗೈರುಹಾಜರಿ, ಅಸಭ್ಯ ವರ್ತನೆ, ಲಂಚ ಬೇಡಿಕೆ, ಇವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

 

ಅಂಗವಿಕಲರ ಚೇರುಗಳು ಮುರಿದ ಸ್ಥಿತಿಯಲ್ಲಿದ್ದು, ಕೆಲ ಚಕ್ರಗಳಲ್ಲಿ ಗಾಳಿ ಇಲ್ಲದೆ ವೃದ್ಧರು ಹಾಗೂ ಗಾಯಗೊಂಡವರು ಕೋಣೆಗೆ ತಲುಪುವುದು ಕಷ್ಟಕರವಾಗಿದೆ. ವೈದ್ಯಾಧಿಕಾರಿಗಳು ಸಂಜೆ 4:45 ಕ್ಕೆ ಗಡಿಯಾರ ನೋಡಿ ಬಾಗಿಲು ಮುಚ್ಚಿ ಹೊರಟು ಹೋಗುವ ದೃಶ್ಯ ಸಾಮಾನ್ಯವಾಗಿದೆ. ದೂರದ ಹಳ್ಳಿಗಳಿಂದ ಬಂದ ರೋಗಿಗಳು ಖಿನ್ನತೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ.

 

ಸಾರ್ವಜನಿಕರು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ತಕ್ಷಣದ ಕ್ರಮವನ್ನು ಆಗ್ರಹಿಸಿದ್ದಾರೆ.

“ಜನರ ಜೀವದೊಡನೆ ಜೂಜಾಟ ನಡೆಯಬಾರದು. ಆಸ್ಪತ್ರೆಯ ಅವ್ಯವಸ್ಥೆಗೆ ಹೊಣೆಗಾರರಾದ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವರದಿ: ದೇವರಾಜು R ಚಿಕ್ಕನಾಯಕನಹಳ್ಳಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *