Janataa24 NEWS DESK
Atrocity: ಜಾತಿ ನಿಂದನೆ ಮಾಡಿ ಸಾಲ ವಸೂಲಾತಿ– ಧರ್ಮಸ್ಥಳ (SKDRDP) ಸಂಘದ ವಿರುದ್ಧ ಪ್ರಕರಣ ದಾಖಲು.

ತುರುವೇಕೆರೆ: ತಾಲೂಕಿನ ಮಾಚೇನಹಳ್ಳಿ ವಾಸಿ ಮಂಜುಳಾ ಎಂಬುವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಘಟನೆಯ ಸಂಘಟಿಕರ ವಿರುದ್ಧ ಜಾತಿ ನಿಂದನೆ ದೂರು ದಾಖಲು ಮಾಡಿದ್ದಾರೆ.
ಸುಮಾರು ಸತತ ಎಂಟು ವರ್ಷಗಳಿಂದಲೂ ಮಂಜುಳಾ ಎಂಬುವರು ಧರ್ಮಸ್ಥಳ ಕ್ಷೇಮ ಅಭಿವೃದ್ಧಿ ಸಂಘದಲ್ಲಿ ಸಾಲ ಪಡೆದು ಇಲ್ಲಿಯವರೆಗೂ ಯಾವುದೇ ಕಂತನು ಸಹ ತಪ್ಪದೇ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಾ ಬಂದಿದ್ದು ಕೇವಲ ಎರಡರಿಂದ ಮೂರು ಕಂತುಗಳನ್ನು ಕಟ್ಟಿಲ್ಲ ಏಕೆಂದರೆ ಸಂಘದ ಹಣಕಾಸು ವ್ಯವಹಾರದಲ್ಲಿ ಅನುಮಾನ ಬಂದು ಸಂಘದಿಂದ ಮಾಡುವಂತ, LIC ಬಾಂಡ್ ಬಗ್ಗೆ ಮತ್ತು SKDRDP ಸಾಲ ನೀಡಿರುವುದು ಕೆಲವು ಮಾಹಿತಿಯನ್ನು ಯೋಜನಾಧಿಕಾರಿ ಮತ್ತು ಸೇವಾ ಪ್ರತಿನಿಧಿ ಅವರಿಗೆ ಕೇಳಲಾಗಿ ಅವರುಗಳು ಸಮಯಕ್ಕೆ ಸರಿಯಾಗಿ ಯಾವುದೇ ಮಾಹಿತಿಯನ್ನು ನೀಡದೆ ಇರುವ ಕಾರಣ ಕಳೆದ ಎರಡು ಮೂರು ಕಂತುಗಳನ್ನು ಕಟ್ಟದೆ ಸುಮ್ಮನಾಗಿದ್ದು, ನಂತರ ಗುಂಪಿನಲ್ಲಿದ್ದ ಸಂಘದ ಸದಸ್ಯರು
ಮಂಜುಳಾ ಮನೆ ಹತ್ತಿರ ಬಂದು ನಿನ್ನಿಂದ ನಮಗೆ ಸಾಲ ದೊರೆಯುತ್ತಿಲ್ಲ ನೀನು ಹಣವನ್ನು ಕಟ್ಟಬೇಕು ಎಂದು ಸ್ವಲ್ಪ ಗರಂ ಆಗಿ ಕೇಳಲಾಗಿ, ಸ್ಥಳದಲ್ಲಿ ಹಣ ಕಟ್ಟಿಸಿಕೊಳ್ಳಲು ಬರುತ್ತಿದ್ದ SKDRDP ಸಂಘಟಿಕರು ಇದ್ದು ಕೆಲವರು ನನ್ನನ್ನು ನನ್ನ ಜಾತಿಯ ಕುರಿತು ಬೈದಿದ್ದಾರೆ ಎಂದು ಸುಮಾರು ನಾಲ್ಕು ಐದು ಜನಗಳ ಮೇಲೆ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕರಾದ ಕುಂದೂರು ಮುರಳಿ,
ತಾಲೂಕು ಸಂಚಾಲಕರದ ಕೃಷ್ಣ ಮಾದಿಗ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜಾತಿನಿಂದನೇ ಪ್ರಕರಣವನ್ನು ದಾಖಲು ಮಾಡಿದ್ದಾರೆ.
ತದನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕ ರಾದ ಕುಂದೂರು ಮುರಳಿ ಅವರ ನೇತೃತ್ವದಲ್ಲಿ ಪತ್ರಿಕಾ ಮತ್ತು ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಧರ್ಮಸ್ಥಳ ಸಂಘದವರು ಈ ರೀತಿ ದೌರ್ಜನ್ಯ ಮಾಡಿ ಸಾಲ ವಸೂಲಾತಿ ಮಾಡುತ್ತಿರುವುದು ಖಂಡನೀಯ
ಇದನ್ನು ಯಾವುದೇ ಕಾರಣಕ್ಕೂ ನಮ್ಮ ಸಂಘಟನೆ ಸಹಿಸುವುದಿಲ್ಲ ಈಗಾಗಲೇ ಮೈಕ್ರೋಫೈನಾನ್ಸ್ ವಿರುದ್ಧ ನಮ್ಮ ಸಂಘಟನೆಯಾದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಹೋರಾಟ ಮಾಡಿ, ಅದೇ ಹೋರಾಟದ ಫಲ ಈಗಾಗಲೇ ಸರ್ಕಾರ ಮೈಕ್ರೋ ಫೈನಾನ್ಸ್ ಗಳನ್ನು ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿ ಮತ್ತು RBI ನೀತಿ ನಿಯಮಗಳನ್ನು ಪಾಲಿಸಬೇಕು ಇಲ್ಲವಾದರೆ ಕಾನೂನು ಕ್ರಮವನ್ನು ಜರಗಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ಕೊಟ್ಟಿದ್ದು
ಈ ಧರ್ಮಸ್ಥಳ ಕ್ಷೇಮಾಭಿವೃದ್ಧಿಯ ಯೋಜನೆಯಾದ (SKDRDP) ಸಂಘದವರು ಸುಮ್ಮನೆ ಸಾಲ ವಸುಲಾತಿಯನ್ನು ದೌರ್ಜನ್ಯದಿಂದ ಜಾತಿನಿಂದನೆಯನ್ನು ಮಾಡುತ್ತಾ ಸಾಲ ವಸೂಲಾತಿ ಮಾಡಲು ಮುಂದಾಗಿದೆ ಜೊತೆಗೆ ಗೂಂಡಾ ವರ್ತನೆ ಮಾಡುತ್ತಿದೆ ಇಂತಹ ಅವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ಗಡಿಪಾರು ಮಾಡಬೇಕು ಇಲ್ಲವಾದರೆ ಅತಿ ಶೀಘ್ರದಲ್ಲಿ ಇವರ ವಿರುದ್ಧ ದೊಡ್ಡ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ . ಕೃಷ್ಣ ಮಾದಿಗ , ರಾಮಣ್ಣ ಡೊಂಕಿಹಳ್ಳಿ, ಪುಟ್ಟರಾಜು ಬಿಗಿನೇಹಳ್ಳಿ, ರಂಗಸ್ವಾಮಿ ತೋವಿನಕೆರೆ, ರಮೇಶ್ ಯರೆಕಟ್ಟೆ, ಮೋಹನ್ ಕುಮಾರ್, ಮಂಜುನಾಥ್ ಚಿಕ್ಕನಾಯಕನಹಳ್ಳಿ , ಕಿರಣ್ ಕುಮಾರ್, ಮೂರ್ತಿ ಯಗಚಿ ಕಟ್ಟೆ, ಕುಮಾರಯ್ಯ ಧರ್ಮಗೊಂಡನಹಳ್ಳಿ, ಚಂದ್ರಶೇಖರ್ ತಿಪಟೂರು, ಸುರೇಶ್ ಕೋಡಿಹಳ್ಳಿ, ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.