Janataa24 NEWS DESK
Gubbi: ಈಜಲು ಹೋದ ಯುವಕ ನೀರು ಪಾಲು.
ಗುಬ್ಬಿ: ಈಜಲು ಹೋದ ಯುವಕ ನೀರು ಪಾಲಾದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ಮತ್ತಿಘಟ್ಟ ಗ್ರಾಮದ ಕೆರೆಯಲ್ಲಿ ನಡೆದಿದೆ ಮೃತ ದುರ್ದೈವಿ ಜಯರಾಮ್(40) ಎಂದು ಗುರುತಿಸಲಾಗಿದೆ .
ಕೃಷಿ ಜೀವನ ನಡೆಸಿಕೊಂಡು ತಂದೆ ತಾಯಿಯ ಜೊತೆ ಜೀವನ ನಡೆಸುತ್ತಿದ್ದು ಈತನ
ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದು
ಹೆಚ್ಚಿದ ಬಿಸಿಲಿನ ತಾಪಮಾನಕ್ಕೆ ಕೆರೆಯಲ್ಲಿಒಬ್ಬನೇ ಈಜಲು ಹೋದ ಸಂದರ್ಭದಲ್ಲಿ ಸ್ವಲ್ಪ ದೂರ ಈಜಿಕೊಂಡು ಹೋಗಿ ಮತ್ತೆ ಹಿಂತಿರುಗಿ ಬರುವಾಗ ನೀರಿನ ಒತ್ತಡವು ಅಧಿಕವಾದುದ್ದರಿಂದ ಮುಳುಗಿ ಹೋಗಿದ್ದಾನೆ ಎಂದು ಸ್ಥಳೀಯರ ಮಾಹಿತಿಯಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಗುಬ್ಬಿ ಪೊಲೀಸರು ಅಗ್ನಿಶಾಮಕದಳ ಹಾಗೂ ಸ್ಥಳೀಯರು ತೀವ್ರ ಶೋಧ ನಡೆಸಿದರು.
ತದನಂತರ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಸಹಾಯದಿಂದಾಗಿ ಯುವಕನ ಶವವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ .
ಈ ಸಂಬಂಧ ಪ್ರಕರಣವು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.