Turuvekere: ಶ್ರೀ ಹನುಮಂತರಾಯ ಸ್ವಾಮಿ ದೇವಾಲಯವನ್ನು ಉಳಿಸಿ– ಚಟ್ಟನಹಳ್ಳಿ ಗ್ರಾಮಸ್ಥರು.

Janataa24 NEWS DESK 

 

Turuvekere: ಶ್ರೀ ಹನುಮಂತರಾಯ ಸ್ವಾಮಿ ದೇವಾಲಯವನ್ನು ಉಳಿಸಿ– ಚಟ್ಟನಹಳ್ಳಿ ಗ್ರಾಮಸ್ಥರು.
Turuvekere: ಶ್ರೀ ಹನುಮಂತರಾಯ ಸ್ವಾಮಿ ದೇವಾಲಯವನ್ನು ಉಳಿಸಿ– ಚಟ್ಟನಹಳ್ಳಿ ಗ್ರಾಮಸ್ಥರು.

 

 

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೆಹಳ್ಳಿ ಮಜರೆ ಚಟ್ಟನಹಳ್ಳಿ ಗ್ರಾಮದ ಶ್ರೀ ಹನುಮಂತರಾಯ ಮತ್ತು ಶ್ರೀ ನರಸಿಂಹಸ್ವಾಮಿ ದೇವಾಲಯವನ್ನು ಉಳಿಸಿ ಮತ್ತು ದೇವಸ್ಥಾನದ ಆಸ್ತಿಯನ್ನು ಸರ್ಕಾರವು ವಶಕ್ಕೆ ಪಡೆಯುವಂತೆ ಚಟ್ಟನಹಳ್ಳಿ ಗ್ರಾಮಸ್ಥರು ತಾಲೂಕಿನ ದಂಡಾಧಿಕಾರಿಯಾದ ಕುಂ.ಞ. ಅಹಮ್ಮದ್ ರವರಿಗೆ ಮನವಿ ಮಾಡಿದರು.

 

 

ಮಂಗಳವಾರ ಬೆಳಗ್ಗೆ ಚಟ್ಟನಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರ ಮನವಿ ಮೇರೆಗೆ ಆಗಮಿಸಿದ ತಹಶೀಲ್ದಾರ್ ರವರಿಗೆ ಗ್ರಾಮಸ್ಥರು ತಮ್ಮ ಮನವಿ ಸಲ್ಲಿಸುವ ಮೂಲಕ ಗ್ರಾಮದಲ್ಲಿ ಪುರಾತನ ಕಾಲದ ಇತಿಹಾಸವುಳ್ಳ ಶ್ರೀ ಹನುಮಂತರಾಯ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಾಲಯವು, ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಗೆ ಸೇರಿದ್ದು, 1980ರ ಹಿಂದಿನ ದಶಕದ ಸಾಲಿನಲ್ಲಿ ದೇವಸ್ಥಾನದ ಮೂಲ ಪ್ರಧಾನ ಅರ್ಚಕರಾದ ಶ್ರೀ ರಾಮಾನುಜಯ್ಯ ತಂದೆ ವೆಂಕಟಪತಯ್ಯ ನವರು ಪೂಜಾ ಕೈಕಂರ್ಯಗಳನ್ನು ಮೊದಲಿಗೆ ಪ್ರಾರಂಭಿಸಿದವರು.

 

ಹೀಗೆ 1960 ರಿಂದ 1980ನೇ ಸಾಲಿನವರೆಗೂ ಶ್ರೀ ಹನುಮಂತ ದೇವರ ದೇವಸ್ಥಾನಕ್ಕೆ ಆಸ್ತಿಯಾದ ಸೀಗೇಹಳ್ಳಿ ಗ್ರಾಮದ ಸರ್ವೆ ನಂಬರ್ 216 ರ 5:20 ಐದು ಎಕರೆ 20 ಗುಂಟೆ ವಿಸ್ತೀರ್ಣದ ಜಮೀನು ದೇವಸ್ಥಾನಕ್ಕೆ ಸೇರಿದ್ದು, ಅದರ ಅನುಭವದಲ್ಲಿದ್ದ ಅರ್ಚಕರು ಅನುಭವದಂತೆ‌ 1984- 85ನೇ ಸಾಲಿನಲ್ಲಿ ಭೂ ನ್ಯಾಯ ಮಂಡಳಿ ವತಿಯಿಂದ ಮಂಜೂರು ಮಾಡಿಕೊಂಡಿದ್ದರು.

ಹೀಗೆ ಮುಂದುವರೆದ ವರ್ಷಗಳ ಕೈಬರಹದ ಆರ್ ಟಿ ಸಿ ಯಲ್ಲಿ ಪುನಃ: ಹನುಮಂತ ದೇವರ ಹೆಸರಿಗೆ ಪಹಣಿಯು ಮುಂದುವರೆಯುತ್ತದೆ, ತದನಂತರ 1996-97 ನೇ ಸಾಲಿನಲ್ಲಿ ರಾಮಾನುಜಯ್ಯನವರಿಗೆ ಪುನಹ ಸರ್ಕಾರದಿಂದ ಮರು ಮಂಜೂರು ಆಗುತ್ತದೆ.

 

ಹೀಗಿರುವಾಗ ರಾಮಾನುಜಯ್ಯನವರಿಗೆ, ಶ್ರೀನಿವಾಸಯ್ಯ, ತಿಮ್ಮಪ್ಪಯ್ಯ, ಜಯಮ್ಮ ಎಂಬ ಮೂರು ಮಕ್ಕಳಿದ್ದು, ರಾಮಾನುಜನಯ್ಯನವರು ಮರಣ ಹೊಂದಿದ ನಂತರ ಮೊದಲನೇ ಮಗ ಶ್ರೀನಿವಾಸಯ್ಯ ಕೂಡ ಮರಣ ಹೊಂದುತ್ತಾರೆ. ಆ ಸಂದರ್ಭದಲ್ಲಿ ಶ್ರೀನಿವಾಸಯ್ಯನ ಪತ್ನಿ ಜಯಲಕ್ಷ್ಮಮ್ಮ ಎಂಬುವವರು ರಾಮಾನುಜಯ್ಯನವರ ವಂಶವೃಕ್ಷದಂತೆ ಇರುವ ಇನ್ನಿಬ್ಬರು ಮಕ್ಕಳಾದ ತಿಮ್ಮಪ್ಪಯ್ಯ ಮತ್ತು ಜಯಮ್ಮನ ಹೆಸರನ್ನು ಕೈ ಬಿಟ್ಟು, ರಾಮಾನುಜಯ್ಯನವರ ಸೊಸೆ ಅಂದರೆ ಶ್ರೀನಿವಾಸಯ್ಯನ ಪತ್ನಿ ಜಯಲಕ್ಷ್ಮಮ್ಮ 2013- 14 ನೇ ಸಾಲಿನಲ್ಲಿ, ಒಬ್ಬರೇ ಅವರ ಹೆಸರಿಗೆ ಫವತಿ ಖಾತೆ ಮಾಡಿಸಿಕೊಳ್ಳುತ್ತಾರೆ.

ಕ್ರಮೇಣ ಜಯಲಕ್ಷ್ಮಮ್ಮ ಕೂಡ ಮರಣ ಹೊಂದುತ್ತಾರೆ. ಇವರ ಮಕ್ಕಳಾದ ವೆಂಕಟೇಶ ಮತ್ತು ಗಣೇಶ ರವರು2015-16ನೇ ಸಾಲಿನಲ್ಲಿ ಜಂಟಿಯಾಗಿ ಫವತಿ ಖಾತೆ ಮಾಡಿಕೊಂಡು 5 ಎಕರೆ 20 ಕುಂಟೆ ವಿಸ್ತೀರ್ಣದಲ್ಲಿ 2 ಎಕರೆ 20 ಗುಂಟೆ ಜಾಗವನ್ನು, ಕಾನೂನುಬಾಹಿರವಾಗಿ, ಉದ್ದೇಶಪೂರ್ವಕವಾಗಿ ತಮ್ಮ ವಂಶವೃಕ್ಷದವರನ್ನು ಕೈ ಬಿಟ್ಟು ಕಳೆದ ವರ್ಷದ 2024ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ರೇಣುಕಾ ಎಂಬುವರಿಗೆ ಮಾರಾಟ ಮಾಡಿರುತ್ತಾರೆ.

 

 

ಮೃತ ಜಯಲಕ್ಷ್ಮಮ್ಮನ ಪುತ್ರರಾದ ವೆಂಕಟೇಶ ಎಂಬುವನು ಶ್ರೀ ಹನುಮಂತರಾಯ ದೇವರಿಗೆ ಅರ್ಚಕನಾಗಿ, ಗಣೇಶ ಎಂಬುವನು ಶ್ರೀ ನರಸಿಂಹಸ್ವಾಮಿ ದೇವಾಲಯದ ಅರ್ಚಕನಾಗಿ ಸರ್ಕಾರ ನೇಮಿಸುತ್ತದೆ. ಆದರೆ ವೆಂಕಟೇಶ ಎಂಬ ಅರ್ಚಕನು ಸುಮಾರು ವರ್ಷಗಳಿಂದ ಸರಿಯಾಗಿ ಪೂಜೆ ಪುನಸ್ಕಾರಗಳನ್ನು ನೆರವೇರಿಸದೆ, ದುಶ್ಚಟಕ್ಕೆ ಬಲಿಯಾಗಿ ದೇವಸ್ಥಾನದ ಬಾಗಿಲು ಸಹ ತೆರೆಯದೆ ಭಕ್ತಾದಿಗಳಿಗೆ ಪೂಜೆಯನ್ನು ಮಾಡಿಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾನೆ. ಶ್ರೀ ನರಸಿಂಹ ಸ್ವಾಮಿಯ ಅರ್ಚಕನಾದ ಗಣೇಶ್ ಎಂಬುವನು ಬೆಂಗಳೂರಿನ ವಾಸಿಯಾಗಿದ್ದು, ಸರ್ಕಾರದ ಸಂಬಳವನ್ನು ಪಡೆದು ಗ್ರಾಮದ ದೇವಾಲಯಕ್ಕೆ ಬರದೆ, ಪೂಜೆಯನ್ನು ಮಾಡದೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾನೆ.

 

ಗ್ರಾಮಸ್ಥರು ಹಲವಾರು ಭಾರಿ ನ್ಯಾಯ ಪಂಚಾಯಿತಿ ಮಾಡಿ ತಿಳುವಳಿಕೆ ಹೇಳಿದರೂ ಪ್ರಯೋಜನವಾಗಿಲ್ಲ. ಮುಂದೆ ಸರ್ಕಾರವು ಬೇರೆ ಯಾರನ್ನಾದರೂ ಅರ್ಚಕರಾಗಿ ನೇಮಿಸಿದರೆ. ಸಂಬಳಕ್ಕಾಗಿ ಯಾರು ಬರುವುದಿಲ್ಲ, ವಂಶ ಪಾರಂಪರಿಕವಾಗಿ ಪೂಜೆ ಮಾಡಲು ಅರ್ಚಕರಿಗೆ ಮಕ್ಕಳಿಲ್ಲ, ಸರ್ಕಾರವು ಅರ್ಚಕರ ಅಭಿವೃದ್ಧಿಗಾಗಿ ನೀಡಿರುವ ಆಸ್ತಿಯನ್ನು ಮಾರಿಕೊಂಡು ಹೋದರೆ,ಮುಂದೆ ದೇವಾಲಯದ ಮತ್ತು ದೇವರ ಗತಿ ಏನು? ದೇವರು ಮತ್ತು ದೇವಾಲಯ ಅನಾಥವಾಗುತ್ತದೆ ಎಂದು ಗಂಭೀರವಾಗಿ ಆರೋಪಿಸಿದರು.

ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಮನವಿಯನ್ನು ಪರಿಗಣಿಸಿ, ದೇವಾಲಯಗಳನ್ನು ಮತ್ತು ದೇವಾಲದ ಆಸ್ತಿಯನ್ನು ರಕ್ಷಿಸಿ, ದೇವಾಲಯದ ಆಸ್ತಿಯನ್ನು ಪುನಃ ದೇವಾಲಯಕ್ಕೆ ಮೀಸಲಿರುಸುವಂತೆ ಆದೇಶಿಸಬೇಕೆಂದು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

 

Turuvekere: ರಜಾದಿನವೂ ಸಾರ್ವಜನಿಕರ ಸೇವೆಗೆ ಹಾಜರಾದ ತಹಶೀಲ್ದಾರ್!

ಮನವಿ ಪತ್ರ ಪಡೆದ ತಹಶೀಲ್ದಾರ್ ಕುಂ.ಞ. ಅಹಮದ್ ರವರು, ಗ್ರಾಮಸ್ಥರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು, ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ವರದಿ ನೀಡಿ ಗ್ರಾಮಸ್ಥರಿಗೆ ನ್ಯಾಯ ಮತ್ತು ಅನುಕೂಲ ಮಾಡಿಕೊಡುವ ಭರವಸೆಯನ್ನು ನೀಡಿದರು.

 

ಈ ಸಂದರ್ಭದಲ್ಲಿ ಮಾಯಸಂದ್ರ ಆರ್.ಐ. ರಂಗಸ್ವಾಮಿ. ಕಸಬಾ ಶಿವಕುಮಾರ್. ಗ್ರಾಮ ಲೆಕ್ಕಾಧಿಕಾರಿ ಸತೀಶ್ ಮತ್ತು ಗುಡಿಗೌಡರಾದ ನಾರಾಯಣ. ಪಟೇಲರಾದ ನಾರಾಯಣ. ಯುವ ಮುಖಂಡ ಗಂಗಣ್ಣ. ವಿಶ್ವನಾಥ್. ಗಂಗಣ್ಣ.ವೆಂಕಟೇಶ್. ಸತೀಶ್, ಮಗ್ಗದಪಾಳ್ಯ ಗಂಗಣ್ಣ ಮಾಜಿ ಗ್ರಾಫಂ ಅಧ್ಯಕ್ಷರು. ಸೇರಿದಂತೆ ಮಗ್ಗದ ಪಾಳ್ಯ ಚಟ್ಟನಹಳ್ಳಿ ಗ್ರಾಮದ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಸ್ಥಳೀಯ ಮುಖಂಡರುಗಳು, ಜನಪ್ರತಿನಿಧಿಗಳು ಮುಂತಾದವರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.


 

Leave a Reply

Your email address will not be published. Required fields are marked *