Document

Gubbi: ವಿಶೇಷ ಚೇತನರ ಪೋಷಕರು ಧೃತಿಗೆಡಬೇಡಿ– ರಚನಾ ಕರೆ.

Janataa24 NEWS DESK 

 

 

Gubbi: ವಿಶೇಷ ಚೇತನರ ಪೋಷಕರು ಧೃತಿಗೆಡಬೇಡಿ– ರಚನಾ ಕರೆ.
Gubbi: ವಿಶೇಷ ಚೇತನರ ಪೋಷಕರು ಧೃತಿಗೆಡಬೇಡಿ– ರಚನಾ ಕರೆ.

ಗುಬ್ಬಿ: ವಿಶೇಷ ಚೇತನರ ಪೋಷಕರು ತಮ್ಮ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರೆ ಸಮಾಜದಲ್ಲಿ ಉನ್ನತ ಪ್ರತಿಭೆಯಾಗಿ ಹೊರಹೊಮ್ಮುತ್ತಾರೆ. ಎಂದು ಚಿರಂತನ ಸಂಸ್ಥೆಯ ಸಂಸ್ಥಾಪಕಿ ರಚನಾ ತಿಳಿಸಿದರು.

ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಚಿರಂತನ ಸಂಸ್ಥೆ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್ ವಿತರಿಸಿ ಮಾತನಾಡಿದವರು ವಿಷಯ ಚೇತನ ಮಕ್ಕಳಲ್ಲಿ ಅತ್ಯಂತ ಕ್ರಿಯಾತ್ಮಕ ಪ್ರತಿಭೆಗಳು ಅಡಗಿರುತ್ತವೆ.
ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಅವರ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಮತ್ತು ವಿಶೇಷ ಚೇತನರ ಪೋಷಕರು ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಅಂಜಿಕೆ ಪಡಬಾರದು.
ಮಕ್ಕಳನ್ನು ಯಾವುದೋ ಒಂದು ಶಾಲೆಗೆ ಸೇರಿಸಿ ಸುಮ್ಮನಾಗದೆ ಅವರ ಶಿಕ್ಷಣಕ್ಕೆ ಮತ್ತು ಅವರ ಬಗ್ಗೆ ವಿಶೇಷ
ಕಾಳಜಿ ವಹಿಸಬೇಕು.
ಅವರ ಸಾಮರ್ಥ್ಯ ಕ್ಕೆ ಅನುಗುಣ ವಾಗುವಂತೆ ವಿಶೇಷ ಚೇತನರ ನುರಿತ ಶಾಲೆಗೆ ಸೇರಿಸಬೇಕು. ಅದರಂತೆ ಸಂಘ-ಸಂಸ್ಥೆಗಳ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳು ಸ್ವಯಂ ಪ್ರೇರಿತವಾಗಿ ಜೀವನ ನಡೆಸಲು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ತಿಳಿಸಿದರು.

ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಈಗಿನ ಕಾಲದ ಪೋಷಕರು ಸಮಾಜದಲ್ಲಿನ ಮೌಲ್ಯಗಳನ್ನು ಅರಿತು ತಾವು ಬೆಳೆಸಿಕೊಂಡು ತಮ್ಮ ಮಕ್ಕಳಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ಕುಟುಂಬಗಳ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಡಾ. ಬಿ ಆರ್,ಅಂಬೇಡ್ಕರ್ ರವರು ರಚಿಸಿರುವ ಭಾರತ ಸಂವಿಧಾನದಲ್ಲಿ
ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ತನ್ನದೇ ಆದ ಗೌರವ ಇರುತ್ತದೆ. ಹಾಗಾಗಿ ಮಕ್ಕಳು ಅಂಗ ವೈಫಲ್ಯತೆ ಮರೆತು ಸಮಾಜದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ತಾಲೂಕು ಅಧ್ಯಕ್ಷ ಜಯದೇವ್ ಕುಮಾರ್, ಸಿದ್ದಪ್ಪ, ವಿವೇಕಾನಂದ, ಶೃತಿ, ಶ್ರೀಧರ್, ಸೇರಿದಂತೆ ಪೋಷಕರು ಮತ್ತು ಮಕ್ಕಳು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Pavagada: ಬೆಸ್ಕಾಂ ಇಲಾಖೆಯಲ್ಲಿಯೇ TC ಕಳ್ಳರಿದ್ದಾರೆ..!

 

Document

Leave a Reply

Your email address will not be published. Required fields are marked *