Janataa24 NEWS DESK
Pavagada: ಒಂದೇ ವರ್ಷದ ಎರಡು ಬಾರಿ ಡೆಂಗ್ಯೂ ವಿವಿಧ ಜ್ವರಗಳಿಗೆ ತುತ್ತಾದ ಗ್ರಾಮ.

ಪಾವಗಡ: ತಾಲೂಕಿನ ಹೊಸಹಳ್ಳಿ ತಾಂಡದಲ್ಲಿ ಸ್ವಚ್ಛತೆ ಇಲ್ಲದೆ ಕಲುಷಿತ ನೀರು ಕುಡಿದು ಗ್ರಾಮದ ಕೆಲವರು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಸ್ವಚ್ಛತೆ ಇಲ್ಲದೇ ಇರುವುದೇ ಡೆಂಗ್ಯೂ ಜ್ವರಕ್ಕೆ ಮೂಲ ಕಾರಣ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ತಾಂಡದ ಶ್ರೀನಿವಾಸ್ ನಾಯಕ್ ಮಾತನಾಡಿ ನಮ್ಮ ಗ್ರಾಮ ಸ್ವಚ್ಛತೆ ಇಲ್ಲದೆ ಪದೇ ಪದೇ ಜ್ವರಗಳಿಗೆ ತುತ್ತಾಗುತ್ತಿರುವ ಗ್ರಾಮಸ್ಥರು ಸುಮಾರು 12 ಜನಗಳಿಗೆ ಜ್ವರ ಕಾಣಿಸಿಕೊಂಡಿತ್ತು. ಮತ್ತೆ ನಮ್ಮ ಗ್ರಾಮದಲ್ಲಿ ಹಲವು ಮಂದಿಗೆ ಅದರಲ್ಲಿ ನನ್ನ ಮಗುವಿಗೆ ಡೆಂಗ್ಯೂ ಪ್ರಕರಣ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಹ ಬೆಳಿಗ್ಗೆ ಬಂದಿದೆ
ನನ್ನ ಮಗಳು ನವ್ಯ
ಕೆಲವು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದದ್ದು ಕಂಡು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದರೆ ಬಹಳಷ್ಟು ಜನ ನಮ್ಮ ಗ್ರಾಮದವರೇ ದಾಖಲಾಗಿದ್ದಾರೆ.
ಮೂಲ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಇಲ್ಲ ಸರಿಯಾದ ನೀರಿನ ವ್ಯವಸ್ತೆ ಇಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸಳ್ಳಿ ತಾಂಡದ ರೋಗಿಗಳಿಗೆ ವಿಚಾರಿಸಲು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹೆಚ್. ವಿ. ವೆಂಕಟೇಶ್ ಯೋಗಕ್ಷೇಮ ವಿಚಾರಿಸಿದರು ವೈದ್ಯರ ಬಳಿ ಮಾಹಿತಿ ಪಡೆದರು.
ತಾಲೂಕು ಪಂಚಾಯತಿ ಇಓ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಎಂಬುದಾಗಿ ಸೂಚಿಸಿದರು.
ಸಂಬಂಧಪಟ್ಟ ಪಿಡಿಓ ಅವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದರು.
ಈ ವೇಳೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ತಹಸಿಲ್ದಾರ್. ತಾಲೂಕು ಪಂಚಾಯಿತಿ ಇಓ. ಇತರರು ಇದ್ದರು.
ವರದಿ:ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/