Janataa24 NEWS DESK
Turuvekere: ಸೂಳೆಕೆರೆ ಕೆರೆಯನ್ನು ತಾಲೂಕು ಆಡಳಿತ ಬಾಡಿಗೆ ಕೊಟ್ಟಿದೆಯೇ? ಮತ್ತೆ ಶುರುವಾಯಿತು ಮಣ್ಣು ಮಾಫಿಯಾ.
ತುರುವೇಕೆರೆ: ಶಾಸಕರು ಜಿಲ್ಲೆಯ ರೈತರ ನೀರಿಗಾಗಿ ಹೋರಾಟ ನಡೆಸುತ್ತಿರುವುದು ಒಂದು ಕಡೆ ಆದರೆ, ಇತ್ತ ರೈತ ನಂಬಿರುವ ಕೆರೆಯನ್ನ ಬರಿದಾಗಿಸುತ್ತಿರುವ ಕೆಲಸ ಇನ್ನೊಂದೆಡೆಯಾಗಿದೆ.
ಎರಡು ತಿಂಗಳ ನಂತರ ಮತ್ತೆ ಶುರುವಾಗಿದೆ ಕೆರೆಯ ಮಣ್ಣು ಬಗೆಯುವ ಕೆಲಸ.
ಶಾಸಕರನ್ನ ಯಾಮಾರಿಸಿ ಏನಾದರೂ, ಮಣ್ಣು ತೆಗೆಯುವ ಕೆಲಸಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರಾ ತಾಲೂಕು ಆಡಳಿತದ ಅಧಿಕಾರಿಗಳು.
ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಸೂಳೆಕೆರೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಸೂಳೆಕೆರೆ ಗ್ರಾಮದ ಕೆರೆಯ ಸ್ಥಿತಿ ನೋಡಲು ಅಸಾಧ್ಯ ಎಂಬ ಸುದ್ದಿಯನ್ನು ಈಗಾಗಲೇ ಸುದ್ದಿ ವಾಹಿನಿಗಳು ಏಪ್ರಿಲ್ ತಿಂಗಳಲ್ಲೇ ಪ್ರಸಾರ ಮಾಡಿದ್ದವು, ಇದರ ಬೆನ್ನಲ್ಲೇ ಚುರುಕುಗೊಂಡ ತಾಲೂಕು ಆಡಳಿತದ ಅಧಿಕಾರಿಗಳು ಕೂಡಲೇ ಈ ಮಣ್ಣು ಮಾಫಿಯವನ್ನ ಸ್ಥಗಿತಗೊಳಿಸಿತ್ತು.
ಆದರೆ ಮತ್ತೆ ಸೂಳೆಕೆರೆ ಕೆರೆಯ ಮಣ್ಣು ತೆಗೆಯುವ ಕೆಲಸ ಮತ್ತೆ ಶುರುವಾಗಿದೆ, ಹಾಗಾದರೆ ಕಾಟಾಚಾರಕ್ಕೆ ನಿಲ್ಲಿಸಿ ಬಿಟ್ಟಿದ್ದರ ಮಣ್ಣು ಮಾಫಿಯವನ್ನ, ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯವರು ತಾಲೂಕು ಮಠದ ಅಧಿಕಾರಿಗಳಿಗೆ ಸರಿಯಾಗಿ ಸೂಚನೆ ನೀಡಿಲ್ಲವೇ ಎಂಬ ಪ್ರಶ್ನೆ ತಾಲೂಕಿನಲ್ಲಿರುವ ಕಟ್ಟ ಕಡೆಯ ಬಡ ರೈತನಿಂದಲೂ ಕೇಳಬೇಕಾಗುವ ಸಂದರ್ಭ ದೂರ ಇಲ್ಲ ಅನ್ನಿಸುತ್ತೆ.
ಮಣ್ಣನ್ನು ಬಗೆದು ಹೊರತೆಗೆಯುತ್ತಿರುವವರ ವಿರುದ್ಧ ಪ್ರಶ್ನೆ ಮಾಡಲು ಈ ಭೂಮಿಯ ಮೇಲೆ ಯಾವ ಅಧಿಕಾರಿ ಹುಟ್ಟಿಲ್ಲವೇ?ಈ ಕೆರೆಯು ಏಪ್ರಿಲ್ ತಿಂಗಳಲ್ಲಿ ಮಣ್ಣನ್ನು ಬಗೆದು ತೆಗೆದ ಭೂಗಳ್ಳರಿಂದ ಸ್ಟೇಡಿಯಂ ರೂಪ ಪಡೆದುಕೊಂಡಿತ್ತು ಈಗ ಮತ್ತೆ ಅದೇ ಮಣ್ಣನ್ನು ತೆಗೆಯುತ್ತಿರುವುದರಿಂದ ಮುಂದೆ ಈ ಕೆರೆ ಹೋಗಿ ಸಣ್ಣ ಕಟ್ಟೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದನಿಸುತ್ತದೆ, ಈ ಕೆರೆಯಿಂದಾಗಿ ಅಕ್ಕಪಕ್ಕದ ಗ್ರಾಮದ ರೈತರಗಳಿಗೆ ನೀರನ್ನು ಕೊಡುತ್ತಿರುವ ಗಂಗಾಮಾತೆಯಾಗಿ ಇದ್ದ ಈ ಕೆರೆಯ ಸ್ಥಿತಿ ಈಗ ನೋಡಲು ಅಸಾಧ್ಯ , ಜೊತೆಗೆ ಇವತ್ತಿನ ಸ್ಥಿತಿ ಕೆರೆಯಲ್ಲಿ ನೀರು ಸಹ ಇಲ್ಲ ಹಾಗಾದರೆ ಈ ಕೆರೆಯ ಮಣ್ಣನ್ನು ತೆಗೆಯುತ್ತಿರುವುದರ ಬಗ್ಗೆ ಅಧಿಕಾರಿಗಳಿಗೆ ತಿಳಿದಿಲ್ಲವೇ?
ಅಥವಾ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿ ಕೆರೆಯ ಮಣ್ಣನ್ನು ತೆಗೆಯಲು ಅನುಮತಿ ಕೊಟ್ಟಿದ್ದಾರ? ಒಟ್ಟಾರೆ ಈ ಕೆರೆಯ ಸ್ಥಿತಿಯನ್ನು ನೋಡಿದರೆ ಈ ತುರುವೇಕೆರೆ ತಾಲೂಕಿನ ಸೂಳೆಕೆರೆ ಕೆರೆಯನ್ನು ತಾಲೂಕು ಆಡಳಿತ ಏನಾದರೂ ಮಣ್ಣು ಬಗೆಯುವವರಿಗೆ ಬಾಡಿಗೆ ಕೊಟ್ಟಿದೆಯೇ,ಈ ತಾಲೂಕಿನಲ್ಲಿ ಈ ರೀತಿ ಎಷ್ಟು ಕೆರೆಗಳ ಸ್ಥಿತಿ ನೋಡಲು ಅಸಾಧ್ಯವಾಗುವಷ್ಟು ಮಟ್ಟಕ್ಕೆ ಆಗಿದೆಯೋ ಎಂಬುದನ್ನು ನಾವುಗಳು ಹುಡುಕಬೇಕಾಗಿದೆ, ಇದೇ ರೀತಿ ಬರಗಾಲದಲ್ಲಿ ಮಣ್ಣನ್ನು ತೆಗೆಯುವ ಕೆಲಸ ಮುಂದುವರೆದರೆ ಕೃಷಿಗಾಗಿ ನೀರಿಲ್ಲದೆ ರೈತರ ಸ್ಥಿತಿ ಏನಾಗಬಹುದು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ .
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrvh
ttps://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
Tumkur: ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಜುಲೈ 01ರಂದು ತಿಪಟೂರಿನಲ್ಲಿ ಬೃಹತ್ ಪ್ರತಿಭಟನೆ