Janataa24 NEWS DESK
Pavagada: 240 ಮತಘಟ್ಟೆಗಳಲ್ಲಿ ಒಟ್ಟು ಶೇ 70%ರಷ್ಟು ಮತದಾನ| 70% voting in 240 polling booths of Pavagada|

ಪಾವಗಡ: ಈ ಭಾಗದ ಚಿತ್ರದುರ್ಗ(Chithradurga) ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕಿನ 240ಮತಘಟ್ಟೆಗಳಲ್ಲಿ ಶಾಂತಿರೀತಿಯ ಮತದಾನವಾಗಿದ್ದು ಯಾವುದೇ ಆಹಿತಕರ ಘಟನೆಗಳಿಗೆ ಅವಕಾಶವಿಲ್ಲದೇ ಶೇ,65ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.
ಲೋಕಸಭೆ ಚುನಾವಣೆ(Lokasabha Election 2024) ಪ್ರಯುಕ್ತ,ಚಿತ್ರದುರ್ಗ ಲೋಕಸಭೆ ವ್ಯಾಪ್ತಿಗೆ ಒಳಪಟ್ಟ ಪಾವಗಡ ತಾಲೂಕಿನ ಎಲ್ಲಾ ಮತಘಟ್ಟೆಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ಮತದಾನವಾಗಿದ್ದು ಚುನಾವಣಾ ನಿಯಮನುಸಾರ ಪೊಲೀಸ್(Police) ರಕ್ಷಣೆ ಹಾಗೂ ಚುನಾವಣೆ ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.ಇದು ಬಹುತೇಕ ಸಾರ್ವಜನಿಕರಿಗೆ ಮೆಚ್ಚಿಗೆಗೆ ಅಧಿಕಾರಿಗಳನ್ನು ಪ್ರಶಂಸಿದ್ದಾರೆ.ಬೆಳಗ್ಗೆಯಿಂದಲೇ ಮತದಾನ ಪ್ರಾರಂಭವಾಗಿದ್ದು ಬೆಂಗಳೂರು ಹಾಗೂ ಇತರೆ ದೂರದ ಪ್ರದೇಶಗಳಿಂದ ಆಗಮಿಸಿದ್ದ ಮತದಾರರರು ತಮ್ಮ ಮತಘಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.
ಈ ಭಾರಿಯ ಚುನಾವಣೆ ತಾಲೂಕಿನಧ್ಯಂತ ಮಂದಗತಿಯಲ್ಲಿ ಮತದಾನ ಸಾಗಿದ ಬಗ್ಗೆ ಬಹುತೇಕ ಕಡೆ ಕಂಡುಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಬಿರುಸಿನಿಂದ ಮತದಾನ ನಡೆದಿದ್ದು. ಅದಕ್ಕೆ ಹೋಲಿಕೆ ಮಾಡಿದರೆ ಈ ಚುನಾವಣೆಯಲ್ಲಿ ಆತಂಹ ಬಿರುಸಿನ ಚಟುವಟಿಕೆ ಕಂಡುಬಂದಿದ್ದು ಅತ್ಯಂತ ಕಡಿಮೆ.
ಈ ಬಾರಿಯ ಲೋಕ ಚುನಾವಣೆಯಲ್ಲಿ ಯಾವುದೇ ಉದ್ವೇಗ ಹಾಗೂ ಮತದಾರರ ಮನವೊಲಿಕೆ ಹಾಗೂ ಕೈಲಾದವರನ್ನು ಮನೆಗಳಿಂದ ಮತಘಟ್ಟೆಗೆ ಕರೆ ತಂದುಮತದಾನ ಮಾಡಿಸಿದಂತಹ ನಿರ್ದಶನ ಅಷ್ಟಕಷ್ಟೇ ಇತ್ತು. ಚುನಾವಣೆಗೂ ಮುನ್ನ ತಲೆಕೆಡಿಸಿಕೊಂಡಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ಚುನಾವಣೆಯ ದಿನ ಸಮಾಧಾನದಿಂದಲೇ ಮತಘಟ್ಟೆಗಳ ಸಮೀಪ ದೂರದಲ್ಲಿ ಕರಪತ್ರವಿಡಿದು ಇದೇ ಪಕ್ಷಕ್ಕೆ ಮತಹಾಕುವಂತೆ ಮನವಿ ಮಾಡುತ್ತಿದ್ದು ಸಾಮಾನ್ಯವಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕೆಲಸದ ನಿಮಿತ್ತ ಬೆಂಗಳೂರು ಹಾಗೂ ಇತರೆ ನಗರ ಪ್ರದೇಶಗಳಲ್ಲಿ ವಾಸವಿದ್ದ ಇಲ್ಲಿನ ಮತದಾರರು ಬಹುತೇಕ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿ ವಾಪಸ್ಸಾಗಿರುವುದಾಗಿ ತಿಳಿದುಬಂದಿದೆ. ಲೋಕಸಭೆ ಚುನಾವಣೆಯ ಕಾವು ಕಡಿಮೆ ಪ್ರಮಾಣದಲ್ಲಿದ್ದು ಸಂಜೆ 6ಗಂಟೆ ವೇಳೆಗೆ ತಾಲೂಕಿನಧ್ಯಂತ ಶೇ 65ರಷ್ಟು ಮತದಾನವಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶೇಖಡ ನೂರರಷ್ಟು ಮತದಾನವಾಗಬೇಕು ಎಂಬ ಸರ್ಕಾರದ ಆದೇಶದನ್ವಯ ತಾಲೂಕು ಆಡಳಿತ ಹಾಗೂ ತಾಪಂ ವತಿಯಿಂದ ಕಡ್ಡಾಯ ಮತದಾನ ಕುರಿತು ಕಳೆದ 10ದಿನಗಳಿಂದ ಎತ್ತಿನಗಾಡಿ,ಮೇಣದ ಬತ್ತಿ ಇತರೆ ಜನಜಾಗೃತಿ ಜಾಥಗಳ ಮೂಲಕ ಹಲವಾರು ಕಾರ್ಯಕ್ರಮ ರೂಪಿಸಿದ್ದರು. ಆದರೂ ಜನತೆ ಮತಘಟ್ಟೆಗೆ ತೆರಳಿ ನಿರೀಕ್ಷೆ ಪ್ರಮಾಣದಲ್ಲಿ ಮತದಾನವಾಗದ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಬೇಸರ ವ್ಯಕ್ತವಾಗಿದೆ.
ವರದಿ:ಇಮ್ರಾನ್ ಉಲ್ಲಾ ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/evm-the-voting-machine-was-handed-to-ananth-nag/