Janataa24 NEWS DESK
Lokasabha: ತುರುವೇಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಬಿರುಸಿನ ಪ್ರಚಾರ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ಸರ್ಕಲ್ ನಲ್ಲಿ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ(Muddahanumegowda) ಬಿರುಸಿನ ಪ್ರಚಾರ ಮಾಡಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿದ ಅವರು, ನಾನು ತುಮಕೂರು ಜಿಲ್ಲೆಯವನೇ ಆಗಿದ್ದು ನಾನೊಬ್ಬ ರೈತನ ಮಗ ,ನನಗೆ ಈಗಲೂ ಸಹ ರೈತನ ಕೆಲಸ ಮಾಡಲು ಬರುತ್ತದೆ, ನನ್ನನ್ನು ಈಗಾಗಲೇ ಒಂದು ಬಾರಿ ಲೋಕಸಭಾ ಸದಸ್ಯನಾಗಿ ಮಾಡಿದ್ದೀರಿ, ನಾನು ಅದರಂತೆ ರೈತಪರ ಕಾಳಜಿ ಇಟ್ಟುಕೊಂಡು ರೈತ ಪರ ಯೋಜನೆಗಾಗಿ ಹೋರಾಟ ನಡೆಸಿದ್ದೇನೆ, ಮತದಾರ ಪ್ರಭುಗಳಾದ ನೀವು ಬೇರೆ ಎಲ್ಲಿಂದಲೋ ಬಂದ ಬಿಜೆಪಿ ಅಭ್ಯರ್ಥಿಯನ್ನು ನೀವು ನಂಬಬೇಡಿ, ಅವರು ಇವತ್ತು ಇಲ್ಲಿ ,ನಾಳೆ ಬೇರೆಲ್ಲೂ, ನಾಡಿದ್ದು ಇನ್ನೆಲ್ಲೋ ಎಂಬಂತೆ ನಡೆದುಕೊಳ್ಳುತ್ತಾರೆ, ಜೊತೆಗೆ ಈ ಜಿಲ್ಲೆಯ ಅಭಿವೃದ್ಧಿಯನ್ನು ಖಂಡಿತ ಅವರು ಮಾಡುವುದಿಲ್ಲ, ನಾನು ಈಗಾಗಲೇ ಇದೇ ಜಿಲ್ಲೆಯಲ್ಲಿ ಸಾವಿರಕ್ಕಿಂತ ಹೆಚ್ಚು ಬಾರಿ ಇದೇ ರಸ್ತೆಯಲ್ಲಿ ಸಂಚಾರ ಮಾಡಿದ್ದು, ಇವತ್ತು ಸಹ ನೀವುಗಳು ನನ್ನೊಬ್ಬನನ್ನೇ ಬಿಟ್ಟು, ಇಂತಹ ಹಳ್ಳಿ ಎಲ್ಲಿದೆ ಅಂತ ಹೇಳಿದರೆ ಅಂತ ಹಳ್ಳಿಗೆ ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ,ಹಾಗಾಗಿ ನಮ್ಮ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳು ನನಗೆ ಚಿರಪರಿಚಿತ ಇಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ಮತ್ತೊಂದು ಬಾರಿ ನನ್ನನ್ನು ಲೋಕಸಭಾ ಸದಸ್ಯನಾಗಿ ನೀವು ಆಯ್ಕೆ ಮಾಡಿದ್ದೆ ಆದರೆ, ನಾನು ನಮ್ಮ ಕಲ್ಪತರು ನಾಡಿನ ಅತಿ ಮುಖ್ಯ ಸಮಸ್ಯೆಗಳಾದ ಕೊಬ್ಬರಿ ಬೆಂಬಲ ಬೆಲೆ, ಮತ್ತು ರೈತರ ಸಮಸ್ಯೆಗಳಿಗೆ ಹೆಚ್ಚು ಒತ್ತುಕೊಟ್ಟು ಅಭಿವೃದ್ಧಿಯನ್ನು ಮಾಡುತ್ತೇನೆ.
ಈ ಬಾರಿ ನನಗೆ ನೀವುಗಳು ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮತಯಾಚಿಸಿದರು.ಪ್ರಚಾರದ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಒಬ್ಬ 40% ಕಮಿಷನ್ ಗಿರಾಕಿ, ನೀವೇನಾದರೂ ಆತನಿಗೆ ಮತ ನೀಡಿದರೆ ಮುಂದಿನ ದಿನಗಳೇ ಐವತ್ತು ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಬಡವರ ತಿನ್ನುವ ಅನ್ನ ಕಿತ್ತುಕೊಂಡಿದ್ದೆ ಈ ಬಿಜೆಪಿ ಸರ್ಕಾರ ನೆನಪಿಟ್ಟುಕೊಳ್ಳಿ,ಇನ್ನು ಜೆಡಿಎಸ್ ವಿಚಾರಕ್ಕೆ ಬಂದರೆ, ನಾನು ಕೂಡ ಮೊದಲು ಜೆಡಿಎಸ್ ನಿಂದಲೇ ಬಂದವನು, ಈ ಚುನಾವಣೆ ನಂತರ ಅಪ್ಪ ಮಕ್ಕಳು ಅಳಿಯ ಮೊಮ್ಮಕ್ಕಳು ಎಲ್ಲರೂ ಸಹ ಇನ್ನು ಕೇವಲ ನಾಲ್ಕೈದು ತಿಂಗಳಲ್ಲಿ ಅಳುತ್ತಾ ಬರುತ್ತಾರೆ, ಅವರಿಗೇನು ಒಂದು ಪಕ್ಷವೇ ಮತ್ತೆ ಬದಲಾಗುತ್ತಾ ಹೋಗುತ್ತಾರೆ ಅವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ,ಮುಂದುವರೆದು ಮಾತನಾಡಿದ ಅವರು ಮೊನ್ನೆಯಷ್ಟೇ ತುರುವೇಕೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷ ರೋಡ್ ಶೋ, ನಡೆಸುವ ವೇಳೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ಹೇಳಿಕೆ ನೀಡಿದ್ದಾರೆ ಅದು, ನಮ್ಮ ಕಾಂಗ್ರೆಸ್(Congress) ಸರ್ಕಾರ ನೀಡುತ್ತಿರುವ 5 ಗ್ಯಾರೆಂಟಿಯನ್ನು ಬಳಸಿಕೊಂಡು ಮಹಿಳೆಯರು ದಾರಿ ತಪ್ಪುತಿದ್ದಾರೆ ಎಂಬ ಕೆಟ್ಟ ಪದವನ್ನು ಬಳಸಿ ಮಹಿಳೆಯರ ಆಕ್ರೋಶಕ್ಕೆ ಬಲಿಯಾಗಿದ್ದಾರೆ, ಅದಕ್ಕೆ ಉತ್ತರ ಈ ಲೋಕಸಭಾ ಚುನಾವಣೆಯಲ್ಲಿ ಮಾಜಿ ಕುಮಾರಸ್ವಾಮಿಯವರಿಗೆ ಸಿಗಲಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ವಿರುದ್ಧ ಬೆಮೆಲ್ ಕಾಂತರಾಜು ಆಕ್ರೋಶ ಹೊರ ಹಾಕಿದರು.
ಇದೆ ವೇಳೆ ಸುತ್ತಮುತ್ತಲಿನ ಕಾಂಗ್ರೆಸ್(Congress) ಕಾರ್ಯಕರ್ತರು ಟಿ ಬಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ, ಪ್ರಚಾರದ ವೇಳೆ ನೂರಾರು ಕಾರ್ಯಕರ್ತರು, ಮಹಿಳೆಯರು, ಹಾಗೂ ತುರುವೇಕೆರೆ ಕಾಂಗ್ರೆಸ್ ಮುಖಂಡರುಗಳಾದ ಬಿಎಸ್ ವಸಂತ್ ಕುಮಾರ್, ಸುಬ್ರಮಣಿ ಶ್ರೀಕಂಠೇಗೌಡ, ಎನ್ ಆರ್ ಜಯರಾಮ್, ಗೀತಾ ರಾಜಣ್ಣ, ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿಯ ಸಂಸ್ಥಾಪಕ ಮೂರ್ತಿ ಸಿ ಎಸ್, ಗ್ರಾಮದ ಯುವ ಮುಖಂಡರುಗಳಾದ, ಕೆ ಟಿ ಗೋವಿಂದರಾಜ್, ನಟರಾಜ್ ಸೊರವನಹಳ್ಳಿ, ಮಂಜುನಾಥ್ ಎಸ್ ಎನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಾಬಿರ್ ಹುಸೇನ್, ಯೋಗೀಶ್ ಹೊಣಕೆರೆ, ಜಿತೇಂದ್ರ ಕುಮಾರ್, ಇನ್ನು ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/gubbi-narendra-modis-bjp-government-is-a-false/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en