Document

Pavagada: ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕೋರನ್ನು ನಾನೆಂದಿಗೂ ಸಹಿಸುವುದಿಲ್ಲ ಮಾಜಿ ಸಚಿವ ವೆಂಕಟರಮಣಪ್ಪ

Janataa24 NEWS DESK

Pavagada: ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕೋರನ್ನು ನಾನೆಂದಿಗೂ ಸಹಿಸುವುದಿಲ್ಲ ಮಾಜಿ ಸಚಿವ ವೆಂಕಟರಮಣಪ್ಪ

ಪಾವಗಡ: ಶನಿವಾರ ಪಟ್ಟಣದ ಎಸ್.ಎಸ್.ಕೆ.ಬಯಲುರಂಗಮಂದಿರದಲ್ಲಿ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರ ಮತಯಾಚನೆಗೆ ಹಮ್ಮಿಕೊಂಡಿದ್ದ ಬೃಹತ್ ಕಾಂಗ್ರೆಸ್(Congress) ಕಾರ್ಯಕರ್ತರ ಸಮಾವೇಶ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು . ಚಂದ್ರಪ್ಪ ಅವರ ಸಮಾಜದಲ್ಲೇ ಉತ್ತಮ ವ್ಯಕ್ತಿ ಆದರೆ ಕೆಲ ಕಿಡಿಗೇಡಿಗಳು ಹಿಂದೆ ಅವರನ್ನು ಬಳಸಿಕೊಂಡಿದ್ದ ಉದ್ದೇಶಕ್ಕೆ ನನ್ನಲ್ಲಿ ಮನಸ್ತಾಪ ಇದೆ ನಾನು ನಾಗರಹಾವು ಇದ್ದ ಹಾಗೆ ನನ್ನನ್ನು ಮೋಸ ಮಾಡಿದರೆ ಎಂದಿಗೂ ಬಿಡುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪುತ್ರ ಎಚ್.ವಿ. ವೆಂಕಟೇಶ್ ವಿರುದ್ದ ಬಂಡಾಯ ಗುಂಪಿನೊಂದಿಗೆ ಬಿ.ಎನ್.ಚಂದ್ರಪ್ಪ ಟಿಕೆಟ್ ಕೇಳಿದ್ದರೂ ಮತ್ತು ನನ್ನ ವಿರೋದಿ ಗುಂಪಿನೊಂದಿಗೆ ಗುರ್ತೀಸಿಕೊಂಡಿದ್ದರು ಇದರಿಂದ ನನಗೆ ಅವರ ಮೇಲೇ ಸಿಟ್ಟು ಕೋಪ ಇತ್ತು, ಅದರೂ ಸಹ ಲೋಕಸಭಾಚುನಾವಣೆಯಲ್ಲಿ ಚಂದ್ರಪ್ಪ ಸ್ಪರ್ಧೇ ಮಾಡಿದ್ದು, ಹೈ ಕಾಮಾಂಡ್ ನಿರ್ಧೆಶನದಂತೆ ಅವರ ಪರವಾಗಿ ನಾನು ಮತ್ತು ನನ್ನ ಪುತ್ರ ಶಾಸಕ ಎಚ್.ವಿ. ವೆಂಕಟೇಶ್ ಪ್ರಚಾರ ಮಾಡುತ್ತಿದ್ದು, ವಿಧಾನಸಭಾ ಚುನಾವಣೆಯಕಿಂತ ಅತಿಹೆಚ್ಚು ಲೋಕಸಭಾ ಚುನಾವಣೆಯಲ್ಲಿ , ಚಂದ್ರಪ್ಪನನ್ನು ಅತ್ಯಧಿಕ ಮತಗಳ ಅಂತರದಿಂದ ಜಯಗೊಳಿಸುತ್ತೇವೆ ಎಂದು ತಿಳಿಸಿದರು.

ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ನಮ್ಮಲ್ಲಿ ಸಣ್ಣಪುಟ್ಟ ಬಿನ್ನಾಭಿಗಳಿದ್ದರೂ ಸಹ ಅವನ್ನೆಲ್ಲಾ ಸರಿಪಡಿಸಿಕೊಂಡಿದ್ದು, ಚಿತ್ರ ದುರ್ಗದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಮಾತು ಕೋಟ್ಟಿದ್ದೇನೆ, 1 ಲಕ್ಷ ಅಂತರದಿಂದ ಚಂದ್ರಪ್ಪ ನವರನ್ನು ಗೆಲ್ಲಿಸುವುದಾಗಿ ಅದರಂತೆ ಕಾರ್ಯಕರ್ತರು ಚುನಾವಣೆಯಲ್ಲಿ ಮತಹಾಕಿಸಬೇಕು ಎಂದು ಕರೇ ನೀಡಿದರು. ಅಭ್ಯರ್ಥಿ ಚಂದ್ರಪ್ಪ ಮಾತನಾಡಿ ಈ ಹಿಂದೆ ಸಂಸದನಾದಂತಹ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಕೆಲಸಗಳು ಮಾಡಿದ್ದೇನೆ ನನ್ನ ಹಾಗೂ ಮಾಜಿ ಸಚಿವರ ಒಡನಾಟ ಹಳೆಯ ಒಡನಾಟ ಪಕ್ಷದಲ್ಲಿ ಯಾವುದೇ ನಮ್ಮಲ್ಲಿ ಗೊಂದಲ ಇಲ್ಲ ಎಲ್ಲರೂ ಒಟ್ಟಿಗೆ ಸೇರಿ ಚುನಾವಣಾ ಪ್ರಚಾರಕ್ಕೆ ಹೋಗಿ ಮತ ಕೇಳುತ್ತೇವೆ. ರಾಜ್ಯದ ಐದು ಗ್ಯಾರಂಟಿಗಳ(Five Guarantees) ನೀಡಿದ್ದೇವೆ ಅದರ ಅನ್ವಯ ಮತದಾರು ಈ ಬಾರಿ ನಮ್ಮ ಕೈ ಹಿಡಿಯೋದು ನಿಶ್ಚಿತ ಎಂದರು. ಬಿಜೆಪಿಯ(BJP)ವರು ಈಗಾಗಲೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬುದಾಗಿ ಕೆಲವೊಂದು ಕಡೆ ಭಾಷಣಗಳಲ್ಲಿ ಹೇಳಿಕೊಂಡು ಓಡಾಡುತ್ತಿರುವುದು ಎಲ್ಲರೂ ತಿಳಿದ ವಿಷಯ.

ಯಾವುದೇ ಕಾರಣಕ್ಕೂ ಅಂಬೇಡ್ಕರ್(Ambedkar) ನೀಡಿರುವ ಸಂವಿಧಾನವನ್ನು ಎಂದಿಗೂ ಬದಲಾವಣೆ ಮಾಡಲು ಬಿಡುವುದಿಲ್ಲ ಎಂದರು. ದೆಹಲಿ ವಿಶೇಷ ಪ್ರತಿನಿಧಿ,ಶಿರಾ ತಾಲ್ಲೂಕಿನ ಶಾಸಕರಾದ ಜಯಚಂದ್ರ ಮಾತನಾಡಿ, ತಾಲ್ಲೂಕುಗಳ ಮೂಲಸಮಸ್ಯೆಗಳ ವಿರುದ್ದ ಕೆಲಸ ಮಾಡಿದ್ದು, ಬಿ.ಜೆ.ಪಿ. ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಬಡವರ ಪರ ಕೆಲಸ ಮಾಡುತ್ತಿಲ್ಲಾ ಎಂದು ಕುಟುಕಿದರು. ಮಾಜಿ ಸಚಿವರಾದ ಹೆಚ್. ಆಂಜನೇಯ ಮಾತನಾಡಿದರು. ವೇದಿಕೆಯಲ್ಲಿ ಶಿರಾ ಮಾಜಿ ಶಾಸಕರಾದ ಸಾಲಿಂಗಯ್ಯ, ಪುರಸಭಾ ಮಾಜಿ ಅಧ್ಯಕ್ಷರಾದ ಮಾನಂವೆಂಕಟಸ್ವಾಮಿ, ಗರ‍್ರಪ್ಪ, ಎ.ಶಂಕರೆಡ್ಡಿ, ಅಲ್ಪಸಂಕ್ಯಾತ ಮುಖಂಡ ಮಹಮದ್ ಫಜುಲುಲ್ಲಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೇಶ್ ಬಾಬು, ಗ್ರಾಮಾಂತರ ಅದ್ಯಕ್ಷ ರಾಮಾಂಜಿನಪ್ಪ, ಮಹಿಳಾ ಅದ್ಯಕ್ಷರಾದ ಸುಮಾಅನಿಲ್, ಉಷಾರಾಣಿ, ಅಲ್ಪ ಸಂಖ್ಯಾತ ಅಧ್ಯಕ್ಷರಾದ ಆರ್,ಕೆ. ನಿಸಾರ್ ಅಹಮದ್, ಮಾಜಿ ಜಿ.ಪಂ. ಸದಸ್ಯರಾದ ಪಾಪಣ್ಣ, ಪುರಸಭಾ ಸದಸ್ಯರಾದ ಪಿ.ಎಚ್.ರಾಜೇಶ್,ಕಲ್ಪವೃಕ್ಷ ರವಿ.ಬಾಲಸುಬ್ರಮಣಿ, ಮಗುದಾಳಬೆಟ್ಟನರಸಿಂಹಪ್ಪ, ಕೆ.ಟಿ.ರಂಗೇಗೌಡ,ಮುಖಂಡರಾದ ದಿವಾಕರ್, ಮಂಜುನಾಥ್, ವಕೀಲರಾದ ಭಗವಂತಪ್ಪ, ವೆಂಕಟರಾಮರೆಡ್ಡಿ, ಮತ್ತಿತರರು ಹಾಜರಿದ್ದರು.

ವರದಿ: ಇಮ್ರಾನ್ ಉಲ್ಲಾ ಪಾವಗಡ.

Read more: Pavagada: ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕೋರನ್ನು ನಾನೆಂದಿಗೂ ಸಹಿಸುವುದಿಲ್ಲ ಮಾಜಿ ಸಚಿವ ವೆಂಕಟರಮಣಪ್ಪ
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en


https://www.janataa24.com/nomination-ks-eshwarappa-filed-his-nomination-as/
Document

Leave a Reply

Your email address will not be published. Required fields are marked *