Janataa24 NEWS DESK
Turuvekere: ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆಗೆ ಮುಂದಾದ ತಹಸೀಲ್ದಾರ್ ರೇಣುಕುಮಾರ್.

ತುರುವೇಕೆರೆ: ತಾಲೂಕಿನಲ್ಲಿ ಈಗಾಗಲೇ ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಭಾರಿ ಬಿಗಿ ಭದ್ರತೆಯೊಂದಿಗೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಗೆ ನೀತಿ ಸಮಿತಿ ಜಾರಿ ಆದ ಕ್ಷಣದಿಂದಲೇ ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ,ಸ್ವಾಟಿಕ್ ಸರ್ವೈಲೆನ್ಸ್ ಟೀಮ್ (SST) ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಾಯಿದೆ.

ಇಂದು ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್YM Renukumar) ಅವರು ತಾಲೂಕಿನ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಮಿಂಚಿನ ಸಂಚಾರ ನಡೆಸಿ, ಖುದ್ದು ತಾವೇ ತಪಾಸಣೆಗೆ ನಿಂತು, ಎಸ್ ಎಸ್ ಟಿ ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದಾರೆ, ಇನ್ನು ಇದೇ ವೇಳೆ ತಾಲೂಕು ತಹಸಿಲ್ದಾರ್(Tahsildar) ವೈ ಎಂ ರೇಣು ಕುಮಾರ್ ಅವರು ಮಾಯಸಂದ್ರ ರಸ್ತೆಯಲ್ಲಿರುವ ಚೆಕ್ ಪೋಸ್ಟ್(Check Post) ಒಂದಕ್ಕೆ ದಿಢೀರ್ ಭೇಟಿ ನೀಡಿ. ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳನ್ನು ಜೊತೆಗೆ ಕರ್ನಾಟಕ ಸಾರಿಗೆ ಸಂಸ್ಥೆಯ(KSRTC) ಬಸ್ ಗಳನ್ನು ತಪಾಸಣೆಗೊಳಪಡಿಸಿ ತಾವೇ ಖುದ್ದು ಪ್ರತಿಯೊಂದು ವಾಹನವನ್ನು ಪರಿಶೀಲಿಸಿದ್ದಾರೆ, ಇವರ ಈ ಜವಾಬ್ದಾರಿಯುತ ನಡೆಯಿಂದಾಗಿ ಸಾರ್ವಜನಿಕ ವಲಯದ ಪ್ರಶಂಸೆ ವ್ಯಕ್ತವಾಗಿದೆ.
ವರದಿ: ಮಂಜುನಾಥ್ ತುರುವೇಕೆರೆ
Tumkur: ಶಾಲಾ ಆವರಣದಲ್ಲಿ ಬೆಳೆದು ನಿಂತ ಮರಗಳ ಮಾರಣಹೋಮ ಶಿಕ್ಷಕನ ವಿರುದ್ಧ ಸಾರ್ವಜನಿಕರ ಆಕ್ರೋಶ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
https://www.janataa24.com/turuvekere-two-wheeler-thieves-arrested-police-seized-8-bikes/