Document

Tumkur: ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು–ವೈ.ಎಂ. ರೇಣುಕುಮಾರ್

Janataa24NEWS DESK

Tumkur: ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು–ವೈ.ಎಂ. ರೇಣುಕುಮಾರ್.

Election Officer Turuvekere

ತುರುವೇಕೆರೆ: ಪಟ್ಟಣದಲ್ಲಿರುವ ತಾಲೂಕು ಕಚೇರಿಯಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಮತ್ತು ತಹಶೀಲ್ದಾರ್ ವೈ ಎಂ ರೇಣು ಕುಮಾರ್ ಅವರಿಂದ ಸುದ್ದಿಗೋಷ್ಠಿ ನಡೆಸಲಾಯಿತು.

ಇದೇ ವೇಳೆ ಸಹಾಯಕ ಚುನಾವಣಾ ಅಧಿಕಾರಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದಲೇ ಒಟ್ಟು ಮೂರು ಚೆಕ್ ಪೋಸ್ಟ್ ಗಳನ್ನ ಈಗಾಗಲೇ ನಿರ್ಮಿಸಲಾಗಿದ್ದು, ಎಲ್ಲಾ ಚೆಕ್ ಪೋಸ್ಟ್(Check Post)ಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಸಿಬ್ಬಂದಿಗಳು ಬಾರಿ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೊತೆಗೆ ಈ ತಾಲೂಕಿನಲ್ಲಿ ಒಟ್ಟು 224 ಮತಗಟ್ಟೆಗಳಿದ್ದು, ಇದರಲ್ಲಿ ಗ್ರಾಮಾಂತರ ಭಾಗದಲ್ಲಿ ಒಟ್ಟು 189 ಮತಗಟ್ಟೆ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ 7 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು, ಹಾಗೂ ತುರುವೇಕೆರೆ(Turuvekere) ತಾಲೂಕಿನಲ್ಲಿ ಒಟ್ಟು ಮತದಾರರ ಸಂಖ್ಯೆ,1,83212 ಇದ್ದು, ಈ ಚುನಾವಣೆಗಾಗಿ ತಾಲೂಕಿನಲ್ಲಿ ಒಟ್ಟು 927 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ .

ಅದರಲ್ಲಿ, PRO -210, APRO -252, PO -465, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಈ ಎಲ್ಲಾ ಸಿಬ್ಬಂದಿಗಳಿಗೂ ಇದೇ ತಿಂಗಳು 31 ನೇ ತಾರೀಕು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಚುನಾವಣಾ ತರಬೇತಿಯನ್ನು ನೀಡಲಾಗುವುದು ಎಂದರು.

ಚುನಾವಣೆ ಕುರಿತು ದೂರುಗಳಿಗೆ ಚುನಾವಣಾ ಸಹಾಯವಾಣಿ ದೂರವಾಣಿ ಸಂಖ್ಯೆ-08139-287325 ಸಂಪರ್ಕಿಸಿ

ವರದಿ : ಮಂಜುನಾಥ ತುರುವೇಕೆರೆ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Pavagada : ಪಾವಗಡದಲ್ಲಿ ಮೇವು ನೀರಿಗೆ ಬರವಿದೆ ಹೊರತು ಜೂಜು ಮಟ್ಕಾ ದಂಧೆಗಲ್ಲ.

Document

Leave a Reply

Your email address will not be published. Required fields are marked *