Document

Turuvekere: ರಾಜ್ ಕುಮಾರ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ಶಿಬಿರ.

Janataa24 NEWS DESK



ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ರಾಜಕುಮಾರ್ ಆಸ್ಪತ್ರೆಯಲ್ಲಿ ಇಂದು  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

img 20240314 wa00154413354784611771522



ಇನ್ನು ಆರೋಗ್ಯ ತಪಾಸಣಾ ಶಿಬಿರದಲ್ಲಿ ಇಕೋ, ಇ ಸಿ ಜಿ,ಅಲ್ಟ್ರಾ ಸ್ಕ್ಯಾನಿಂಗ್, ಸ್ತನ ಕ್ಯಾನ್ಸರ್, ರಕ್ತ ಪರೀಕ್ಷೆ, ಮಧುಮೇಹ ಪರೀಕ್ಷೆ, ಇನ್ನು ಅನೇಕ ವಿವಿಧ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಲಿದ್ದು, ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಾಕ್ಟರ್ ರಾಜಕುಮಾರ್ ಬಿ ಎಸ್. ಇವರ ನೇತೃತ್ವದಲ್ಲಿ ನಡೆಯಲಿದ್ದು, ವಿಶೇಷವಾಗಿ  ಪ್ರತಿದಿನ ಈ ಆಸ್ಪತ್ರೆಯಲ್ಲಿ ಪ್ರಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಹರಿಪ್ರಸಾದ್ ಆರ್. ಅವರು ಸಮಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1-೦೦ ಗಂಟೆಯವರೆಗೂ ಲಭ್ಯವಿದ್ದು ತಾಲೂಕಿನ ಜನತೆ ಇದರ ಸದುಪಯೋಗ ಪಡೆದು ಕೊಳ್ಳಬಹುದು, ಇದರ ಜೊತೆಗೆ ಈ ಆಸ್ಪತ್ರೆಯಲ್ಲಿ ಡಾ. ವಿಜಯ ರಾಘವೇಂದ್ರ ಎಚ್ ಎಲ್, ಡಾಕ್ಟರ್ ಕಲ್ಪನಾ ಪೂಜಾರಿ, ಲಭ್ಯವಿರುತ್ತಾರೆ.



ಇನ್ನು ಈ ಆಸ್ಪತ್ರೆಯ ಒಳಾಂಗಣದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಸಾರ್ವಜನಿಕರ ಮನಮುಟ್ಟುವಂತೆ ಕೆಲವು ಸುಭಾಷಿತಗಳ ನಾಮಫಲಕಗಳನ್ನು ಅಳವಡಿಸಿದ್ದು, ಈ ರಾಜ್ ಕುಮಾರ್ ಆಸ್ಪತ್ರೆ ಸಾರ್ವಜನಿಕ ವಲಯದಲ್ಲಿ ಪ್ರಸಂಶೆಗೆ ಕಾರಣವಾಗಿದೆ.

ವರದಿ: ಮಂಜುನಾಥ್ ತುರುವೇಕೆರೆ.

Document

Leave a Reply

Your email address will not be published. Required fields are marked *