Document

Tumkur: ಮಾಯಸಂದ್ರ ಗ್ರಾ.ಪಂ.ಗೆ ನೂತನ  ಅಧ್ಯಕ್ಷರ ಅವಿರೋಧ ಆಯ್ಕೆ.

Janataa24 NEWS DESK

ಮಾಯಸಂದ್ರ ಗ್ರಾ.ಪಂ.ಗೆ ನೂತನ  ಅಧ್ಯಕ್ಷರಾಗಿ ಶ್ರೀ ಮತಿ ಪೂರ್ಣಿಮ ವಾಸು ಅವಿರೋಧ ಆಯ್ಕೆ.

img 20240227 wa00135746051751877722856




ತುರುವೇಕೆರೆ: ತಾಲೂಕಿನ ಮಾಯಸಂದ್ರ(Mayasandhra) ಹೋಬಳಿ ಮಾಯಸಂದ್ರ ಗ್ರಾಮ ಪಂಚಾಯಿತಿ(Panchayathi) ನೂತನ ಅಧ್ಯಕ್ಷರಾಗಿ
ಶ್ರೀಮತಿ”ಪೂರ್ಣಿಮ ವಾಸು” ರವರು ಅವಿರೋಧ(Unanimous)ವಾಗಿ ಆಯ್ಕೆಯಾಗಿದ್ದಾರೆ.



ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜುನಾಥ್ ಎಂಜಿ  ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ(Election) ನಡೆಯಿತು. 15 ಸದಸ್ಯ ಬಲವುಳ್ಳ ಪಂಚಾಯತಿಯಲ್ಲಿ, ಶ್ರೀ ಮತಿ ಪೂರ್ಣಿಮ ವಾಸು ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್(YM Renukumar) ರವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.

img 20240227 wa00148866639089078286236
ಚುನಾವಣಾಧಿಕಾರಿಯಾದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್(YM Renukumar) ರವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.



ಈ ವೇಳೆ ಪತ್ರಕರ್ತರೊಂದಿಗೆ ನೂತನ ಅಧ್ಯಕ್ಷೆ  ಶ್ರೀಮತಿ ಪೂರ್ಣಿಮ ವಾಸು(Poornima Vasu) ರವರು ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವ‌ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

img 20240227 wa00121920800099073096890
Tumkur: ಮಾಯಸಂದ್ರ ಗ್ರಾ.ಪಂ.ಗೆ ನೂತನ  ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ಮತ್ತು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಿಗೂ ಮೂಲಸೌಲಭ್ಯ ಒದಗಿಸುವ ಕಾರ್ಯದಲ್ಲಿ ಪ್ರವೃತ್ತರಾಗಿರುತ್ತೇನೆ. ಹಾಗೂ ನಮ್ಮ  ಪಂಚಾಯಿತಿ ವ್ಯಾಪ್ತಿಯಲ್ಲಿ‌ನ ಅಭಿವೃದ್ಧಿಗಾಗಿ ಒತ್ತು ನೀಡುವುದರ ಮೂಲಕ, ಸಾರ್ವಜನಿಕರ ಸಮಸ್ಯೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.

img 20240227 wa00114894008544024416884



ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು, ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಹಾಗೂ ‌ ಸ್ಥಳೀಯ ಮುಖಂಡರುಗಳು, ಗ್ರಾ.ಪಂ. ಆಡಳಿತ ಮಂಡಳಿ  ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಗ್ರಾ.ಪ್ರಂ. ಸದಸ್ಯರಾದ ಮಂಗಳಗೌರಮ್ಮ ಹೊನ್ನಪ್ಪ. ಮಂಜುನಾಥ್ ಎಂ.ಜಿ. ಶ್ರೀನಿವಾಸ್ (ಕಾಳಿ). ಖಾದೀರ್ ಪಾಷ.ಚಂದ್ರು. ಭಾರತಿ. ವಿಶಾಲಕ್ಷಮ್ಮ.ಹುಸ್ಮಾಭಾನು ತಬ್ರೇಜ್.ಸುಜಾತ ಮತ್ತು ಮುಖಂಡರುಗಳಾದ ಕೆ ಸಿ ಗಂಗಾಧರಯ್ಯ,ಮಾ.ಅ.ಪ್ರಾ.ಕೃ.ಪ.ಸ
ಸಂಘ ಕಣಕೂರು. ಗುಡ್ಡೇನಹಳ್ಳಿ ಬಸವರಾಜು, ಕಣಕೂರು ಚಂದ್ರಶೇಖರ್ ಕಾರ್ಯಧ್ಯಕ್ಷರು, ಕ.ರಾ.ರೈ.ಸಂಘ. ನರಸಿಂಹಮೂರ್ತಿ ಬೈತರಹೊಸಹಳ್ಳಿ. ಯೋಗೇಶ್ ನಂದಿಕಲ್ಕೆರೆ. ಮಂಜುನಾಥ್ ತೂಬಿನಕಟ್ಟೆ. ಎಂ.ಎನ್ ಸುಬ್ರಮಣ್ಯ ಮಾ.ಸದಸ್ಯರು.

ಹುಚ್ಚಪ್ಪ ದೊಡ್ಡಶೆಟ್ಟಿಕೆರೆ. ಶಿವಕುಮಾರ್ ಡಿ.ಬಿ ಹಟ್ಟಿ. ಗಿರಿಧರ್ ಅಪ್ಪು. ನಂಜಪ್ಪ ಮಲ್ಲೇನಹಳ್ಳಿ. ವಸಂತ್ ಕುಮಾರ. ಮಹೇಶ್. ಗಂಗಾಧರ್ ಮಾ. ಗುಡಿಗೌಡ. ನಿರ್ಮಲ್ ಕುಮಾರ್. ಸತೀಶ್. ಸೇರಿದಂತೆ ಕಾರ್ಯದರ್ಶಿ ಸುರೇಶ್ ಹೆಚ್.ಬಿ. ಗ್ರಾಪಂ ಆಡಳಿತ ಮಂಡಳಿ, ಚುನಾವಣೆ ಶಾಖೆ ಕಾಂತರಾಜು, ಸ್ಥಳೀಯ ಗ್ರಾಮಸ್ಥರು, ಜನಪ್ರತಿನಿಧಿಗಳು, ಮುಂತಾದವರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ.

https://www.janataa24.com/prime-minister-modi-tweeted-wishing-shami-in-the-hospital-mohammed-shami/

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *