Janataa24 NEWS DESK
ಶಾಸಕರ ಗೆಲುವಿಗಾಗಿ ಹರಕೆ ಒತ್ತ, ಸಿಎಸ್ ಪುರ ಜೆಡಿಎಸ್ ಕಾರ್ಯಕರ್ತರು.
ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂ ನಿಂದ ಧರ್ಮಸ್ಥಳದವರೆಗೆ ಕಾಲ್ನಡಿಗೆ.

ಶಾಸಕ ಎಂಟಿ ಕೃಷ್ಣಪ್ಪ ಅವರಿಂದ ಪಾದಯಾತ್ರೆಗಳಿಗೆ ಶುಭ ಹಾರೈಕೆ.
ತುರುವೇಕೆರೆ: ಕಳೆದ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಈಗಿನ ಜೆಡಿಎಸ್ ಶಾಸಕರಾದ ಎಂ ಟಿ ಕೃಷ್ಣಪ್ಪನವರ ಗೆಲುವಿಗಾಗಿ. ಸಿಎಸ್ ಪುರ ಹೋಬಳಿಯ ಜೆಡಿಎಸ್ ಕಾರ್ಯಕರ್ತರು ಇವರ ಗೆಲುವಿಗಾಗಿ ಹರಕೆ ಹೊತ್ತ ಹಿನ್ನೆಲೆಯಲ್ಲಿ,
25ನೇ ಭಾನುವಾರದಂದು ಬೆಂಗಳೂರಿನ ಗವಿಪುರಂನಿಂದ ಧರ್ಮಸ್ಥಳಕ್ಕೆ ಸುಮಾರು 60 ಜನ ಪಾದಯಾತ್ರಿಗಳು ಸುಮಾರು 305 ಕಿ.ಮೀ ಗಳಷ್ಟು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿ, ಪ್ರತಿದಿನಕ್ಕೆ 40 ಕಿ.ಮೀ ಪಾದಯಾತ್ರೆ ಬೆಳೆಸಲಿದ್ದು, ಮುಂದಿನ ಮಾರ್ಚ್ 5ನೇ ತಾರೀಕು ಧರ್ಮಸ್ಥಳ ಕ್ಷೇತ್ರ ತಲುಪಲಿದ್ದಾರೆ.
ಇನ್ನು ಪಾದಯಾತ್ರಿಗಳು ತಂಗುವ ಸ್ಥಳದಲ್ಲಿ ದಾನಿಗಳು ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ.

ಇದೆ ವೇಳೆ ಜೆಡಿಎಸ್ ಮುಖಂಡರಾದ ಚೆನ್ನೇನಹಳ್ಳಿ ನರಸಿಂಹಮೂರ್ತಿ , ಎಂ ಎಲ್ ಜಗದೀಶ್ ಸಿ ಎಸ್ ಪುರ ಹೋಬಳಿ ಜೆ ಡಿ ಎಸ್ ಅಧ್ಯಕ್ಷರು, ವೆಂಕಟಪುರ ಯೋಗೀಶ್ ,ವೀರಣ್ಣ ಗುಡಿ ರಾಮು, ತಮ್ಮಯ್ಯ, ಶಶಿ, ಸ್ವಾಮಿ, ಕುಮಾರ್, ಅನೇಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ