Janataa24 NEWS DESK
Chitradurga: ದಾಖಲೆಯಿಲ್ಲದೆ ಸಂಗ್ರಹಿಸಿದ್ದ 5.25 ಕೆಜಿ ಚಿನ್ನಾಭರಣ ಪೋಲಿಸರ ವಶಕ್ಕೆ

ಚಿತ್ರದುರ್ಗ: ಹಿರಿಯೂರು ಪಟ್ಟಣದಲ್ಲಿ ಇಂದು ದಾಖಲೆಯಿಲ್ಲದೆ ಸಂಗ್ರಹಿಸಿದ್ದ 5.25kg ಚಿನ್ನಾಭರಣವನ್ನು ಪೋಲಿಸರು ವಶಕ್ಕೆ ಪಡೆದಿರುತ್ತಾರೆ.
ದಾಖಲೆಯಿಲ್ಲದೆ ಸಂಗ್ರಹಿಸಿದ್ದ ಚಿನ್ನಾಭರಣವು ಸುಮಾರು 3.55 ಕೋಟಿ ರೂಪಾಯಿಗಳು ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿರುತ್ತದೆ.
ಇದು ದಾವಣಗೆರೆಯ ವರ್ಧಮಾನ ಜ್ಯುವೆಲರಿಗೆ ಸೇರಿದ ಚಿನ್ನಾಭರಣ ಎಂದು ತಿಳಿದುಬಂದಿದೆ. ದಾಖಲೆ ಇಲ್ಲದೆ ಚಿನ್ನ(Gold) ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಾಜೇಶ್ ಹಾಗೂ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.janataa24.com/ballari-everyone-pays-money-in-election-only-give-us/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv