ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಜೇಯ ಓಟ ಮುಂದುವರಿದಿದೆ, ವೇಲ್ಸ್ (Wales) ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 4-2 ಅಂತರದ ಗೋಲುಗಳಿಂದ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಡಿ ಗುಂಪಿನ 2ನೇ ಸ್ಥಾನ ಅಲಂಕರಿಸಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ನ್ಯೂಜಿಲೆಂಡ್ ವಿರುದ್ಧ ಕ್ರಾಸ್‌ಓವರ್ ಪಂದ್ಯ ಆಡಬೇಕಿದೆ. ವೇಲ್ಸ್ ವಿರುದ್ಧದ ಪಂದ್ಯ ಮುಂದಿನ ಹಂತಕ್ಕೇರಲು ಭಾರತಕ್ಕೆ ಮಹತ್ವದ ಪಂದ್ಯವಾಗಿತ್ತು.
ಈ ಪಂದ್ಯದಲ್ಲಿ ಭಾರತ ಜಯಗಳಿಸಿದೆ.ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಕಾಶ್‌ದೀಪ್ ಸಿಂಗ್ ಎರಡು ಗೋಲ್ ಸಿಡಿಸಿ ಭಾರತದ ಸ್ಟಾರ್ ಎನಿಸಿದರು.
ಇನ್ನುಳಿದ ಎರಡು ಗೋಲ್ ಶಂಶೇರ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಸಿಡಿಸಿದರು. ವೇಲ್ಸ್ ಪರ ಗರೆಥ್ ಫರ್ಲಾಂಗ್ ಮತ್ತು ಜೇಕಬ್ ಡೇಪರ್ ತಲಾ ಒಂದೊಂದು ಗೋಲ್ ಬಾರಿಸಿ ಹೋರಾಟದ ಅಂತಿಮವಾಗಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಭಾರತ ಗೆಲುವು ದಾಖಲಿಸಿತು.
ಮೊದಲ ಕ್ವಾರ್ಟ‌್ರನಲ್ಲಿ 2 ಸಾಧಿಸಿದವು. 2ನೇ ಕ್ವಾರ್ಟ‌್ರನ 21ನೇ ನಿಮಿಷದಲ್ಲಿ ಶಂಶೇರ್ ಸಿಂಗ್ ಭಾರತಕ್ಕೆ ಮೊದಲ ಗೋಲ್ ಬಾರಿಸಿ ಮುನ್ನಡೆ ತಂದುಕೊಟ್ಟರು. ಆ ಬಳಿಕ ಮೂರನೇ ಕ್ವಾರ್ಟ‌್ರನ 32ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ 2ನೇ ಗೋಲ್ ಸಿಡಿಸಿ 2-0 ಮುನ್ನಡೆ ತಂದುಕೊಟ್ಟರು. ಆ ಬಳಿಕ ವೇಲ್ಸ್ ಪರ ಗರೆಥ್ ಫರ್ಲಾಂಗ್ 42ನೇ ನಿಮಿಷದಲ್ಲಿ ಮತ್ತು ಜೇಕಬ್ ಡೇಪರ್ 44ನೇ ನಿಮಿಷದಲ್ಲಿ ಬ್ಯಾಕ್ ಟು ಬ್ಯಾಕ್ ಗೋಲ್ ಬಾರಿಸಿ ಸಮಬಲ ಸಾಧಿಸಲು ನೆರವಾದರು.ನಂತರ ಮತ್ತೆ ಭಾರತದ ಪರ ಆಕಾಶ್‌ದೀಪ್ ಸಿಂಗ್ 45ನೇ ನಿಮಿಷದಲ್ಲಿ ಗೋಲ್ ಬಾರಿಸಿ ಮತ್ತೆ 3-2 ಮುನ್ನಡೆ ತಂದುಕೊಟ್ಟರು. ನಂತರ ಕೊನೆಯ ಹಂತದಲ್ಲಿ 59ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ 4-2 ಮುನ್ನಡೆಯೊಂದಿಗೆ ಗೆಲುವು ದಾಖಲಿಸಿತು.