ಸೋಲಿಲ್ಲದ ಸರದಾರ ಎಸ್ ಆರ್ ಶ್ರೀನಿವಾಸ್ ಗೆ ಸಚಿವ ಸ್ಥಾನ ಸಿಗಲಿ

Janataa24 NEWS DESK

ಗುಬ್ಬಿ : ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್ಆರ್ ಶ್ರೀನಿವಾಸ್ ಸೋಲಿಲ್ಲದ ಸರದಾರ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ದಲಿತ ಮುಖಂಡ ಅದಲಗೆರೆ ಈಶ್ವರಯ್ಯ ಶುಭ ಹಾರೈಸಿದರು.



ಕಳೆದ 20 ವರ್ಷಗಳಿಂದ ಅಭಿವೃದ್ಧಿಪರ ಕಾರ್ಯವೈಕರಿ, ಸರಳತೆ, ದೀನ ದಲಿತರ ಕಣ್ಮಣಿಯಾಗಿ ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ. ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಸಹ ಕಾರ್ಯಕರ್ತರು ಹಾಗೂ ದಲಿತ ಸಂಘರ್ಷ ಸಮಿತಿ ವಾಸಣ್ಣನವರ ಪರ ನಿಂತು ಗೆಲುವಿಗೆ ಶ್ರಮಿಸಿದ್ದಾರೆ. ಪ್ರಜ್ಞಾವಂತ ಮತದಾರರ ಆಯ್ಕೆಗೆ ಅಭಿನಂದನೆ ಸಲ್ಲಿಸುತ್ತೇನೆ ಶಾಸಕರಾಗಿ ಸಚಿವರಾಗಿ ಅನುಭವಿ ರಾಜಕಾರಣಿಯಾಗಿದ್ದಾರೆ ಈ ಬಾರಿ ಸಚಿವ ಸ್ಥಾನ ಸಿಗಬೇಕೆಂಬುದು ತಾಲೂಕಿನ ಜನತೆಯ ಮಹಾದಾಸೆಯಾಗಿದೆ ಎಂದು ತಿಳಿಸಿದರು.

ಮುಖಂಡ ನಾಗರಾಜ್ ಮಾತನಾಡಿ ವಾಸಣ್ಣನವರು ಐದನೇ ಬಾರಿ ಗೆಲುವು ಸಾಧಿಸಿರುವುದು ಪ್ರತಿ ಗ್ರಾಮದಲ್ಲಿಯೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕೆಂಬುದು ಪ್ರತಿ ಕಾರ್ಯಕರ್ತರ ಗುರಿಯಾಗಿತ್ತು ಅದಕ್ಕೆ ಪ್ರತಿಫಲ ಸಿಕ್ಕಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಲಭಿಸಲಿ ಎಂದು ಸಂತೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಮೂರ್ತಿ, ಮಂಜುನಾಥ್, ಎ ಜೆ ಸೋಮಶೇಖರ್, ರಾಜು ಬಿ ಎಸ್,ಕುಮಾರಯ್ಯ, ಸುರೇಶ್, ರಘು, ಶೇಖರ್, ರಾಮಯ್ಯ, ಶಂಕರಯ್ಯ, ನರಸಿಂಹಮೂರ್ತಿ, ಎ ಜಿ ರಾಮು ಮುಂತಾದವರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Leave a Reply

Your email address will not be published. Required fields are marked *