ಗುಬ್ಬಿ: ದೇವರಾಜು

ಗುಬ್ಬಿ: ದೇಗುಲದ ಬೀಗ ಮುರಿಯುವ ಮುನ್ನ ಕೊಳಿಯೊಂದು ಬಲಿ ಕೊಟ್ಟು ನಂತರ ಸಿಸಿ ಕ್ಯಾಮರಾಗೆ ಕ್ರೀಮ್ ಸ್ಪ್ರೇ ಮಾಡಿ ಮರೆ ಮಾಚಿ ಬೀಗ ಮುರಿದು ಒಳಹೊಕ್ಕು ಹುಂಡಿ ಒಡೆಯುವ ಯತ್ನ ತಾಲ್ಲೂಕಿನ ಜಿ.ಹೊಸಹಳ್ಳಿ ಕ್ರಾಸ್ ಬಳಿಯ ಆಲದಕೊಂಬೆಯಮ್ಮ ದೇವಾಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಈ ರೀತಿ ಎರಡನೇ ಬಾರಿ ನಡೆದಿದ್ದು, ಕಳ್ಳತನ ವಿಫಲ ಯತ್ನ ಹಿಂದೆ ನಡೆದಿತ್ತು. ಶನಿವಾರ ಹುಂಡಿ ಒಡೆದು ಒಂದೂವರೆ ಲಕ್ಷ ಹಣ ಎಣಿಕೆ ಮಾಡಿದ್ದ ಸಮಿತಿ ಪ್ರಕಾರ ಕಳ್ಳರಿಗೆ ಹಣ ಸಿಕ್ಕಿಲ್ಲ.ತೂಕದ ಖಾಲಿ ಹುಂಡಿ ಕೂಡಾ ಅಲ್ಲಾಡಿಸಿ ನೋಡಿದ್ದಾರೆ. ಸುತ್ತಲ 33 ಗ್ರಾಮಗಳ ಆರಾಧ್ಯ ದೈವ ಈ ದೇವಿಯ ದೇವಾಲಯಕ್ಕೆ ಭದ್ರತೆ ಅಗತ್ಯವಿದೆ ಎಂದು ಸಮಿತಿ ಮನವಿ ಮಾಡಿದೆ.
ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಿಫಲ ಕಳ್ಳತನ ಮಾಡಿದ ಖದೀಮರು ದೇವಾಲಯ ಸಮೀಪದ ಒಂದು ಅಂಗಡಿಯ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಹಾಗೂ ಚಿಲ್ಲರೆ ಹಣ ಕದ್ದಿದ್ದಾರೆ.
ದೇವಾಲಯ ಕಳ್ಳತನಕ್ಕೆ ಮುನ್ನ ಕೋಳಿ ಬಲಿ ನೀಡಿದ್ದು ಕಳ್ಳರ ಭಯ ಭಕ್ತಿ ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವಾಲಯಕ್ಕೆ ಪೊಲೀಸರ ರಾತ್ರಿ ಗಸ್ತು ಅತ್ಯವಶ್ಯ ನಡೆಯಬೇಕಿದೆ ಎಂದು ಆಗ್ರಹಿಸಿದ್ದಾರೆ.