ಸಚಿವ ಸ್ಥಾನಕ್ಕೆ ಪೈಪೋಟಿ: ದೆಹಲಿಗೆ ಹೊರಟ 30 ಶಾಸಕರು

Janataa24 NEWS DESK

1200 675 18542551 thumbnail 16x9 megg

ದೇವನಹಳ್ಳಿ: ನಾಳೆ ಕಾಂಗ್ರೆಸ್ ನ ನೂತನ ಸರ್ಕಾರ ರಚನೆಯಾಗಲಿದೆ.

ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನೂ ಹಲವು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಚಿವ ಸ್ಥಾನಗಳನ್ನು ಅಂತಿಮಗೊಳಿಸಲು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿಶೇಷ ವಿಮಾನದಲ್ಲಿಂದು ದೆಹಲಿಗೆ ಪ್ರಯಾಣಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿವಾಕಾಂಕ್ಷಿಗಳ ದಂಡು ಕಾಣಿಸಿಕೊಂಡಿದ್ದು, ಬೆಳಗ್ಗೆಯಿಂದ ಸುಮಾರು 30 ಶಾಸಕರು ದೆಹಲಿಗೆ ತೆರಳಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆನೇಕಲ್ ಕಾಂಗ್ರೆಸ್ ಶಾಸಕ ಶಿವಣ್ಣ, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಶಾಸಕರಾದ ಕೆ ಹೆಚ್ ಮುನಿಯಪ್ಪ, ಶಿವರಾಜ್ ತಂಗಡಗಿ, ಸಿ ಎಸ್ ನಾಡಗೌಡ, ಅಶೋಕ್ ರೈ, ಕೆ ಎನ್ ರಾಜಣ್ಣ, ಕೆ ಆರ್ ರಾಜೇಂದ್ರ, ಎಂಎಲ್ಸಿ ಅರವಿಂದ ಅರಳಿ, ಕೃಷ್ಣ ಬೈರೇಗೌಡ, ಎನ್ ಎ ಹ್ಯಾರೀಸ್, ಶ್ರೀನಿವಾಸ್ ಮಾನೆ, ರಿಜ್ಚಾನ್ ಹರ್ಷದ್, ಈಶ್ವರ್ ಖಂಡ್ರೆ, ರಹಿಂ ಖಾನ್, ಕೆ ಸಿ‌ ವಿರೇಂದ್ರ, ಗೋವಿಂದಪ್ಪ, ಡಿ. ಸುಧಾಕರ್, ರಘುಮೂರ್ತಿ ಟಿ, ಅಜಯ್ ಸಿಂಗ್, ಯಶ್ವಂತ್ ರಾಜ್ ಗೌಡ ಪಾಟೀಲ್, ಎಂ ಸಿ ಸುಧಾಕರ್, ಪ್ರದೀಪ್ ಈಶ್ವರ್, ಬೆಲೂರು ಗೋಪಾಲಕೃಷ್ಣ, ನಾಗೇಂದ್ರ, ಕಾಶಪ್ಪನವರ್, ಆರ್‌ ವಿ ದೇಶಪಾಂಡೆ, ಆರ್ ಬಿ ತಿಮ್ಮಾಪುರ, ಎಂ. ಬಿ. ಪಾಟೀಲ್, ಶರತ್ ಬಚ್ಚೇಗೌಡ, ಪ್ರಿಯಾಂಕ್ ಖರ್ಗೆ, ಶರಣು ಪ್ರಕಾಶ್ ಪಾಟೀಲ್ ದೆಹಲಿಗೆ ದೌಡಾಯಿಸಿದ್ದಾರೆ

Leave a Reply

Your email address will not be published. Required fields are marked *