ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಕುಂದು ಕೊರತೆಗಳ ಸಭೆ

ಪಾವಗಡ:- ಇಮ್ರಾನ್ ಉಲ್ಲಾ

ಸಾರ್ವಜನಿಕರ ಕೆಲಸ ಮಾಡುವಾಗ ನಾವು ಸರ್ಕಾರಿ ಅಧಿಕಾರಿಗಳೆಂಬುದಾಗಿ ತಿಳಿದು ಕೆಲಸ ಮಾಡಿ ಲೋಕಾಯುಕ್ತ ಜಿಲ್ಲಾ ಎಸ್ ಪಿ ವಾಲಿ ಭಾಷಾ ಅಧಿಕಾರಿಗಳಿಗೆ ತಿಳಿಸಿದರು.
ಪಾವಗಡ ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಬುಧುವಾರ ಹಮ್ಮಿಕೊಳ್ಳಲಾಗಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಕುಂದು ಕೊರತೆಗಳ ಸಭೆಯಲ್ಲಿ ಉದ್ದೇಶಿಸಿ. ಜಿಲ್ಲಾ ಲೋಕಯುಕ್ತ ಎಸ್.ಪಿ.ವಲಿಬಾಷ ಮಾತನಾಡಿದ ಅವರು ಸಾರ್ವಜನಿಕರಿಗೆ ಪದೇಪದೇ ಅಲ್ಲದಾಡಿಸುವ ಕೆಲಸ ಮಾಡಬಾರದು ನಿಮ್ಮ ಕೈಯಲ್ಲಿ ಆಗುವ ಕೆಲಸ ಇದ್ದರೆ ವಿಚಾರಿಸಿ ಕೆಲಸ ಮಾಡಿಕೊಡಿ ಇಲ್ಲವಾದರೆ ಎಂಡೋಸ್ಮೆಂಟ್ ಕೊಟ್ಟು ಅವರಿಗೆ ಕಳಿಸಿಕೊಡಿ.ಲೋಕಾಯುಕ್ತ ಇಲಾಖೆಗೆ ಬಹಳಷ್ಟು ದೂರುಗಳು ಬರುತ್ತಿರುವುದೆಂದರೆ ಅದರಲ್ಲಿ ಹೆಚ್ಚಾಗಿ ಸರ್ವೇ ಇಲಾಖೆ. ಕಂದಾಯ ಇಲಾಖೆ. ಹಾಗು ಪಿಡಿಒ ಅಧಿಕಾರಿಗಳ ಮೇಲೆ ಹೆಚ್ಚಾಗಿ ದೂರುಗಳು ಬರುತ್ತಿದ್ದೇವೆ ತಕ್ಷಣ ಬದಲಾವಣೆ ಮಾಡಿಕೊಳ್ಳಿ ನಿಮ್ಮ ಇಲಾಖೆಗಳಲ್ಲಿ ದೂರುಗಳು ಬರದಂತೆ ನೋಡಿಕೊಳ್ಳುವುದು ಉತ್ತಮ ಇಲ್ಲವಾದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

IMG 20230222 WA0037



ಮನೆಯ ವಿಚಾರವಾಗಿ ಮಹಿಳೆಯ ರೋದನೆ ಮೂಲಕ ದೂರು :ತಾಲೂಕಿನ ಮಂಗಳವಾಡ ಗ್ರಾಮದ ಮಹಿಳೆಗೆ ಸೇರಿದ ಜಾಗದಲ್ಲಿ ಬೇರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ ಇದರ ಬಗ್ಗೆ ಹಲವು ಬಾರಿ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನಾಗುತ್ತಿಲ್ಲ ನನ್ನ ಗಂಡನ ಆರೋಗ್ಯ ಸರಿಯಿಲ್ಲ. ಇರುವ ಸ್ವಲ್ಪ ಜಾಗವು ಸಹ ಒತ್ತುವರಿ ಮಾಡಿಕೊಂಡಿದ್ದಾರೆ ಈಗಾಗಲೇ ನನ್ನ ಬಳಿ ಇದ್ದಂತ ತಾಳಿ ಬಟ್ಟನ್ನು ಅಡ ಇಟ್ಟು ಆ ಹಣದಲ್ಲಿ ನ್ಯಾಯಾಲಯದ ಸುತ್ತು ಓಡಾಡುವ ಪರಿಸ್ಥಿತಿ ಉಂಟಾಗಿದೆ ನನಗೆ ನ್ಯಾಯ ಕೊಡಿಸುವವರು ಯಾರು ಇಲ್ಲವೆ ಎಂಬುದಾಗಿ ಅಳುತ್ತಾ ತಮ್ಮ ರೋದನೆ ವ್ಯಕ್ತಪಡಿಸಿದಳು ಅದಕ್ಕೆ ತಕ್ಷಣ ಲೋಕಾಯುಕ್ತ ಎಸ್ಪಿ ವಲಿ ಭಾಷಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗುತ್ತೇನೆ ಎಂದರು.




ಪಾವಗಡ ಪುರಸಭೆ ಇಲಾಖೆಗೆ ಮೂರು ದೂರುಗಳು ಬಂದಿದ್ದು ಅದರಲ್ಲಿ
ಪುರಸಭೆ ಇಲಾಖೆಗೆ ಬಿ.ಎಮ್ ನಾಗರಾಜ ಎಂಬವರು ನೀಡಿದ ದೂರಿನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಸಿಲ್ಕ್ ಇಂಡಿಯಾ ಅಡಿಯಲ್ಲಿ ಆದಂತಹ ಉಚಿತ ಹೊಲಿಗೆ ಯಂತ್ರ ಹಾಗೂ ಮಿಷನ್ ಕೊಡುವಲ್ಲಿ ಬಹಳಷ್ಟು ನಡೆದಿದೆ ಎಂಬುದಾಗಿ ಹೇಳಿ ದೂರು ಸಲ್ಲಿಸಿದ್ದಾರೆ. 11-10-2021 ರಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ನೀಡಿರುವಂತ ಸಿಲ್ಕ್ ಇಂಡಿಯಾ ಎಂಬ ಯೋಜನೆ ಅಡಿಯಲ್ಲಿ 150 ಜನ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಅವರಿಗೆ ಉಚಿತವಾಗಿ ಟೈಲರಿಂಗ್ ಕಲಿಸಿದ ಪ್ರಮಾಣ ಪತ್ರವು ಸಹ ಕಳೆದ ಎರಡು ವರ್ಷ ಅದರು ನೀಡಿರುವುದಿಲ್ಲ ಇದರ ಬಗ್ಗೆ ತನಿಖೆ ಮಾಡಿ ಎಂದಯ ದೂರು ಸಲ್ಲಿಸಿದ್ದಾರೆ. ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಸಮಸ್ಯೆ ಅಧ್ಯಕ್ಷ ನೀಡಿದ ದೂರಿನಲ್ಲಿ ಪಾವಗಡ ಪಟ್ಟಣದಲ್ಲಿ ಈಗಾಗಲೇ ಹಾದು ಹೋಗಿರುವ ರಾಜಕಾಲವೇ ಡೋಳ್ಳಾರ ಹಳ್ಳ ಕೆಲವರಿಂದ ಒತ್ತುವರಿ ಮಾಡಲಾಗಿದೆ.
ಇದರ ಬಗ್ಗೆ ಸೂಕ್ತ ತನಿಕೆ ಮಾಡಿ ರಾಜ ಕಾಲುವೆ ಎಷ್ಟು ಅಗಲ ಎಷ್ಟು ಉದ್ದ ಇದೆ ಎಂಬುದರ ಬಗ್ಗೆ ತನಿಖೆ ಮಾಡಿ ಒತ್ತುವರಿ ಮಾಡಿಕೊಂಡಿರುವ ವಿರುದ್ಧ ಕ್ರಮ ಕೈಗೊಂಡು ಅದಕ್ಕೆ ಅಡ್ಡಲಾಗಿ ಬೇಲಿ ಹಾಕುವ ಬಗ್ಗೆ ದೂರು ಸಲ್ಲಿಸಿದ್ದಾರೆ.



ಪುರಸಭೆ ವ್ಯಾಪ್ತಿಗೆ ಬರುವ ಆಶ್ರಯ ಮನೆಗಳು ಖಾತೆ ಮಾಡಲು ಹಿಂದೆಟು ಹಾಕುತ್ತಿರುವ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ದೂರು ಸಲ್ಲಿಸಲಾಗಿದೆ. ವೆಂಕಟಾಪುರ ಪಂಚಾಯತ್ ವ್ಯಾಪ್ತಿಗೆ ಬರುವ ಕಂಪ್ಯೂಟರ್ ಆಪರೇಟರ್ ಭ್ರಷ್ಟಾಚಾರ ಎಸಿಗಿದ್ದಾರೆ ಎಂಬುದಾಗಿ ಈಗಾಗಲೇ ಲೋಕಾಯುಕ್ತ ಹಾಗೂ ಇಲಾಖೆಯವರು ತನಿಖೆ ನಡೆಯುತ್ತಿದೆ ಹಿನ್ನೆಲೆಯಲ್ಲಿ ಅವರಿಗೆ ಬೇರೆ ಕಡೆಗೆ ಕೆಲಸ ಮಾಡಲು ಸೂಚಿಸಲಾಗಿದೆ ಯಾವ ಮಾನದಂಡಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ ಎಂಬುದಾಗಿ ಲೋಕಯುಕ್ತ ಅಧಿಕಾರಿಗಳಿಗೆ ದೂರದಾರ ಶ್ರೀನಿವಾಸ್ ತಿಳಿಸಿದರು. ಮಂಗಳವಾಡ ಪಂಚಾಯಿತಿ ಹಾಗೂ ಅರಸಿಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಂದಂತಹ ದೂರಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಎಂದು ಲೋಕಾಯುಕ್ತ ಎಸ್.ಪಿ.ತಾಲೂಕು ಪಂಚಾಯತಿ ಇಓ ಶಿವರಾಜಯ್ಯ ಅವರಿಗೆ ಸೂಚಿಸಿದರು.



ತಾಲೂಕಿನ ಗೋಡೆಟಿ ಗ್ರಾಮದ ಲಕ್ಷ್ಮಮ್ಮ ಎಂಬವರು ತಮ್ಮ ನಿವೇಶನದ ಸರ್ವೆ ನಂ 188/226 ರ ಪಾವತಿ ಖಾತೆ ಬಗ್ಗೆ ನಾಲ್ಕು ವರ್ಷಗಳಿಂದ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೆಲಸ ಮಾಡಿಕೊಟ್ಟಿಲ್ಲ ಎಂದು ದೂರು ಸಲ್ಲಿಸಿದ್ದ ಮಹಿಳೆ.
ಕಳೆದ ವಾರದಿಂದ ಲೋಕಾಯುಕ್ತ ಕುಂದು ಕೊರತೆಗಳ ಸಭೆ ಇದೆ ಎಂಬುದಾಗಿ ಪ್ರಚಾರ ಇದ್ದರು ಈ ದಿನ ಮೂಲ ಅಧಿಕಾರಿಗಳು ಬಾರದೆ ಮಾಹಿತಿ ತಿಳಿದೇ ಇರುವಂತಹ ಅಧಿಕಾರಿಗಳು ಸಭೆಗೆ ಬಂದಿದ್ದು ವಿಷಯವಾಗಿತ್ತು. ಲೋಕಾಯುಕ್ತ ಅಧಿಕಾರಿಗಳಿಗೆ ಸುಮಾರು 15 ಅರ್ಜಿಗಳು ಬಂದಿದ್ದು ಅವುಗಳಲ್ಲಿ ಪುರಸಭೆ ಮೂರು.ತಾಲೂಕು ಕಚೇರಿ ನಾಲ್ಕು. ಬೆಸ್ಕಾಂ ಒಂದು. ಪೊಲೀಸ್ ಇಲಾಖೆ ಒಂದು. ತಾಲೂಕು ಪಂಚಾಯಿತಿ ಆರು ಅರ್ಜಿಗಳು ದೂರಿನ ಮೂಲಕ ಬಂದಿದ್ದವು.



ಈ ವೇಳೆ ಲೋಕಯುಕ್ತ ಡಿವೈಎಸ್ಪಿ.ಮಂಜುನಾಥ್ . ತಹಸಿಲ್ದಾರ್ ಸುಜಾತ. ಪಿಎಸ್ಐ ಸತ್ಯನಾರಾಯಣ. ತಾಲೂಕ ಪಂಚಾಯತಿ ಇಓ ಶಿವರಾಜಯ್ಯ. ಪೇದೆ ಶಿವರಾಮಪ್ಪ. ಜಿಲ್ಲಾ ಪಂಚಾಯತ್ ಇಲಾಖೆಯ ಸುರೇಶ ಹನುಮಂತ ರಾಯಪ್ಪ ಪಿ ಡಬ್ಲ್ಯೂ ಡಿ ಇಲಾಖೆಯ ಇಂಜಿನಿಯರ್ ಅನಿಲ್.ಪಶುವೈದ್ಯ ಇಲಾಖೆಯ ಅಧಿಕಾರಿ ಸಿದ್ದಗಂಗಯ್ಯ. ಅಬಕಾರಿ ಇಲಾಖೆಯ ಶಂಕರ್ ಬಿಸಿಎಂ ಇಲಾಖೆ ಅಧಿಕಾರಿ ವೇದಮೂರ್ತಿ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *