ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ತಾಲೂಕಿನ ರೋಪ್ಪ ಗ್ರಾಮದ ಜನರ ಹಲವು ವರ್ಷಗಳ ಬೇಡಿಕೆ ಯಂತೆ ಸ್ಮಶಾನ ಇಲ್ಲ ಎಂಬುದಾಗಿ ಹಲವು ಬಾರಿ ಪ್ರತಿಭಟನೆಗಳು ಮಾಡಿಕೊಂಡು ಬರುತ್ತಿದ್ದ ಸಮಸ್ಯೆಗೆ ಕೇವಲ ತಿಂಗಳಲ್ಲೇ ಎರಡು ಎಕರೆ ಜಮೀನು ಹಾಗು ಅಲ್ಲಿ ಒಂದು ಬೋರ್ವೆಲ್ ಕೊರಸಿ ಕೊಟ್ಟ ಮಾತಿನಂತೆ ಮಾತು ಉಳಿಸಿಕೊಂಡ ಸ್ಥಳೀಯ ಶಾಸಕ ಹಾಗೂ ಈ ಭಾರಿಯ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್.
ಪಟ್ಟಣದ ಹತ್ತಿರದಲ್ಲಿ ಇರುವಂತಹ ಗ್ರಾಮ ರೋಪ್ಪ ಪಂಚಾಯತಿಯಲ್ಲಿ ಸುಮಾರು 2552 ಸಾವಿರ ಜನ ಸಂಖ್ಯೆ ವುಳ್ಳ ಗ್ರಾಮ ಇದಾಗಿದೆ. ಇಲ್ಲಿ ಬಹು ವರ್ಷದ ಬೇಡಿಕೆ ವುಳ್ಳ ಸ್ಮಶಾನದ ಜಾಗದ ಸಮಸ್ಯೆ ಕೇವಲ ಒಂದು ತಿಂಗಳಲ್ಲಿ ಸಮಸ್ಯೆ ಬಗ್ಗೆ ಹರಿಸಿ ಜನರ ಮೇಚುಗೆಗೆ ಪಾತ್ರರಾಗಿದ್ದಾರೆ.
ಈ ರೋಪ್ಪ ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರು ಇಲ್ಲಿ ವಾಸಿಸುತ್ತಿದ್ದರೆ ಅದರಲ್ಲಿ ಮುಸ್ಲಿಂ ಸಮುದಾಯ ಕ್ಕೂ ಸಹ ಸ್ಮಶಾನದ ವ್ಯವಸ್ಥೆ ಇಲ್ಲಾ ಎಂಬುದಾಗಿ ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರಿಗೂ ವ್ಯವಸ್ಥೆ ಕಲ್ಪಸುವುದಾಗಿ ಶಾಸಕರು ಈ ಹಿಂದೆ ಮಾತು ಕೊಟ್ಟಿದ್ದಾರೆ ಎಂಬುದಾಗಿಯೂ ಸ್ಥಳೀಯ ಮುಸ್ಲಿಂ ಸಮುದಾಯದವರು ತಿಳಿದಿದ್ದಾರೆ.