Janataa24 NEWS DESK

ತುರುವೇಕೆರೆ: ತಾಲೂಕಿನ ಮಹದೇಶ್ವರ ಬೆಟ್ಟದ ಜೋಡುಗಟ್ಟೆಯಲ್ಲಿ, ಪ್ರತಿ ಭಾನುವಾರ ರಾಸುಗಳ ಸಂತೆ ನಡೆಯುತ್ತದೆ,
ನೆನ್ನೆ ಭಾನುವಾರದಂದು ರಾಸುಗಳ ಸಂತೆಗೆ ಹಾವೇರಿಯಿಂದ ಕೆಲ ರೈತರು ರಾಸುಗಳ ಖರೀದಿಗಾಗಿ ಬಂದು ರಾಸುಗಳ ಖರೀದಿಯೂ ಕೂಡ ಮಾಡಿದ್ದಾರೆ.

ನಂತರ ತಮ್ಮ ತಮ್ಮ ಊರುಗಳಿಗೆ ರಾಸುಗಳನ್ನು ರವಾನಿಸಲು ಕ್ಯಾಂಟರ್ ವಾಹನ ಒಂದನ್ನು ಬಾಡಿಗೆಗೆ ಎಂದು ಪಡೆದು ಆ ವಾಹನದಲ್ಲಿ ಸುಮಾರು 10 ರಿಂದ 15 ರಾಸುಗಳನ್ನು ತುಂಬಿ ತನ್ನ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಪ್ರಯಾಣ ಬೆಳೆಸಿದ ಕೆಲ ನಿಮಿಷಗಳಷ್ಟೇ ಕಳೆದು ಮಾಯಸಂದ್ರ ಸಮೀಪದಲ್ಲಿ ಸುಮಾರು 10 ರಿಂದ 12 ಜನ ಭಜರಂಗದಳದ ಯುವಕರು ಎಂದು ಹೇಳಿ ರಾಸುಗಳನ್ನು ತುಂಬಿದ ವಾಹನವನ್ನು ತಡೆದಿದ್ದಾರೆ.
ತಡೆದು ಈ ವಾಹನದಲ್ಲಿರುವ ರಾಸುಗಳನ್ನೆಲ್ಲ ಖಾಸಯಿಕಾನೆಗೆ ಸೇರಿಸುತ್ತಿದ್ದೀರಾ ಎಂಬ ಸುಳ್ಳು ಆರೋಪ ಮಾಡಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ನಂತರ ರಾಸು ತುಂಬಿದ ವಾಹನವನ್ನು ತುರುವೇಕೆರೆ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ರಾಸುಗಳು ತುಂಬಿದ ವಾಹನವನ್ನು ಕರೆತಂದು ದೂರು ಕೂಡ ದಾಖಲಿಸಿ ಅಲ್ಲಿಂದ ಬಜರಂಗದಳದ ಯುವಕರು ಅಲ್ಲಿಂದ ಹೊರಟಿದ್ದಾರೆ.

ನಾವುಗಳು ರೈತರು ಅಂತ ಎಷ್ಟೇ ಬೇಡಿದರು ಕೂಡ ಪೊಲೀಸರಾಗಲಿ ಬಜರಂಗದಳದವರಾಗಲಿ ರೈತರ ಮಾತಿಗೆ ಕಿವಿ ಕೊಡದೆ ಕೊನೆಗೆ ರೈತರ ವಿರುದ್ಧವೇ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ ,
ಈ ವಿಷಯ ತಿಳಿದ ಹಾಲಿ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ಪೊಲೀಸ್ ಠಾಣೆಗೆ ಧಾವಿಸಿ ನಡೆದಿರುವ ಘಟನೆಯನ್ನು ಪರಿಶೀಲನೆ ಮಾಡಲಾಗಿ ವಾಹನವನ್ನು ತಡೆದವರು ಭಜರಂಗದಳದವರೇ ಎಂದು ತಿಳಿದು
ತಕ್ಷಣ ಅವರನ್ನು ಕರೆಯಿಸಲೇಬೇಕೆಂದು ಡಿವೈಎಸ್ಪಿ ಅವರಿಗೆ ಕರೆ ಮಾಡಿ ನಡೆದಿರುವ ವಿಷಯವನ್ನು ತಿಳಿಸಿ ಈ ಕೂಡಲೇ ನಮ್ಮ ರೈತರನ್ನು ಮತ್ತು ರಾಸುಗಳನ್ನು ಬಿಡಲೇಬೇಕು ಎಂದು ರಾಸುಗಳನ್ನು ಬಿಡಿಸಿ ಪೊಲೀಸ್ ಅಧಿಕಾರಿಗಳ ದುರಾಡಳಿತವನ್ನು ವಿರೋಧಿಸಿ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ ಒಟ್ಟಾರೆ ಪ್ರತಿಭಟನೆ ನಡೆಯುವುದು ಇಲ್ಲವೋ ಕಾದು ನೋಡಬೇಕಾಗಿದೆ.
ಇದೇ ವೇಳೆ ನೂರಾರು ರೈತರು ಪೋಲಿಸ್ ಆವರಣದಲ್ಲಿ ಜಮಾಾವಣೆಗೊಂಡು ರೈತ ಪರವಾಗಿ ಆಗಮಿಸಿದ ಶಾಸಕರಿಗೆ ಜೈಕಾರ ಹಾಕಿದರು ಇದೇ ಸಮಯದಲ್ಲಿ ಆಗಮಿಸಿದ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆಲ ರೈತರೊಂದಿಗೆ ಮಾತಿನ ಚಕಮಕಿ ನಡೆದು ರೈತಾಪಿ ಯುವಕನನ್ನ ಒಳಗೆ ಕರೆದೊಯ್ದಿದ್ದಾರೆ ಇದರ ನಿಮಿತ್ತ ಅಲ್ಲೇ ಹಾಜರಿದ್ದ ಶಾಸಕರಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಒಬ್ಬ ಅಧಿಕಾರಿ ಈ ರೀತಿ ನಡೆದುಕೊಂಡಿರುವುದು ಕಂಡುಬಂದಿದ್ದು ತಕ್ಷಣ ಶಾಸಕರಾದ ಎಂಟಿ ಕೃಷ್ಣಪ್ಪ ಅವರು ಅವರ ಮೇಲಾಧಿಕಾರಿಗೆ ಕರೆ ಮಾಡಿ ಈತನನ್ನು ಈಗಲೇ ನಮ್ಮ ಠಾಣೆಯಿಂದ ಹೊರಗೆ ಕಳುಹಿಸಿ ಎಂದು ಗುಡುಗಿದ್ದಾರೆ.
ವರದಿ
ತುರುವೇಕೆರೆ: ಮಂಜುನಾಥ್ ಕೆ ಎ