Janataa24 NEWS DESK
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ ಸ್ಥಳೀಯ ಶಾಸಕ ಹೆಚ್.ವಿ ವೆಂಕಟೇಶ್.

ಪಾವಗಡ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಸಿಎಂ ಸಿದ್ದರಾಮಯ್ಯ ಅವರು ಜೂನ್ 11 ರ ನಾಳೆ ಚಾಲನೆ ನೀಡಲಿದ್ದು, ಅದೇರೀತಿಯಲ್ಲಿ ಪಾವಗಡ ಪಟ್ಟಣದಲ್ಲಿ ಮಾಜಿ ಸಚಿವರಾದ ವೆಂಕಟರಮಣಪ್ಪ ನವರು ಹಾಗೂ ಸ್ಥಳೀಯ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪಾವಗಡ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕರಾದಂತಹ ಹನುಮಂತರಾಯಪ್ಪ ಅವರು ತಿಳಿಸಿದ್ದಾರೆ.
ಮಹಿಳೆಯರಿಗಾಗಿ ಸಾರಿಗೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಜೂನ್ 11 ರ ನಾಳೆಯಿಂದ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ.
ಶಕ್ತಿ ಯೋಜನೆ ಅಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಜೂನ್ 11ರಂದು ಮಧ್ಯಾಹ್ನ 01 ಗಂಟೆಯಿಂದ ಅನ್ವಯವಾಗುವಂತೆ ಜಾರಿ ಗೊಳಿಸಲಾಗುತ್ತಿದೆ. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತಮ್ಮ ಮೂಲ ದಾಖಲಾತಿಗಳನ್ನು ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಎಲ್ಲಾ ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದನ್ನು ತೋರಿಸಿ ‘ಶೂನ್ಯ ಮೊತ್ತದ ಟಿಕೇಟ್” ಪಡೆದು ಮಹಿಳೆಯರು ಜೂನ್ 11ರ ಮಧ್ಯಾಹ್ನ 01 ಗಂಟೆಯಿಂದ ಉಚಿತ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅದೇ ರೀತಿಯಲ್ಲಿ ಗಡಿ ಪ್ರದೇಶದ ಜನರ ಗೊಂದಲವು ಸಹ ನಿವಾರಣೆ ಗೊಂಡಿದೆ.
ಪಾವಗಡ ದಿಂದ ಕರ್ನಾಟಕ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ಯಾವುದೇ ನಿಬಂಧನೆಗಳು ಇರುವುದಿಲ್ಲ.
ಪಾವಗಡ ದಿಂದ ಆಂದ್ರ ಪ್ರದೇಶಗಳ ಊರುಗಳಿಗೆ ಹೋಗಲು ನಿಬಂಧನೆಗಳು ಇರುತ್ತವೆ ಪಾವಗಡ ದಿಂದ ಕಲ್ಯಾಣದುರ್ಗ ಹಿಂದೂಪುರ. ಮಡೆಕೆಶಿರ.ಪಾವಗಡ ದಿಂದ ಕೋಲಾರ್ ಗೆ ಹೋಗಬಹುದು.
ಇತರೆ ಅಂದ್ರ ಹೋಗಲು ಸಾದ್ಯವಿಲ್ಲ.
ವರದಿ:ಇಮ್ರಾನ್ ಉಲ್ಲಾ.ಪಾವಗಡ