ಮತದಾರರೇ ಸಾರ್ವಭೌಮರು ನಾವು ಮತ ಕೇಳುವ ಭಿಕ್ಷುಕರು: ಎಸ್ ಆರ್ ಶ್ರೀನಿವಾಸ್

Janataa24 NEWS DESK

ಪ್ರಜಾಪ್ರಭುತ್ವದಲ್ಲಿ ಮತದಾರರೇ ಸಾರ್ವಭೌಮರು ನಾವು ಮತ ಕೇಳುವ ಭಿಕ್ಷುಕರು ಅಷ್ಟೇ ಮತದಾರರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

IMG 20230418 WA0024



ಗುಬ್ಬಿ :ಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಾಜಿ ಸಚಿವ ಎಸ್ ಸರ್ ಶ್ರೀನಿವಾಸ್ ರವರು ಸಾವಿರಾರು ಅಭಿಮಾನಿ ಹಾಗೂ ಬೆಂಬಲಿಗರೊಂದಿಗೆ ಸಾಂಸ್ಕೃತಿಕ ಕಲಾತಂಡದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ಆಗಮಿಸಿ ಕಾನೂನು ಚೌಕಟ್ಟಿನಲ್ಲಿ ನಾಮಪತ್ರ ಸಲ್ಲಿಸಿದರು.



ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೆಲೆ ಏರಿಕೆ ನೀತಿಯಿಂದ ಜನರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಹಾಗಾಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯನವರ ಐದು ವರ್ಷದ ಆಡಳಿತ ಬಗ್ಗೆ ತುಂಬಾ ಅರಿತಿದ್ದಾರೆ ಈಗಿನ ಕಾಂಗ್ರೆಸ್ ಪ್ರಣಾಳಿಕೆಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದಾರೆ. ಕಳೆದ ಬಾರಿ 165 ಕ್ಕೆ 165 ಆಶ್ವಾಸನೆಗಳನ್ನು ಪೂರ್ಣಗೊಳಿಸಿದ್ದಾರೆ. ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮವನ್ನು ರಾಜ್ಯದ ಜನತೆ ಮೆಚ್ಚಿಕೊಂಡಿದ್ದಾರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ.



ನನ್ನ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಅನೇಕ ಯೋಜನೆಗಳನ್ನು ನನ್ನ ಕ್ಷೇತ್ರದ ಜನಕ್ಕೆ ಪ್ರಾಮಾಣಿಕವಾಗಿ ನೀಡಿದ್ದೇನೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಹಾಗಾಗಿ ಅವರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ
ಕ್ಷೇತ್ರದಲ್ಲಿ ಯಾವ ಪಕ್ಷವು ಹೆಚ್ಚಿಲ್ಲ ಯಾವ ಪಕ್ಷವು ಕಮ್ಮಿ ಇಲ್ಲ. ಮತದಾರರು ತೀರ್ಮಾನಿಸುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಮತದಾರರೇ ಸಾರ್ವಭೌಮರು
ಅವರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ತಿಳಿಸಿದರು.



ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಬಹಳ ಹಿರಿಯ ನಾಯಕರು ಚುನಾವಣಾ ಸ್ಪರ್ಧೆ ನಡೆಸುತ್ತಿದ್ದಾರೆ ಈ ಬಾರಿ ಜಿಲ್ಲೆಯಲ್ಲಿ ಆರರಿಂದ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜ್ ಹಾಗೂ ತಾಲೂಕು ಕಾಂಗ್ರೆಸ್ ಮುಖಂಡರದ ಶಂಕರನಂದ್, ಚಿಕ್ಕ ರಂಗೇಗೌಡ, ಮಹಮ್ಮದ್ ಸಾಧಿಕ್, ಜುಂಜೇಗೌಡ, ಚಂದ್ರಶೇಖರ್, ಇತರರಿದ್ದರು.

Leave a Reply

Your email address will not be published. Required fields are marked *