ಪಾವಗಡದ 20 ಪ್ರಮುಖ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟ ಜನಸಾಮಾನ್ಯರು

Janataa24 NEWS DESK

IMG 20230515 WA0008

ಪಾವಗಡ: 2023ನೇ ಚುನಾವಣಾ ಮೊದಲ ಬಾರಿ ಗೆದ್ದಂತಹ ಕಾಂಗ್ರೆಸ್ ಅಭ್ಯರ್ಥಿ ಎಚ್‍.ವಿ ವೆಂಕಟೇಶ್ ಶಾಸಕರಾಗಿ ಮೊದಲ ಬಾರಿ ಪ್ರಮಾಣವಚನ ಸ್ವೀಕರಿಸಿತ್ತಿರುವುದು ಒಂದು ಕಡೆಯಾದರೆ ಈಗಾಗಲೇ ತಾಲೂಕಿನಲ್ಲಿ ತಮ್ಮ ತಂದೆಯವರು ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಅಭಿವೃದ್ಧಿಗೊಳಿಸಿದ್ದು ಒಂದು ಕಡೆಯಾದರೆ.
ಮತ್ತೆ ಶಾಸಕರಾಗಿ ಇತಿಹಾಸ ಸೃಷ್ಟಿ ಒಂದು ಕಡೆಯಾದರೆ ಎಚ್. ವಿ. ವೆಂಕಟೇಶ್ ಅವರಿಗೆ ಮುಂದಿನ ತಾಲೂಕಿನ ಅಭಿವೃದ್ಧಿ ಹಂತಗಳ ಜವಾಬ್ದಾರಿ ಹೆಚ್ಚಾಗಿವೆ.

ಶಾಸಕರ ಮುಂದೆ ತಾಲೂಕು ಅಭಿವೃದ್ಧಿಗಳು ಸಾಲು ಸಾಲಾಗಿ ನಿಂತಿವೆ.



ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಹಲವು ಪ್ರಶ್ನೆಗಳು:
ಪಾವಗಡ ವಿಧಾನಸಭಾ ಕ್ಷೇತ್ರದ ಜನತೆಗೆ ಕಳೆದ 75 ವರ್ಷಗಳಿಂದ ಆಳಿದ ನಾಯಕರೆಲ್ಲ ಕೆಲವೇ ಕೆಲವು ಮೂಲಭೂತ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾವಗಡ ವಿಧಾನಸಭಾ ಕ್ಷೇತ್ರದ ಜನತೆಗೆ
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಎಷ್ಟರಮಟ್ಟಿಗೆ ಅಭಿವೃದ್ಧಿ ಗೊಳಿಸುತ್ತಾರೆ ಎಂಬ ಪ್ರಶ್ನೆಗಳು:


1. ಪಾವಗಡ ತಾಲ್ಲೂಕಿಗೆ ಬೈಪಾಸ್ ರಸ್ತೆ ಇಲ್ಲದಿರುವುದೇಕೆ?


2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡುವಲ್ಲಿ ವಿಫಲ ಹಾಗೂ ತುಮಕೂರು ಜಿಲ್ಲೆಗೆ ಸೇರಿದ್ದ ಪಾವಗಡ ವಿಧಾನಸಭಾ ಕ್ಷೇತ್ರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋವನ್ನು ತಾರತಮ್ಯವೆಸಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಸಿ ತಾಲ್ಲೂಕಿನ ಜನತೆಗೆ ಮಾಡಿರುವ ಅನ್ಯಾಯ.


3. ಪಾವಗಡ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯದ ಗಡಿನಾಡಿನ ತಾಲ್ಲೂಕು ಇಲ್ಲಿ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸದೇ ಕನ್ನಡ ಸಂಸ್ಕೃತಿಯನ್ನು ಉಳಿಸಲು ಕನ್ನಡ ಭವನ ನಿರ್ಮಿಸದೇ ನಾಡಿನ ಸಂಸ್ಕೃತಿಗೆ ಒತ್ತು ಕೊಡದೇ ವಿಫಲರಾಗಿದ್ದಾರೆ.


4. ಕ್ಷೇತ್ರದ ಜನತೆ ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ 33 ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಕಾರ್ಯರೂಪಕ್ಕೆ ಬಂದ ಯೋಜನೆಯನ್ನು ರಾಜಕೀಯೇತರ ಅಭ್ಯರ್ಥಿಗಳು ತಾವೊಬ್ಬರೇ ಹೋರಾಡಿ ನಿಮಗೆ ಬಳುವಳಿಯಾಗಿ ಕೊಟ್ಟಿದ್ದೇವೆ ಎಂದು ಬಹಿರಂಗ ಸಭೆಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ.


5. ಕ್ಷೇತ್ರದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು ಯುವ ಜನತೆಗಾಗಿ ಕಳೆದ 30 ವರ್ಷಗಳಿಂದ ಉದ್ಯೋಗ ಕಲ್ಪಿಸದೇ ಗುಳೆ ಹೋದರೂ ತಲೆ ಕೆಡಿಸಿಕೊಳ್ಳದೇ ಈಗ ಗುಳೆ ಹೊರಟ ಸ್ಥಳಗಳಿಗೆ ಭೇಟಿ ಕೊಟ್ಟು ಮತಯಾಚನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.


6. ಪಾವಗಡ ಕ್ಷೇತ್ರದ ಕೇಂದ್ರ ಹೃದಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಜನ ಸಂಚಾರ ಮಾಡುತ್ತಿದ್ದು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ, ಕುಡಿಯುವ ನೀರು ಇಲ್ಲದಿರುವುದು ಕ್ಷೇತ್ರದ ಜನತೆಯ ದೌರ್ಭಾಗ್ಯವೇ ಸರಿ.


7. ಕ್ಷೇತ್ರದ ಜನತೆ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ರೋಗಗಳಿಗೆ ತುತ್ತಾದರೇ ಚಿಕಿತ್ಸೆಗಾಗಿ ರಾಜ್ಯದ ರಾಜಧಾನಿಗೆ ಹೋಗುವ ಪರಿಸ್ಥಿತಿ.ಅದೆಷ್ಟೋ ಜನ ರಸ್ತೆ ಮಾರ್ಗ ದಲ್ಲಿ ಮೃತಪಡುತ್ತಿದ್ದಾರೆ.


8. ಕ್ಷೇತ್ರ ಸುತ್ತಲೂ ಆಂಧ್ರದ ಗಡಿಭಾಗಗಳಿಂದ ಆವರಿಸಿಕೊಂಡಿದ್ದು ಕ್ಷೇತ್ರದಿಂದ ಜಿಲ್ಲಾ ಹಾಗೂ ರಾಜ್ಯ ಕೇಂದ್ರ ಸ್ಥಾನಗಳಿಗೆ ಪ್ರಯಾಣ ಬೆಳೆಸಬೇಕೆಂದರೆ, 17 ಕಿ.ಮೀ. ಆಂಧ್ರಪ್ರದೇಶ ಬರುತ್ತದೆ. ಇಲ್ಲಿನ ಸಾರಿಗೆ ಅಧಿಕಾರಿಗಳು ಸಾವಿರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಇದರಿಂದ ಖಾಸಗಿ ಬಸ್, ಲಾರಿ, ಕಾರು, ಆಟೋ ಮಾಲೀಕರು ಮತ್ತು ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ವಿಧಿಸುವ ದಂಡಕ್ಕೆ ವಾಹನವನ್ನು ಮಾರಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ.


9. ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಡಿಪ್ಲಾಮೋ, ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಪದವಿ ಕಾಲೇಜುಗಳು ಇಲ್ಲದೇ ತಾಲ್ಲೂಕಿನ ಪ್ರತಿಭಾವಂತ ವಿದ್ಯಾವಂತರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.


10. ಕ್ಷೇತ್ರದ ಕೇಂದ್ರಸ್ಥಾನದಲ್ಲಿ ಇಲಾಖೆಗಳ ಅಧಿಕಾರಿಗಳಿಗೆ ವಸತಿಗಳು ಇಲ್ಲದ ಕಾರಣ ಹಲವು ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿರುವುದಿಲ್ಲ.


11. ಕ್ಷೇತ್ರದ ಆರಕ್ಷಕ ಠಾಣೆಗಳು ಅಭದ್ರತೆಯಿಂದ ಕೂಡಿದ್ದು ಶಿಥಿಲಾವಸ್ಥೆಯಲ್ಲಿದರೂ ಸಹ ಆರಕ್ಷಕರಿಗೆ ಠಾಣೆಗಳಲ್ಲಿ ಅಭದ್ರತೆಯ ಅಳುಕುನಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ.


12. ತಾಲ್ಲೂಕು ದಂಡಾಧಿಕಾರಿ ಕಛೇರಿಗೆ ಸರ್ಕಾರಿ ಸೌಲಭ್ಯ ಕೋರಿ ಭೇಟಿ ನೀಡುವ ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಇಲ್ಲದೇ ಪರದಾಡುವ ಪರಿಸ್ಥಿತಿ.


13. ಕ್ಷೇತ್ರದ ಅತ್ಯಂತ ಪುರಾತನ ಇತಿಹಾಸವುಳ್ಳ ಪ್ರಸಿದ್ಧ ದೇವಾಲಯಗಳಿಗೆ ಜೀರ್ಣೋದ್ಧಾರ ಕಲ್ಪಿಸದೆ ಕಡೆಗಣಿಸಿ ದುಸ್ಥಿತಿಯ ಅವನ್ನತಿಗೆ ತಲುಪಿವೆ.


14. ಕ್ಷೇತ್ರದ ಮಲೆನಾಡೆಂದೆ ಪ್ರಖ್ಯಾತಿ ಪಡೆದಿರುವ ನಿಡಗಲ್ ದುರ್ಗವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕಾಗಿದೆ.


15. ಕ್ಷೇತ್ರದ ತಿರುಮಣಿ ಬಳಿ ವಿಶ್ವವಿಖ್ಯಾತಿ ಸೋಲಾರ್ ಪಾರ್ಕ್ನಲ್ಲಿ ಸ್ಥಳೀಯ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸದೇ ಇತರೆ ರಾಜ್ಯದವರಿಗೆ ಉದ್ಯೋಗ ಕಲ್ಪಿಸಿ ಸ್ಥಳೀಯರಿಗೆ ಅನ್ಯಾಯವೆಸಗಿದ್ದಾರೆ.



16.ಪಾವಗಡ ತಾಲೂಕಿನಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ನುರಿತ ವೈದ್ಯರನ್ನು ನೇಮಿಸುವುದು.ಸ್ಥಳೀಯ ವೈದ್ಯರನ್ನು ಎತ್ತಂಗಡಿ ಮಾಡಿ ನುರಿತ ವೈದ್ಯರನ್ನು ನೇಮಿಸಿ ಉತ್ತಮ ಆರೋಗ್ಯ ಸೇವೆ ನೀಡುವಂತಾಗಬೇಕು.



17.ತಾಲೂಕಿನ ಯಾವುದೇ 36 ಇಲಾಖೆಗಳಲ್ಲಿ ಜಾತಿ ಆಧಾರಿತದಲ್ಲಿ ಅಧಿಕಾರಿಗಳ ನೇಮಿಸದೆ ಉತ್ತಮ ಅಧಿಕಾರಿಗಳನ್ನು ನೇಮಿಸುವಂತಾಗಬೇಕು.



18. ಅರಸಿಕೆರೆ ಗ್ರಾಮದಲ್ಲಿ ನೆನೆಗುದಿಗೆ ಬಿದ್ದಂತಹ ಆದರ್ಶ ಶಾಲೆ ಪ್ರಾರಂಭ ಮಾಡುವುದು.



19.ಸಂತೆ ಸಮಸ್ಯೆ ನೀಗಿಸಬೇಕು.

20.ಈ ಹಿಂದೆ ಮಾಜಿ ಸಚಿವ ಹಾಲಿ ಶಾಸಕರಾದ ವೆಂಕಟರಮಣಪ್ಪ ರವರ ಅವಧಿಯಲ್ಲಿ ಬಹಳಷ್ಟು ಕಾಮಗಾರಿಗಳ ಗುದ್ದಲಿ ಪೂಜೆ ಆಗಿರುವಂತಹ ಕಾಮಗಾರಿಗಳು ಇನ್ನೂ ಪ್ರಾರಂಭವೇ ಆಗಿಲ್ಲ ಅವು ಪ್ರಾರಂಭಗೊಳಿಸುವುದು ಒಂದು ಜವಾಬ್ದಾರಿ ಇವರ ಮೇಲಿದೆ.



ಇಷ್ಟೆಲ್ಲಾ ಸಮಸ್ಯೆಗಳು ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಭಯಸಿದ ತಾಲೂಕಿನ ಜನತೆ. 2023 ರ ಸಾರ್ವತ್ರಿಕ ಚುನವಣಾ ರಾಜ್ಯದಲ್ಲಿ ಏಕಪಕ್ಷಿಯವಾಗಿ ಅಧಿಕಾರ ಮಾಡಲು ಮತದಾರರು ಅವಕಾಶ ಕಲ್ಪಿಸಿದ್ದಾರೆ.



ಈ ಭಾಗದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಯುವಕರು ತಂದೆ ಮಾಜಿ ಸಚಿವ ವೆಂಕಟರಮಣಪ್ಪ ರವರ ಹಾದಿಯಲ್ಲಿ ರಾಜಕೀಯ ಪಾಠ ಕಲಿತ್ತಿದ್ದಾರೆ.



ತಾಲೂಕಿನ ಅಭಿವೃದ್ಧಿ ಯಲ್ಲಿ ಯಾರ ಅಭಿಪ್ರಾಯಗಳನ್ನು ಪಡೆಯದೆ ಖುದ್ದು ತಾವೇ ತಾಲೂಕಿನ ಅಭಿವೃದ್ಧಿ ಬಗ್ಗೆ ಗಮನಿಸಿ ಈಗಾಗಲೇ ಜಿಲ್ಲಾ ಪಂಚಾಯತಿ ಸದಸ್ಯ ರಾಗಿ ಆಯ್ಕೆ ಯಾಗಿ ಜನರ ಸೇವೆ ಮಾಡಿದ ಅನುಭವ ಇದೇ. ಈ ಹಿಂದೆ ಅವರೇ ತಿಳಿದುಕೊಂಡಿರುವ ರೀತಿಯಲ್ಲಿ ಅಭಿವೃದ್ಧಿ ಗೂಳ್ಳಿಸಬೇಕು ಎಂಬುದು ಈ ಭಾಗದ ಪ್ರಜ್ಞಾವಂತ ನಾಗರಿಕರ ಮಾತಗಿದೆ.



ತಮ್ಮದೇ ಯಾದ ರೀತಿಯಲ್ಲಿ ಜನರ ಸಮಸ್ಯೆ ಬಗೆಹರಿಸಬೇಕು ತಾಲೂಕು ಅಭಿವೃದ್ಧಿಗೆ ಪಾತ್ರರಾಗಬೇಕು.ಐದು ವರ್ಷ ಅಭಿವೃದ್ಧಿ ಮಾಡಿ ಮತ್ತೆ ಇನ್ನೊಮ್ಮೆ2028 ರ ಚುನಾವಣೆಗೆ ಅವಕಾಶ ನೀಡಿ ಎಂಬುದಾಗಿ ಜನರ ಮುಂದೆ ಹೋಗಿ ಕೇಳುವಂತಾಗಬೇಕು.

ವರದಿ

ಪಾವಗಡ: ಇಮ್ರಾನ್ ಉಲ್ಲಾ.

Leave a Reply

Your email address will not be published. Required fields are marked *