Janataa24 NEWS DESK

ಗುಬ್ಬಿ: ನಿಟ್ಟೂರು ಬೆಸ್ಕಾಂ ಕಚೇರಿಯಲ್ಲಿ ರೈತರಿಗೆ ಸಾಮಾನ್ಯ ಜನರಿಗೆ ಸ್ಪಂದನೆ ನೀಡುತ್ತಿಲ್ಲ.
ಲಂಚ ನೀಡಿದವರಿಗೆ ಸ್ಪಂದನೆ ನೀಡುತ್ತಿದ್ದಾರೆ ಇದಕ್ಕೆಲ್ಲ ನೇರ ಕಾರಣ ಎ ಇ ಇ ಅನಿಲ್ ಕುಮಾರ್ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
10 ದಿವನಗಳ ಹಿಂದೆ ಮನೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಬೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು.ಬೆಸ್ಕಾಂ ಇಲಾಖೆಯವರು ಯಾವುದೇ ಉತ್ತರವನ್ನು ನೀಡದೆ ಇರುವುದರಿಂದ ವಿಚಾರಿಸಲೆಂದು ಬೆಸ್ಕಾಂ ಕಚೇರಿಗೆ ಹೋದಾಗ ಎ ಇ ಇ ಅನಿಲ್ ಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಲಂಚ ಕೊಡಲು ನಿರಾಕರಿಸಿದಾಗ ಅಧಿಕಾರದ ದರ್ಪದಿಂದ ಏಕವಚನದಲ್ಲಿ ನಿಂದಿಸಿ ಅವಮಾನಿಸಿದ್ದಾರೆ. ರೈತರಿಗೆ ಸ್ಪಂದಿಸದ ಅಧಿಕಾರಿ ವಿರುದ್ಧ ಮೇಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ನಿಟ್ಟೂರು ರಂಗಸ್ವಾಮಿ ಹರಿಹಾಯ್ದರು.
ನಂತರ ಬೊಮ್ಮರಸನಹಳ್ಳಿಯ ರೈತ ಮುಖಂಡರು ಎ ಇ ಇ ಅನಿಲ್ ಕುಮಾರ್ ಅತ್ತಿರ ಮಾತನಾಡಿ ಕಳೆದ ತಿಂಗಳ ಹಿಂದೆ ಐ ಪಿ ಸಿ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದ್ದು ಬೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಬಾರದೆ ವಿಚಾರಣೆ ನಡೆಸದೆ ಕೆಲಸಕ್ಕೆ ಮೀನಾ ಮೇಷ ವೇಣುಸುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಲಕ್ಷಾಂತರ ಮೌಲ್ಯದ ರೈತರ ಬೆಳೆಗಳು ಹಾಳಾಗುತ್ತಿವೆ. ಇದೇ ರೀತಿ ಮುಂದುವರೆದರೆ ರೈತರು ರೈತ ಮುಖಂಡರು ಬೆಸ್ಕಾಂ ಕಚೇರಿಯ ಮುಂದೆ ಪ್ರತಿಭಟಿಸುವುದಾಗಿ ತಿಳಿಸಿದರು.
ನಿಟ್ಟೂರು ಬೆಸ್ಕಾಂ ಅಧಿಕಾರಿ ಎ ಇ ಇ ಅನಿಲ್ ಕುಮಾರ್ ಅವರ ಮೇಲೆ ಸಾಕಷ್ಟು ವಿವಾದಗಳು ಅಧಿಕಾರ ದುರ್ಬಳಕೆ ಕರ್ತವ್ಯ ಲೋಪ ಪ್ರಕರಣ ಗಳಿದ್ದರು. ಉನ್ನತ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಅನಿಲ್ ಕುಮಾರ್ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಹಲವಾರು ರೈತರು ಕಿಡಿಕಾರಿದರು.
ಅನಿಲ್ ಕುಮಾರ್ ಅವರು ಮಾಧ್ಯಮದವರೊಂದಿಗೂ ಅನುಚಿತ ವರ್ತನೆ ತೋರುತ್ತಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕುಂದರನಹಳ್ಳಿ ನಟರಾಜ್, ಜಿ ಹರಿವೇಸಂದ್ರ ಕೃಷ್ಣಪ್ಪ, ಚಂದ್ರಶೇಖರ್, ಮಣಿಕಂಠ, ಅನೇಕ ರೈತ ಮುಖಂಡರಿದ್ದರು.
ವರದಿ
ಗುಬ್ಬಿ: ಶ್ರೀಕಾಂತ