Document

ದಿವ್ಯಾ ಅತ್ಯಾಚಾರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಕರುನಾಡು ಯುವಶಕ್ತಿ ಮನವಿ

ವರದಿ: ಎಸ್. ಕಾಂತರಾಜ್ ಮೌರ್ಯ -ಗುಂಡ್ಲುಪೇಟೆ

ಗುಂಡ್ಲುಪೇಟೆ: ಕಳೆದ ಎರಡು ದಿನಗಳ ಹಿಂದೆ ಮಂಡ್ಯ ದ ಮಳವಳ್ಳಿ ಯಲ್ಲಿ ದಿವ್ಯಾ ಎಂಬ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಚಾರಮಾಡಿ ಕೊಲೆ ಮಾಡಿರುವ ಕಾಮುಕನಿಗೆ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರುನಾಡು ಯುವಶಕ್ತಿ ಸಂಘಟನೆ ತಾಲ್ಲೂಕು ಕಚೇರಿ ಮುಂದೆ ಕಾನೂನಿನಲ್ಲಿ ಇಂತಹ ವಿಕೃತ ಕಾಮಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಸರ್ಕಾರ ಕೂಡ ಇಂತಹ ಕಾಮುಕರ ವಿರುದ್ದ ಗಲ್ಲು ಶಿಕ್ಷೆ ನೀಡಬೇಕು ಎಂದು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ನಂತರ ದಿವ್ಯಾ ಗೆ ಶ್ರದ್ದಾಂಜಲಿ ಸಲ್ಲಿಸಿ ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ಭಗವಂತರ ನೀಡಲಿ ಎಂದರು. ಈ ಸಂದರ್ಭದಲ್ಲಿ ಕರುನಾಡು ಯುವಶಕ್ತಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತಾಲ್ಲೂಕು ಅಧ್ಯಕ್ಷ ಮುನೀರ್ ಪಾಷ, ಈಶ್ವರ್ ತೆರಕಣಾಂಬಿ, ಹನುಮಂತರಾಜು, ಯೋಗೇಶ್, ಶಿವಕುಮಾರ್ ,ರೆಹಮತ್ ಉಲ್ಲಾ ಖಾನ್, ಸಿದ್ದರಾಜು, ಅನ್ಸರ್, ಮತ್ತಿತರರಿದ್ದರು.

Document

Leave a Reply

Your email address will not be published. Required fields are marked *