ತುರುವೇಕೆರೆ:ಮಂಜುನಾಥ್

ತುರುವೆಕೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕನಸಿನ ಕೂಸು, ಮತ್ತು ರಾಜ್ಯಕ್ಕೆ ಉತ್ತಮ ಗುಣಮಟ್ಟದ ವ್ಯವಸ್ಥಿತ ಶಿಕ್ಷಣ ,ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ 24 ಗಂಟೆಗಳ ಕಾಲ ಸುಸಜ್ಜಿತ ಹೈಟೆಕ್ ಆಸ್ಪತ್ರೆ, ರೈತರಿಗೆ ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ, ರೈತರಿಗೆ ಲಾಭದಾಯಕ ಮಾರುಕಟ್ಟೆ ವ್ಯವಸ್ಥೆ, ಮತ್ತು ಉದ್ಯೋಗ ಕಲ್ಪಿಸುವ, ಉದ್ದೇಶವಿರುವ ಕನಸಿನ ಕೂಸು ಪಂಚರತ್ನ ರಥಯಾತ್ರೆ ಇಂದು ತುರುವೇಕೆರೆ ತಾಲೂಕಿನ ಕೋಡಿ ನಾಗಸಂದ್ರ ಟಿಬಿ ಕ್ರಾಸ್ ಸರ್ಕಲ್ ನಲ್ಲಿ ಪ್ರಾರಂಭವಾಗಿ ತುರುವೇಕೆರೆ ಪಟ್ಟಣಕ್ಕೆ ಬಂದು ತಲುಪಿತು.
ಈ ವೇಳೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರುಗಳು ಸೇರಿ ಬಹಳ ಅದ್ದೂರಿಯಾಗಿ, ಪಂಚರತ್ನ ಯಾತ್ರೆ ರಥಗಳನ್ನು ಬರಮಾಡಿಕೊಂಡರು, ಇನ್ನು ಈ ರಥಯಾತ್ರೆ ವೇಳೆ ಬಹಳ ವಿಜೃಂಭಣೆಯಿಂದ ಎಚ್ ಡಿ ಕುಮಾರಸ್ವಾಮಿ ಅವರಿಗೆ 15 ರಿಂದ 20 ಅಡಿಗಳಷ್ಟು ದೊಡ್ಡ ದೊಡ್ಡ ಹೊಂಬಾಳೆ ಹಾರ, ತುಳಸಿ ಮತ್ತು ಸೇಬಿನ ಹಾರ, ಹಾಗೂ ಎಳನೀರು ಹಾರ, ಕುಂಬಳಕಾಯಿ ಹಾರ, ರಾಗಿ ತೆನೆಯ ಹಾರ, ಕೊಬ್ಬರಿ ಹಾರಗಳನ್ನು ಹಾಕಿ ಹೂವಿನ ಮಳೆಯನ್ನು ಸುರಿಸಿ ಬಹಳ ವಿಶೇಷವಾಗಿ ಸಾವಿರಾರು ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಪಟ್ಟಣಕ್ಕೆ ಬರಮಾಡಿಕೊಂಡರು.
ಇದೆ ವೇಳೆ ಎಲ್ಲರನ್ನೂ ಕುರಿತು ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ನಮ್ಮ ಪಕ್ಷದ ಇದೆ ತಾಲೂಕಿನ ಮಾಜಿ ಶಾಸಕರನ್ನು ಅತಿಹೆಚ್ಚಿನ ಮತದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ನಂತರ ನಮ್ಮ ಪಕ್ಷ ಬಹುಮತದಿಂದ ಗೆಲುವು ಸಾಧಿಸಿ ನಮ್ಮ ಸರ್ಕಾರ ಬಂದರೆ,
ಮೊದಲನೆಯದಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ 30 ಹಾಸಿಗೆ ಉಳ್ಳ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿ, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಡಾಕ್ಟರ್ ಕೂಡ ಅಲ್ಲೇ ತಂಗಲು ವ್ಯವಸ್ಥೆಯನ್ನು ಮಾಡಲಾಗುವುದು,
ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ನಡೆಸಲಾಗುವುದು, ಇನ್ನು ಶಿಕ್ಷಣದ ವ್ಯವಸ್ಥೆಯಾಗಿ ಪ್ರತಿ ಶಾಲೆಯಲ್ಲಿ ಯುಕೆಜಿ ಇಂದ 12ನೇ ತರಗತಿಯವರೆಗೂ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಿ ಕನ್ನಡ ಮತ್ತು ಇಂಗ್ಲಿಷ್ ತರಗತಿಗಳನ್ನು ಪ್ರಾರಂಭ ಮಾಡಲಾಗುವುದು, ನೀವುಗಳು ಯಾವ ಮಾಧ್ಯಮದಲ್ಲಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬುದನ್ನು ನಿಮ್ಮಗಳ ಇಚ್ಛೆಗೆ ಬಿಟ್ಟು ನೀವುಗಳೇ ಆಯ್ಕೆ ಮಾಡಿ ಕೊಳ್ಳಿ ಎಂದರು.
ಇನ್ನು ರೈತರಿಗೆ ಮುಂಗಾರಿನಲ್ಲಿ ಒಂದು ಎಕರೆ ಜಮೀನಿಗೆ ರೈತ ಅದಕ್ಕೆ ಬೇಕಾದ ಗೊಬ್ಬರ ಹಾಗೂ ಬೆಳೆಗಳಿಗೆ ಸಂಬಂಧಿಸಿದಂತೆ ಯಾವುದೇ ಆಗಲಿ ಅದನ್ನು ಖರೀದಿಸಲು ನೀವು ಕಟ್ಟುವ 40% ತೆರಿಗೆ ಹಣವನ್ನು ನಿಮ್ಮಗಳಿಗೆ ಪ್ರತಿ ಮುಂಗಾರಿಗೆ ಒಂದು ಎಕರೆಗೆ 10,000 ರೂ ನಿಮ್ಮ ಮನೆ ಬಾಗಿಲಿಗೆ ಬಂದು ಸೇರುವ ವ್ಯವಸ್ಥೆ ನಮ್ಮ ಸರ್ಕಾರ ಮಾಡುತ್ತದೆ ಎಂದರು.
ನಮ್ಮ ಪಕ್ಷವನ್ನು ಬೆಂಬಲಿಸಿ ಬಹುಮತದಿಂದ ಆಯ್ಕೆ ಮಾಡಿ ಬೇಕಾದರೆ ಒಂದು ಬಾರಿ ಪರೀಕ್ಷೆ ಮಾಡಿ ನೋಡಿ ಎಂದು ಹೇಳಿದರು ಇನ್ನು ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ, ಜೆಡಿಎಸ್ ಮುಖಂಡ ಬಾಣಸಂದ್ರ ರಮೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಚಂದ್ರೇಶ್, ಇನ್ನು ಅನೇಕ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು, ಸಾರ್ವಜನಿಕರು, ಈ ಕಾರ್ಯಕ್ರಮದ ಸ್ಥಳದಲ್ಲಿ ಉಪಸ್ಥಿತರಿದ್ದರು.