ತುರುವೇಕೆರೆಯಿಂದ ಎಎಪಿ ಅಭ್ಯರ್ಥಿಯಾಗಿ ನಟ ಟೆನ್ನಿಸ್‌ ಕೃಷ್ಣ..!

ಈ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಎಎಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿ ಹಾಸ್ಯ ನಟ ಟೆನ್ನಿಸ್ ಕೃಷ್ಣ .

VideoCapture 20230217 032121

ತುರುವೇಕೆರೆ: ಮಂಜುನಾಥ್


ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಎ ಎ ಪಿ ಪಕ್ಷದಿಂದ ಮಾಧ್ಯಮ ಪತ್ರಿಕಾಗೋಷ್ಠಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ ಅವರು ನಮ್ಮ ತುರುವೇಕೆರೆ ತಾಲ್ಲೂಕು ಅನೇಕ ಕಲಾವಿದರನ್ನು ನಮ್ಮ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದೆ, ಇಂತಹ ಜಾಗದಲ್ಲಿ ನಾನು ಒಬ್ಬ ಕಲಾವಿದನಾಗಿ ಈ ತಾಲೂಕಿನಲ್ಲಿ ಕೆಲಸ ಮಾಡಲು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದೇನೆ.


ಜೊತೆಗೆ ನಮ್ಮ ಪಕ್ಷವಾದ ಎ ಎ ಪಿ (AAP) ಪಕ್ಷದ ನಾಯಕರಾದ ಅರವಿಂದ ಕೇಜ್ರಿವಾಲ್(Arvindh kejriwal) ಅವರ ಅಭಿವೃದ್ಧಿಯ ಚಿಂತನೆ ಜೊತೆಗೆ, ಅಭಿವೃದ್ಧಿ ಮಾಡಿರುವಂತಹ ಕೆಲಸಗಳನ್ನು ನೋಡಿ ಇದು ಬಡವರ ಪರವಾಗಿ ಇರುವ ಒಳ್ಳೆಯ ನಾಯಕತ್ವದ ಪಕ್ಷವಾಗಿದ್ದು ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷ ಇದಾಗಿದೆ. ಕೇಜ್ರಿವಾಲ್ ರವರ ನಾಯಕತ್ವದಲ್ಲಿ ನಾವುಗಳು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಜೊತೆಗೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ಬಿಡುವುದಿಲ್ಲ , 5,000 ರೂ ಬೆಂಬಲ ಬೆಲೆಯನ್ನು ಕೊಬ್ಬರಿಗೆ ನೀಡಬೇಕು ಎಂದು ಸರ್ಕಾರಕ್ಕೆ ನಮ್ಮ ಪಕ್ಷದಿಂದ ಒತ್ತಾಯಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎ ಎ ಪಿ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಡಾ.ವಿಶ್ವನಾಥ್, ಖಜಾಂಚಿ ಕೃಷ್ಣಮೂರ್ತಿ, ಪ್ರೇಮಕುಮಾರಿ, ಪ್ರಭುಸ್ವಾಮಿ, ರುಜ್ವಾನ ಬಾನು, ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಮಧು, ಇನ್ನೂ ಅನೇಕ ಎ ಎ ಪಿ ಪಕ್ಷದ ತಾಲೂಕು ಮುಖಂಡರುಗಳು ಹಾಜರಿದ್ದರು.

Leave a Reply

Your email address will not be published. Required fields are marked *